Site icon Vistara News

Beer Yoga: ಯೋಗಾಸನ ಮಾಡ್ತಾ ಕುಡಿರಿ ಬಿಯರ್! ಡೆನ್ಮಾರ್ಕ್‌ನಲ್ಲಿ ಫುಲ್ ಪಾಪ್ಯುಲರ್ ಈ ಬಿಯರ್ ಯೋಗ

beer yoga in denmark

#image_title

ಬೆಂಗಳೂರು: ಯೋಗ ಭಾರತದ ಹೆಮ್ಮೆ. ಯೋಗ ಮಾಡುವುದರಿಂದ ದೈಹಿಕ ಸದೃಢತೆಯಷ್ಟೇ ಅಲ್ಲದೆ ಮಾನಸಿಕವಾಗಿಯೂ ನೆಮ್ಮದಿ ಸಾಧ್ಯ. ನಮ್ಮ ದೇಶದ ಮೂಲದ್ದಾಗಿರುವ ಯೋಗವನ್ನು ಇದೀಗ ವಿದೇಶಗಳು ಕೂಡ ಪಾಲಿಸುತ್ತಿವೆ. ಆದರೆ ಡೆನ್ಮಾರ್ಕ್‌ನಲ್ಲಿ ನಮ್ಮ ಯೋಗವನ್ನು ಬಿಯರ್‌ ಯೋಗ (Beer Yoga) ರೀತಿಯಲ್ಲಿ ಸಂಭ್ರಮಿಸಲಾಗಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Viral Video : ಇದು ನಾಯಿಯಲ್ಲ, ಭಯಂಕರ ಕಲಾವಿದ! ನೆಟ್ಟಿಗರು ಹೀಗಂದಿದ್ದೇಕೆ? ವಿಡಿಯೊ ನೋಡಿ!
ಕೋಪನ್ ಹ್ಯಾಗನ್ ಬಂದರಿನಲ್ಲಿ ನೂರಾರು ಮಂದಿ ಒಟ್ಟಿಗೆ ಸೇರಿಕೊಳ್ಳುತ್ತಾರೆ. ಯೋಗ ಮ್ಯಾಟ್‌ಗಳನ್ನು ಹಾಕಿಕೊಳ್ಳುತ್ತಾರೆ. ಒಟ್ಟಿಗೆ ಯೋಗ ಮಾಡಲಾರಂಭಿಸುತ್ತಾರೆ. ಆದರೆ ವಿಚಿತ್ರ ಎನ್ನುವಂತೆ ಈ ಯೋಗದಲ್ಲಿ ಅವರು ಬಿಯರ್‌ ಕುಡಿಯುತ್ತಲೇ ಇರುತ್ತಾರೆ. ಕೆಲವು ಆಸನಗಳು ಆದ ನಂತರ, ಕೆಲವು ಆಸನಗಳ ಮಧ್ಯದಲ್ಲಿ ಬಿಯರ್‌ ಕುಡಿಯುವುದೇ ಈ ʼಬಿಯರ್‌ ಯೋಗʼ ವಿಶೇಷತೆಯಂತೆ.

ಕಳೆದ ನಾಲ್ಕು ವರ್ಷಗಳಿಂದಲೂ ಇದೇ ರೀತಿಯಲ್ಲಿ ಬಿಯರ್‌ ಯೋಗ ಕಾರ್ಯಕ್ರಮ ನಡೆಸಲಾಗುತ್ತಿದೆಯಂತೆ. ದೇಹಕ್ಕೆ ವ್ಯಾಯಾಮ ಆಗುವುದರ ಜತೆ ಬಿಯರ್‌ ಕೂಡ ಸಿಗುತ್ತದೆಯೆಂದು ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಇದನ್ನೂ ಓದಿ: Viral News : ಐದು ವರ್ಷದ ಮಗನನ್ನು ಕೊಂದು, ತಲೆ ಬುರುಡೆಯನ್ನು ಬೇಯಿಸಿಕೊಂಡು ತಿಂದ ತಾಯಿ!
ಇತ್ತೀಚೆಗೆ ನಡೆದ ಈ ಬಿಯರ್‌ ಯೋಗ ಕಾರ್ಯಕ್ರಮದ ವಿಡಿಯೊವನ್ನು ಎಎಫ್‌ಪಿ ಮಾಧ್ಯಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ವಿಡಿಯೊ ಎಲ್ಲೆಡೆ ಹರಿದಾಡಿದ್ದು, ಭಾರೀ ಸದ್ದು ಮಾಡುತ್ತಿದೆ. ಅಂದ ಹಾಗೆ ಈ ರೀತಿಯ ಬಿಯರ್‌ ಯೋಗ ಅಮೆರಿಕದಲ್ಲಿ ಹೆಚ್ಚು ಪ್ರಸಿದ್ಧತೆ ಪಡೆದುಕೊಂಡಿದೆ.

Exit mobile version