ಢಾಕಾ: ಉದ್ಯೋಗ ಮೀಸಲಾತಿ(Job Reservation) ವಿಚಾರವಾಗಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ(Bangladesh Violence) ಬರೋಬ್ಬರಿ 35 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಮೀಸಲಾತಿ ವಿಚಾರವಾಗಿ ವಿದ್ಯಾರ್ಥಿಗಳು ರಾಷ್ಟ್ರವ್ಯಾಪಿ ಕರೆ ನೀಡಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತ್ತು. ಇನ್ನು ಉದ್ರಿಕ್ತ ಪ್ರತಿಭಟನಾಕಾರರು ಢಾಕಾದಲ್ಲಿರುವ ಟಿವಿ ಪ್ರಧಾನ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಲಿದೆ ಎಂದು ಕಾನೂನು ಸಚಿವ ಅನಿಸುಲ್ ಹಕ್ ಹೇಳಿದ್ದಾರೆ
ಅನೇಕ ದಿನಗಳಿಂದ ಪ್ರತಿಭಟನಾಕಾರರು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತ ಪಕ್ಷವಾದ ಅವಾಮಿ ಲೀಗ್ನ ವಿದ್ಯಾರ್ಥಿ ಘಟಕದ ಸದಸ್ಯರೊಂದಿಗೆ ವಿದ್ಯಾರ್ಥಿಗಳು ಘರ್ಷಣೆ ನಡೆಸಿದ್ದರಿಂದ 35ಮಂದಿ ಸಾವನ್ನಪ್ಪಿದ್ದಾರೆ. ಬ್ರಾಕ್ ವಿಶ್ವವಿದ್ಯಾನಿಲಯದ ಬಳಿಯ ಮೆರುಲ್ ಬಡ್ಡಾದಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ನಡೆದಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಪ್ರತಿಭಟನೆ ಏಕೆ?
ಜೂನ್ 5 ರಂದು, ಬಾಂಗ್ಲಾದೇಶ ಹೈಕೋರ್ಟ್ 1971 ರ ಪಾಕಿಸ್ತಾನದಿಂದ ಸ್ವಾತಂತ್ರ್ಯದ ಯುದ್ಧದಲ್ಲಿ ಹೋರಾಡಿದವರ ಕುಟುಂಬಗಳಿಗೆ ಶೇ. 30 ಮೀಸಲಾತಿಯನ್ನು ಘೋಷಿಸಿತ್ತು. ಇದನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇತೃತ್ವದ ಬೃಹತ್ ಆಂದೋಲನದ ನಂತರ 2018 ರಲ್ಲಿ ರದ್ದುಗೊಳಿಸಲಾಗಿತ್ತು. ತಾರತಮ್ಯದ ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ವಲಯದ ಉದ್ಯೋಗಗಳ ಕೊರತೆಯು ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ಹೆಚ್ಚು ಲಾಭದಾಯಕವಾಗಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
🚨 Students in #Bangladesh are being shot dead by Chhatra League goons and the police.
— DOAM (@doamuslims) July 18, 2024
Prime Minister Sheikh Hasina must step down immediately. #Bangladesh #StepDownHasina #SaveBangladeshiStudents #QuotaReform #QuotaReformProtest pic.twitter.com/JdmFgD0NqH
ಪ್ರಸ್ತುತ, ಬಾಂಗ್ಲಾದೇಶದಲ್ಲಿ 170 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 32 ಮಿಲಿಯನ್ ಯುವಜನರು ಉದ್ಯೋಗದಲ್ಲಿ ಇಲ್ಲ. ಆರ್ಥಿಕ ಸವಾಲುಗಳು ನಿಶ್ಚಲತೆ, ಸುಮಾರು 10% ಹಣದುಬ್ಬರ ಮತ್ತು ಕುಗ್ಗುತ್ತಿರುವ ಹಣದ ಮೌಲ್ಯ ಯುವಜನತೆಯನ್ನು ನಿರಾಶರನ್ನಾಗಿಸಿದೆ. ಕಳೆದ ತಿಂಗಳು ಆರಂಭವಾದ ಪ್ರತಿಭಟನೆಗಳು, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಲು ಪ್ರಧಾನಿ ಶೇಖ್ ಹಸೀನಾ ನಿರಾಕರಿಸಿದ ನಂತರ ತೀವ್ರಗೊಂಡವು.
ಭಾರತೀಯ ಪ್ರಜೆಗಳಿಗೆ ಸೂಚನೆ
ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿಗಾಗಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳಿಗೆ ಭಾರತೀಯ ರಾಜಭಾರ ಕಚೇರಿ ಸಲಹಾ ಸೂಚಿ ಬಿಡುಗಡೆ ಮಾಡಿದೆ. ಮನೆಯಿಂದ ಹೊರಬಾರದಂತೆ ಮತ್ತು ದೂರ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದೆ.
the police are even firing inside bracu! that's an university with freaking students in it!!!! and the prime minister dare says the police are HELPING!!!#SaveBangladeshiStudents #Bangladesh pic.twitter.com/guoVa974cO
— BaekChenlover ♡ (@suuiii_xo) July 18, 2024
ಇದನ್ನೂ ಓದಿ: Trump Assassination Bid: ಟ್ರಂಪ್ ಮೇಲೆ ಗುಂಡಿನ ದಾಳಿ; ಶೂಟರ್ ಫೋಟೋ ರಿಲೀಸ್- ಆತನ ಸ್ನೇಹಿತರು ಹೇಳಿದ್ದೇನು?