ಬೆಂಗಳೂರು: ನಾಯಿಗಳು ಸಾಮಾನ್ಯವಾಗಿ 15ರಿಂದ 20 ವರ್ಷ ಬದುಕುತ್ತವ ಎಂದು ಹೇಳಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾಯಿಗಳಿಗೂ ನಾನಾ ಬಗೆಯ ಸೋಂಕುಗಳು ಬರುವ ಕಾರಣ ಅಷ್ಟು ವರ್ಷವೂ ಬದುಕುವುದಿಲ್ಲ. ಆದರೆ, ಪೋರ್ಚ್ಗಲ್ನಲ್ಲಿರುವ ಈ ಶ್ವಾನಕ್ಕೆ ಫೆಬ್ರವರಿ 4ಕ್ಕೆ 30 ವರ್ಷ 266 ವರ್ಷಗಳು (World’s Oldest Dog Ever). ಈ ಮೂಲಕ ಅದು ಗಿನ್ನಿಸ್ ವಿಶ್ವ ದಾಖಲೆ ಬರೆದಿದೆ.
ಈ ನಾಯಿಯ ಹೆಸರು ಬಾಬಿ. ರಾಫಿರೊ ಅಲೆಂಟೊ ಜಾತಿಗೆ ಸೇರಿದ್ದು, 1992ರ ಮೇ 11ರಂದು ಜನಿಸಿದೆ. ಈ ತಳಿಯ ಜೀವಿತಾವಧಿ 12ರಿಂದ 14 ವರ್ಷಗಳು. ಆದರೆ, ಪವಾಡ ಎಂಬಂತೆ ಬಾಬಿ 30 ವರ್ಷಕ್ಕೂ ಅಧಿಕ ಕಾಲ ಬದುಕಿದೆ. ಈ ತಳಿಯ ನಾಯಿಗಳನ್ನು ಕುರಿ ಮಂದೆಯನ್ನು ಮಾಂಸ ಭಕ್ಷಕ ಪ್ರಾಣಿಗಳಿಂದ ಕಾಪಾಡಲು ಸಾಕಲಾಗುತ್ತದೆ. ಅಂತೆಯೇ ಬಾಬಿಯೂ ಕುರಿ ಮಂದೆಗಳ ಜತೆಯೇ ಬದುಕಿದ್ದು, ಸಿಕ್ಕಾಪಟ್ಟೆ ತಿರುಗಾಟ ನಡೆಸಿದೆ. ಆದರೆ, ಒಂದಿನಿತೂ ಸುಸ್ತು ಇಲ್ಲದಂತೆ ಆರಾಮವಾಗಿ ಓಡಾಡಿಕೊಂಡಿದೆ.
ವಾರದ ಹಿಂದೆ ಚುವಾವಾ ಜಾತಿಯ ನಾಯಿಯೊಂದು 23 ವರ್ಷ ಬದುಕುವ ಮೂಲಕ ವಿಶ್ವದ ಅತಿ ಹಿರಿಯ ನಾಯಿ ಎಂಬ ಗಿನ್ನಿಸ್ ದಾಖಲೆ ಮಾಡಿತ್ತು. ಆ ದಾಖಲೆಯನ್ನು ಬಾಬಿ ಒಂದೇ ವರ್ಷದಲ್ಲಿ ಅಳಿಸಿ ಹಾಕಿದೆ.
ಇದನ್ನೂ ಓದಿ : Viral video: ಕೋಂಗಾ ನೃತ್ಯ ಮಾಡಿ ಗಿನ್ನಿಸ್ ದಾಖಲೆ ಬರೆದ 14 ನಾಯಿಗಳ ತಂಡ!
ಬಾಬಿಯ ಸಾಧನೆಯನ್ನು ಶ್ವಾನ ಪ್ರಿಯರು ಅತಿಯಾಗಿ ಮೆಚ್ಚಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆಯ ಟ್ವಿಟ್ ಖಾತೆಗೆ 158K ವೀಕ್ಷಣೆ ಬಂದಿವೆ. ಸಾಕಷ್ಟು ಮಂದಿ ಇದೊಂದು ಪವಾಡ ಎಂದೇ ಹೇಳಿದ್ದಾರೆ.
ಸೀಕ್ರೆಟ್ ಏನು?
ಬಾಬಿ ಇಷ್ಟೊಂದು ವರ್ಷಗಳ ಕಾಲ ಬದುಕಿ ಉಳಿಯಲು ಕಾರಣ ಎಂಬುದಕ್ಕೂ ಗಿನ್ನಿಸ್ ವಿಶ್ವ ದಾಖಲೆ ಕಾರಣ ಕೊಟ್ಟಿದೆ. ಮನುಷ್ಯರು ತಿನ್ನುವ ಆಹಾರವನ್ನೇ ಅದಕ್ಕೆ ಕೊಡಲಾಗಿದೆ ಹಾಗೂ ಇತರ ಪ್ರಾಣಿಗಳ ಜತೆ ಬೆರೆಯಲು ಬಿಟ್ಟಿದ್ದೇ ಅದರ ದೀರ್ಘ ಆಯುಷ್ಯದ ಗುಟ್ಟು ಎನ್ನಲಾಗಿದೆ.