Site icon Vistara News

ಕಾಬೂಲ್‌ನ ಮದ್ರಸಾದಲ್ಲಿ ಸ್ಫೋಟ, 20 ಮಂದಿ ಸಾವು

blast

ಕಾಬೂಲ್‌: ಆಫ್ಘಾನಿಸ್ತಾನದ ರಾಜಧಾನಿಯ ಕೋಟಲ್‌ ಇ ಖೈರ್‌ಖಾನಾ ಎಂಬಲ್ಲಿರುವ ಮಸೀದಿಯಲ್ಲಿ ಬುಧವಾರ ರಾತ್ರಿ ದೊಡ್ಡದೊಂದು ಸ್ಫೋಟ ಸಂಭವಿಸಿ 20 ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ.

ಕಾಬೂಲ್‌ನ ವಾಯುವ್ಯ ಪ್ರದೇಶದಲ್ಲಿ ಈ ಮಸೀದಿ ಇದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಸ್ಫೋಟದಲ್ಲಿ ಅತ್ಯಾಧುನಿಕ ರಿಮೋಟ್‌ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಇದರ ಹಿಂದಿರುವ ಸಂಘಟನೆ ಯಾವುದು ಎಂದು ತಿಳಿದುಬಂದಿಲ್ಲ. ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿವೆ.

Exit mobile version