Site icon Vistara News

Bangladesh Unrest: ಬಾಂಗ್ಲಾದಲ್ಲಿ ಹಿಂದೂಗಳ ಬರ್ಬರ ಹತ್ಯೆ, ದೇಗುಲಗಳಿಗೆ ಬೆಂಕಿ, ಮಹಿಳೆಯರ ಮೇಲೂ ದೌರ್ಜನ್ಯ; ಇಲ್ಲಿವೆ ವಿಡಿಯೊಗಳು

Bangladesh unrest

ಢಾಕಾ: ದಂಗೆ ಪೀಡಿತ ಬಾಂಗ್ಲಾದೇಶದಲ್ಲಿ ಹಿಂಸಾಚಾರ(Bangladesh Unrest), ಲೂಟಿ, ದರೋಡೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಅಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳ ಪಾಡು ಹೇಳುವವರಿಲ್ಲ…ಕೇಳುವವರಿಲ್ಲ ಎಂಬಂತಾಗಿದೆ. ಅದರಲ್ಲೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್‌ ಹಸೀನಾ(Sheikh Hasina) ದೇಶದಿಂದ ಪಲಾಯಣ ಮಾಡಿರುವ ಬೆನ್ನಲ್ಲೇ ಹಿಂದೂಗಳನ್ನು ಗುರಿಯಾಗಿ ಎಗ್ಗಿಲ್ಲದೇ ದಾಳಿ ನಡೆಯುತ್ತಿದೆ. ಸಾಲದೆನ್ನುವಂತೆ ಉದ್ರಿಕ್ತ ಪ್ರತಿಭಟನಾಕಾರರು ಹಿಂದೂ ದೇಗುಲಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ.

ಮತ್ತೊಂದೆಡೆ ಬಾಂಗ್ಲಾದೇಶದ ಮುಸ್ಲಿಂ ಧರ್ಮಗುರುಗಳು ಕುಮಿಲ್ಲಾದಲ್ಲಿನ ಹಿಂದೂ ದೇವಾಲಯವನ್ನು ಕಾಪಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಢಾಕಾದಲ್ಲಿರುವ ಢಾಕೇಶ್ವರಿ ಮಂದಿರವನ್ನು ವಿದ್ಯಾರ್ಥಿಗಳ ಗುಂಪು ರಕ್ಷಿಸುತ್ತಿರುವುದನ್ನು ಮತ್ತೊಂದು ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಾಂಗ್ಲಾದೇಶದ ಪತ್ರಿಕೆಗಳ ವರದಿ ಪ್ರಕಾರ 27 ಜಿಲ್ಲೆಗಳಲ್ಲಿ ಹಿಂದೂಗಳ ವ್ಯಾಪಾರ ಮಳಿಗೆ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ. ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಇನ್ನು ಜಮಾತ್‌-ಎ- ಇಸ್ಲಾಮಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದನ್ನು ಒಪ್ಪಿಕೊಂಡಿದೆ.

ಇಸ್ಕಾನ್‌ ದೇಗುಲದ ಮೇಲೆ ದಾಳಿ

ಬಾಂಗ್ಲಾದೇಶದ ಖುಲ್ನಾ ವಿಭಾಗದಲ್ಲಿರುವ ಮೆಹೆರೆಪುರದಲ್ಲಿರುವ ಇಸ್ಕಾನ್‌ ದೇಗುಲದ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅಲ್ಲದೇ ಅಲ್ಲಿರುವ ಕಾಳಿ ಮಂದಿರವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಇಸ್ಕಾನ್ ವಕ್ತಾರ ಯುಧಿಸ್ತಿರ್ ಗೋವಿಂದ ದಾಸ್ ಟ್ವೀಟ್‌ ಮಾಡಿದ್ದು, ಮೆಹರ್‌ಪುರದಲ್ಲಿರುವ ನಮ್ಮ ಇಸ್ಕಾನ್ ಕೇಂದ್ರಗಳಲ್ಲಿ ಒಂದನ್ನು (ಬಾಡಿಗೆಗೆ ನೀಡಲಾಗಿದೆ) ಭಗವಾನ್ ಜಗನ್ನಾಥ, ಬಲದೇವ್ ಮತ್ತು ಸುಭದ್ರಾ ದೇವಿ ದೇವತೆಗಳನ್ನು ಸುಟ್ಟು ಹಾಕಲಾಯಿತು. ಕೇಂದ್ರದಲ್ಲಿ ವಾಸವಾಗಿದ್ದ ಮೂವರು ಭಕ್ತರು ಹೇಗಾದರೂ ತಪ್ಪಿಸಿಕೊಂಡು ಬದುಕುಳಿದರು ಎಂದಿದ್ದಾರೆ.

ಪ್ರತಿಭಟನೆಯ ಪ್ರಾರಂಭವಾಗುತ್ತಿದ್ದಂತೆ ರಂಗ್‌ಪುರ ಸಿಟಿ ಕಾರ್ಪೊರೇಷನ್‌ನ ಹಿಂದೂ ಕೌನ್ಸಿಲರ್ ಹರದನ್ ರಾಯ್ ಕೂಡ ಭಾನುವಾರ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ. ಕಾಜಲ್ ರಾಯ್ ಎಂದು ಗುರುತಿಸಲಾದ ಮತ್ತೊಬ್ಬ ಕೌನ್ಸಿಲರ್ ಕೂಡ ಹಲ್ಲೆಗೊಳಗಾಗಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಕಾರರು ಶೇಖ್ ಹಸೀನಾ ಅವರ ರಾಜೀನಾಮೆಗೆ ಕರೆ ನೀಡಿದರು ಮತ್ತು ಪೊಲೀಸರೊಂದಿಗೆ ಘರ್ಷಣೆಯಲ್ಲಿ ಭಾನುವಾರ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

ಇದನ್ನೂ ಓದಿ: Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Exit mobile version