Site icon Vistara News

91ನೇ ವಯಸ್ಸಲ್ಲಿ 4ನೇ ಹೆಂಡ್ತಿ ಜತೆ ವಿಚ್ಚೇದನಕ್ಕೆ ಮುಂದಾದ ಶ್ರೀಮಂತ ಉದ್ಯಮಿ ಮುರ್ಡೋಕ್‌

Rupert Murdoch

ನ್ಯೂಯಾರ್ಕ್: ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ರುಪರ್ಟ್‌ ಮುರ್ಡೋಕ್‌ ಮತ್ತು ನಟಿ ಜೆರ‍್ರಿ ಹಾಲ್ ತಮ್ಮ ಆರು ವರ್ಷಗಳ ವೈವಾಹಿಕ ಸಂಬಂಧದಿಂದ ದೂರವಾಗಲು ನಿರ್ಧರಿಸಿದ್ದಾರೆ. ಅವರಿಬ್ಬರು 2016ರ ಮಾರ್ಚ್​ನಲ್ಲಿ ಸೆಂಟ್ರಲ್ ಲಂಡನ್​ನಲ್ಲಿ ನಡೆದ ಸಮಾರಂಭದಲ್ಲಿ ಮರ್ಡೋಕ್ ಮತ್ತು ಜೆರ‍್ರಿ ವಿವಾಹವಾಗಿದ್ದರು. ಅಂದ ಹಾಗೆ ರುಪೋರ್ಟ್‌ ಮುರ್ಡೋಕ್‌ ಅವರಿಗೆ ಈಗ ೯೧ ವರ್ಷ. ಅವರು ಮುರಿದುಕೊಳ್ಳುತ್ತಿರುವುದು ನಾಲ್ಕನೇ ಮದುವೆ.

ಮುರ್ಡೋಕ್​ ಅವರು ಫಾಕ್ಸ್‌ ಕಾರ್ಪ್‌ ಎಂಬ ಜಗತ್ತಿನ ಅತಿದೊಡ್ಡ ಮಾಧ್ಯಮ ಸಂಸ್ಥೆಯ ಅಧ್ಯಕ್ಷರಾಗಿದ್ದರೆ, ಜೆರ‍್ರಿ ಅವರು ಒಬ್ಬ ಸೂಪರ್‌ ಮಾಡೆಲ್.‌ ಮದುವೆಗೆ ಮೊದಲೇ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಅದು ಮ್ಯಾಗಜಿನ್‌ಗಳಿಗೆ ಒಳ್ಳೆಯ ಆಹಾರವಾಗಿತ್ತು. ಇದರ ನಡುವೆಯೇ ಮುರ್ಡೋಕ್‌ ಅವರು ತಮ್ಮ ೮೫ನೇ ವಯಸ್ಸಿಗೆ ಮದುವೆಯಾದರು. ಆದರೆ, ಇತ್ತೀಚೆಗೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಹಾಗಾಗಿ ಪರಸ್ಪರ ಒಪ್ಪಿಯೇ ದೂರ ನಡೆಯಲು ನಿರ್ಧರಿಸಿದ್ದಾರೆ. ಮುರ್ಡೋಕ್‌ ಅವರಿಂದ ದೂರವಾದರೂ ಫಾಕ್ಸ್‌ ಕಾರ್ಪ್‌ನಲ್ಲಿ ಅವರ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಮುರ್ಡೋಕ್‌ ಅವರ ಮೂರನೇ ಮದುವೆ ಉದ್ಯಮಿ ವೆಂಡಿ ಡೆಂಗ್‌ ಅವರ ಜತೆ ೨೦೦೦ನೇ ಇಸವಿಯಲ್ಲಿ ನಡೆದಿತ್ತು. ೧೪ ವರ್ಷಗಳಲ್ಲಿ ಅಂದರೆ ೨೦೧೪ರಲ್ಲಿ ವಿಚ್ಚೇದನ ನೀಡಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು.

ಮಾಧ್ಯಮ ದೊರೆಯ ಎರಡನೇ ಹೆಂಡತಿ ಸ್ಕಾಟ್ಲೆಂಡ್‌ನ ಪತ್ರಕರ್ತೆ ಅನ್ನಾ ಮುರ್ಡೋಕ್‌ ಮಾನ್‌. ಅವರಿಗೆ ಮೂರು ಮಕ್ಕಳು. ೧೯೯೯ರಲ್ಲಿ ಇವರ ಸಂಬಂಧ ಮುರಿದುಬಿದ್ದಿತ್ತು.
ಮುರ್ಡೋಕ್‌ ಅವರ ಮೊದಲ ಮದುವೆ ನಡೆದಿದ್ದು ೧೯೬೬ರಲ್ಲಿ. ಗಗನಸಖಿಯಾಗಿದ್ದ ಪ್ಯಾಟ್ರೀಷಿಯಾ ಬುಕರ್‌ ಅವರನ್ನು ಮದುವೆಯಾಗಿ ಅವರಲ್ಲಿ ಒಬ್ಬ ಮಗಳಿದ್ದಾಳೆ.

ಇದನ್ನೂ ಓದಿ| ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಮೂರನೇ ಮದುವೆಯಲ್ಲಿ ಮೊದಲ ಗಂಡನ ಕಿರಿಕಿರಿ

Exit mobile version