ನವದೆಹಲಿ: ಗಾಜಾಪಟ್ಟಿಯಲ್ಲಿ (Gaza Strip) ಹಮಾಸ್ (Hamas) ಮತ್ತು ಇಸ್ರೇಲ್ (Israel) ನಡುವಿನ ಸಂಘರ್ಷವು ತಾರಕಕ್ಕೇರಿದೆ. ಗಾಜಾದ ಅತಿದೊಡ್ಡ ಆಸ್ಪತ್ರೆಯಾಗಿರುವ ಅಲ್ ಶಿಫಾ (Al Shifa Hospital) ಆಸ್ಪತ್ರೆಯಲ್ಲಿ ಶಿಶುಗಳು ಸೇರಿದಂತೆ 179 ಜನರನ್ನು ಅದರ ಆವರಣದೊಳಗಿನ ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಮೊಹಮ್ಮದ್ ಅಬು ಸಲ್ಮಿಯಾ ಮಂಗಳವಾರ ಹೇಳಿದ್ದಾರೆ. ವಿದ್ಯುತ್ ಕಡಿತಗೊಂಡಿದ್ದರಿಂದ, ತೀವ್ರ ನಿಗಾ ಘಟಕದಲ್ಲಿದ್ದ 7 ಶಿಶುಗಳು ಸೇರಿದಂತೆ 29 ರೋಗಿಗಳನ್ನು ಸಮಾಧಿ ಮಾಡಲಾಯಿತು. ಈ ಮಧ್ಯೆ, ಇಸ್ರೇಲ್ ಪಡೆಗಳು, ಗಾಜಾ ಸಂಸತ್ ಕಟ್ಟಡದ ಮೇಲೂ ದಾಳಿ ನಡೆಸಿದೆ. ಅಲ್ಲದೇ ಈ ವರೆಗೆ 4600ಕ್ಕೂ ಹೆಚ್ಚು ಮಕ್ಕಳ ಮೃತಪಟ್ಟಿದ್ದಾರೆ(Isreal Palestine War).
ಎಎಫ್‌ಪಿ ಪತ್ರಕರ್ತರೊಬ್ಬರು ಗಾಜಾದಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಗಾಜಾ ಪಟ್ಟಿಯಲ್ಲಿ ಎಲ್ಲೆಂದರಲ್ಲಿ ಕೊಳೆತ ದೇಹಗಳ ದುರ್ನಾತ ಹರಡಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಇದೊಂದು ಅಮಾನವೀಯ ಪರಿಸ್ಥಿತಿ ಎಂದು ಕರೆದಿದ್ದಾರೆ.
ಅಲ್ ಶಿಫಾ ಆಸ್ಪತ್ರೆಯು ಗಾಜಾ ಪಟ್ಟಿಯ ಅತಿದೊಡ್ಡ ಆಸ್ಪತ್ರೆಯಾಗಿದೆ. ಕಳೆದ ವಾರ ಇಸ್ರೇಲಿ ಪಡೆಗಳ ಮಾರಣಾಂತಿಕ ದಾಳಿ ನಡೆಸಿದ್ದವು. ಟ್ಯಾಂಕ್‌ಗಳನ್ನು ನುಗ್ಗಿಸಲಾಗಿತ್ತು. ಪರಿಣಾಮ 72 ಗಂಟೆಗಳ ಕಾಲ ಆ ಆಸ್ಪತ್ರೆಯು ಹೊರ ಪ್ರಪಂಚದ ಸಂಪರ್ಕದಿಂದ ಕಡಿತಗೊಂಡಿತ್ತು. ಈ ಆಸ್ಪತ್ರೆಯ ಕೆಳಭಾಗದಲ್ಲಿ ಹಮಾಸ್ ಭೂಗತ ಪ್ರಧಾನ ಕಚೇರಿ ಇರುವುದೇ ಆಸ್ಪತ್ರೆ ಮೇಲಿನ ದಾಳಿಗೆ ಕಾರಣ ಎಂದು ಇಸ್ರೇಲ್ ಹೇಳಿಕೊಂಡಿದೆ.
ಹಮಾಸ್ ಉಗ್ರರು ರೋಗಿಗಳನ್ನು ಮಾನವ ತಡೆಗೋಡೆ ರೀತಿ ಬಳಸುತ್ತಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ. ಆದರೆ, ಈ ಆರೋಪವನ್ನು ಹಮಾಸ್ ಉಗ್ರರು ಮತ್ತು ಆಸ್ಪತ್ರೆಯ ಸಿಬ್ಬಂದಿ ನಿಕಾರಿಸಿದೆ. ಪ್ರತ್ಯೇಕ ಘಟನೆಗಳಲ್ಲಿ ಇಸ್ರೇಲ್, ಹಮಾಸ್ ಕಾರ್ಯಾಚರಣೆಯಿಂದ ಮತ್ತೊಂದು ಆಸ್ಪತ್ರೆಗೆ ಲಿಂಕ್ ಕಲ್ಪಿಸುವ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.
ಆಸ್ಪತ್ರೆ ಮೇಲೆ ಹಾಗೂ ಆಸ್ಪತ್ರೆ ಸುತ್ತ ನಡೆಯುತ್ತಿರುವ ದಾಳಿಯ ಪರಿಣಾಮ ಆಸ್ಪತ್ರೆಯಲಲಿ 10 ಸಾವಿರಕ್ಕೂ ಅಧಿಕ ಜನರು ಸಿಲುಕಿದ್ದಾರೆ. ಈ ಪೈಕಿ ರೋರಿಗಳು, ಸಿಬ್ಬಂದಿ ಮತ್ತು ನಾಗರಿಕರಿದ್ದಾರೆ. ಅಳ್ ಶಿಫಾ ಆಸ್ಪತ್ರೆಯಿಂದ ಸುರಕ್ಷಿತ ಸ್ಥಳಕ್ಕೆ ಸಾಗಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವಿಶ್ವ ಸಂಸ್ಥೆ ಹೇಳಿದೆ. ಈ ಮಧ್ಯೆ, ಗಾಜಾ ಪಟ್ಟಿಯ ಮತ್ತೊಂದು ಆಸ್ಪತ್ರೆಯಾಗಿರುವ ಅಲ್ ಕ್ವಾಡ್ಸ್‌ಗೂ ಇಂಧನ ಪೂರೈಕೆಯನ್ನು ನಿಲ್ಲಿಸಲಾಗಿದೆ.
ಗಾಜಾ ಸಂಸತ್ ಮೇಲೆ ದಾಳಿ
ಇಸ್ರೇಲ್ ದಾಳಿಯಲ್ಲಿ ಈವರೆಗೆ 4630 ಮಕ್ಕಳು ಮತ್ತು 3130 ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ಹೇಳಿದೆ. ಅಲ್ಲದೇ, ಗಾಜಾದಲ್ಲಿ ಸುಮಾರು 41 ಸಾವಿರಕ್ಕೂ ಅಧಿಕ ಆಸ್ತಿಗಳು ಹಾನಿಗೊಳಗಾಗಿವೆ. 71 ಮಸೀದಿಗಳು ಹಾಗೂ 253 ಶಾಲೆಗಳು ನೆಲಸಮವಾಗಿವೆ ಎಂದು ಗಾಜಾ ಆರೋಗ್ಯ ಸಚಿವಾಲಯವು ತಿಳಿಸಿದೆ.
ಮತ್ತೊಂದೆಡೆ ಇಸ್ರೇಲ್ ಸೇನೆಯು ಗಾಜಾ ಸಂಸತ್ ಮೇಲೂ ದಾಳಿ ನಡೆಸಿದು. ಇಸ್ರೇಲ್ ಪಡೆಗಳು ಸಂಸತ್‌ನೊಳಗೆ ನುಗ್ಗಿದೆ. ಆಸ್ಪತ್ರೆಯ ಕೆಳಗಿರುವ ಸುರಂಗ ಮಾರ್ಗಗಳಲ್ಲಿ ಹಮಾಸ್ ಕಮಾಂಡ್, ಕಂಟ್ರೋಲ್ ಸೆಂಟರ್ ಇರುವುದನ್ನು ಪತ್ತೆ ಹಚ್ಚಿದೆ. ಅಲ್ಲದೇ ಸಾಕಷ್ಟು ಶಸ್ತ್ರಾಸ್ತ್ರಗಳು ದೊರೆತಿವೆ ಎಂದು ಇಸ್ರೇಲ್ ಹೇಳಿದೆ.
ಈ ಸುದ್ದಿಯನ್ನೂ ಓದಿ: Israel- Palestine War: ಇದೇ ನೋಡಿ ಹಮಾಸ್ ಉಗ್ರರ ಸುರಂಗ; ಗಾಜಾದ ಆಸ್ಪತ್ರೆಯಡಿಯೇ ಪತ್ತೆ!