ಢಾಕಾ: ರೈಲುಗಳು ಎಂದರೆ ಉತ್ತಮ ಸಾರಿಗೆ ವ್ಯವಸ್ಥೆ, ದೂರದೂರಿಗೆ ಕಿಟಕಿ ಪಕ್ಕ ಕುಳಿತು, ಪ್ರಯಾಣದ ಸುಖ ಅನುಭವಿಸುವ “ರಥ” ಎಂಬುದು ಎಷ್ಟು ನಿಜವೋ, ಅದು ಹಲವಾರು ಸಾಹಸಗಳನ್ನು ಮಾಡುವ, ಹೆಚ್ಚು ಜನರಿದ್ದಾಗ ಮಾಡಿಸುವ ಸಾಧನವೂ ಆಗಿದೆ. ಮುಂಬೈನಂಥ ನಗರಗಳಲ್ಲಿ ಪ್ಯಾಸೆಂಜರ್ ರೈಲುಗಳಲ್ಲಿ ಕಾಲಿಡಲೂ ಸಾಹಪಡುವ ಪರಿಸ್ಥಿತಿ ಇರುತ್ತದೆ.
ಇಂತಹ ಪರಿಸ್ಥಿತಿ ಭಾರತದಲ್ಲಿ ಮಾತ್ರವಲ್ಲ, ಬಾಂಗ್ಲಾದೇಶದಲ್ಲೂ ಇದೆ. ಬಾಂಗ್ಲಾದೇಶದ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಲ್ಲಿ ಹೆಚ್ಚಿನ ಜನರಿದ್ದಾರೆ ಎಂಬುದನ್ನು ಅರಿತ ಮಹಿಳೆಯೊಬ್ಬರು ರೈಲಿನ ಬೋಗಿ ಹತ್ತಲು ಯತ್ನಿಸಿದ್ದಾರೆ. ಹರಸಾಹಸಪಟ್ಟು ರೈಲಿನ ಬೋಗಿ ಹತ್ತಿ ಕುಳಿತ ಪುರುಷರು ಮಹಿಳೆಯನ್ನೂ ಮೇಲಕ್ಕೆ ಎಳೆಯಲು ಕೈ ಚಾಚಿದ್ದಾರೆ. ಮಹಿಳೆಯು ಇನ್ನೇನು ರೈಲಿನ ಬೋಗಿ ಹತ್ತಬೇಕು, ಅಷ್ಟರಲ್ಲೇ ರೈಲು ನಿಲ್ದಾಣದ ಸಿಬ್ಬಂದಿಯು ಮಹಿಳೆಯನ್ನು ರೈಲು ಹತ್ತಲು ಬಿಟ್ಟಿಲ್ಲ. ಆದರೆ, ಹೀಗೆ ಹರಸಾಹಸ ಪಡುವ ಸಾಹಸಿ ಮಹಿಳೆಯ ವಿಡಿಯೊ ಮಾತ್ರ ವೈರಲ್ ಆಗಿದೆ.
ಇದನ್ನೂ ಓದಿ | Viral Video | ಪಾಕಿಸ್ತಾನದ ಉಗ್ರರು ಗಡಿಯಲ್ಲಿ ಹೇಗೆ ನುಸುಳುತ್ತಾರೆ? ಇಲ್ಲಿದೆ ವಿಡಿಯೊ!