Site icon Vistara News

Biden to visit India : ಭಾರತಕ್ಕೆ ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರವಾಸ

Joe Biden

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಭಾರತಕ್ಕೆ ಸೆಪ್ಟೆಂಬರ್‌ನಲ್ಲಿ ಭೇಟಿ ( Biden to visit India) ನೀಡಲಿದ್ದಾರೆ. 2023ರಲ್ಲಿ ಭಾರತ ಮತ್ತು ಅಮೆರಿಕದ ಬಾಂಧವ್ಯ ಹೊಸ ಎತ್ತರಕ್ಕೇರಲಿದೆ ಎಂದು ಬೈಡೆನ್‌ ಆಡಳಿತ ಹೇಳಿದೆ. ಭಾರತ ಜಿ-20 ಒಕ್ಕೂಟದ ಅಧ್ಯಕ್ಷತೆ ವಹಿಸಿರುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರ ಭಾರತ ಪ್ರವಾಸ ಮಹತ್ವ ಪಡೆದಿದೆ.

ಈ ವರ್ಷ ಭಾರತ-ಅಮೆರಿಕಕ್ಕೆ ಮಹತ್ವದ ವರ್ಷವಾಗಲಿದೆ. ಭಾರತ ಜಿ-20 ಒಕ್ಕೂಟದ ಅಧ್ಯಕ್ಷತೆ ವಹಿಸಿದೆ. ಅಮೆರಿಕ ಎಪಿಇಸಿ (Asia -Pacific Economic Cooperation) ಸಮಾವೇಶವನ್ನು ಆಯೋಜಿಸಲಿದೆ. ಜಪಾನ್‌ ಜಿ-7 ಶೃಂಗವನ್ನು ಹಮ್ಮಿಕೊಂಡಿದೆ. ಕ್ವಾಡ್‌ ಒಕ್ಕೂಟದ ಸದಸ್ಯರು ಜಾಗತಿಕ ಮಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬೈಡೆನ್‌ ಆಡಳಿತ ಹೇಳಿದೆ. ಅಮೆರಿಕದ ಹಣಕಾಸು ಸಚಿವೆ ಜನೆತ್‌ ಯೆಲೆನ್‌ ಸೇರಿದಂತೆ ಹಲವರು ಈ ವರ್ಷ ಭಾರತಕ್ಕೆ ಭೇಟಿ ನೀಡಿದ್ದಾರೆ.

ಜಿ-20 ಶೃಂಗ ಸಮಾವೇಶದ ಕಾರ್ಯಸೂಚಿಗಳ ಬಗ್ಗೆ ಹಾಗೂ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆ ಬೈಡೆನ್‌ ಹಾಗೂ ನರೇಂದ್ರ ಮೋದಿ ಅವರು ವ್ಯಾಪಕವಾಗಿ ಚರ್ಚಿಸುವ ನಿರೀಕ್ಷೆ ಇದೆ. ಕಳೆದ ಕೆಲ ವರ್ಷಗಳಿಂದ ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುತ್ತಲೇ ಇದೆ. ವಾಣಿಜ್ಯ, ರಕ್ಷಣೆ, ಕೈಗಾರಿಕೆ, ತಂತ್ರಜ್ಞಾನ, ವಿಜ್ಞಾನ, ಸಂಶೋಧನೆ ವಲಯಗಳಲ್ಲಿ ಒಪ್ಪಂದಗಳು ಏರ್ಪಡುತ್ತಿದೆ. ಅಮೆರಿಕದ ದಿದಗ್ಗಜ ಕಂಪನಿಗಳು ಭಾರತದಲ್ಲಿ ತಮ್ಮ ವಹಿವಾಟನ್ನು ಹೆಚ್ಚಿಸುತ್ತಿವೆ.

Exit mobile version