ಜೆರುಸಲೇಂ: ಇಸ್ರೇಲ್‌ನಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಅವರೇ ಮತ್ತೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನೆತನ್ಯಾಹು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಯೈರ್ ಲ್ಯಾಪಿಡ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಚುನಾವಣೆಯಲ್ಲಿ ವಿಜಯಿಯಾದ ಬೆಂಜಮಿನ್ ನೆತನ್ಯಾಹು ಅವರಿಗೆ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ ದೇಶ ಮತ್ತಷ್ಟು ಏಳಿಗೆಯಾಗಲಿ” ಎಂದಿದ್ದಾರೆ.
ಬೆಂಜಮಿನ್ ನೆತನ್ಯಾಹು ಅವರು 1996-99 ಹಾಗೂ 2009ರಿಂದ 2021ರವರೆಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಭಾರತಸ್ನೇಹಿ ಪ್ರಧಾನಿಯಾಗಿದ್ದು, ಭಾರತದ ಸರ್ಜಿಕಲ್ ಸ್ಟ್ರೈಕ್ ಸೇರಿ ಹಲವು ನಿರ್ಧಾರಗಳನ್ನು ಬೆಂಬಲಿಸಿದ್ದರು. ಮೋದಿ ಹಾಗೂ ನೆತನ್ಯಾಹು ಮಧ್ಯೆಯೂ ಆತ್ಮೀಯತೆ ಇದೆ.
ಇದನ್ನೂ ಓದಿ | ಸಂಗಂ ವಿಶ್ವ ಕವಿ ಸಮ್ಮೇಳನ | 15 ದೇಶಗಳ ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಅಪರೂಪದ ಸಮಾಗಮ