ಜೋಹಾನ್ಸ್ಬರ್ಗ್, ದಕ್ಷಿಣ ಆಫ್ರಿಕಾ: ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಶೀಘ್ರವೇ ಭಾರತವು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲಿದೆ ($5 trillion economy) ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬ್ರಿಕ್ಸ್ ಬಿಸಿನೆಸ್ ಫೋರಮ್ ಲೀಡರ್ಸ್ (BRICS Business Forum Leaders’ Dialogue) ಸಂವಾದದಲ್ಲಿ ಹೇಳಿದರು. ದಕ್ಷಿಣ ಆಫ್ರಿಕಾದ (South Africa) ಜೋಹಾನ್ಸ್ ಬರ್ಗ್ ನರಗದಲ್ಲಿ (Johannesburg) ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಾಗಿದೆ(BRICS Summit 2023).
ಮುಂದಿನ ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಜಗತ್ತಿನ ಎಂಜಿನ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ 9 ವರ್ಷದಲ್ಲಿ ತಮ್ಮ ನೇತೃತ್ವದ ಸರ್ಕಾರವು ಆರ್ಥಿಕ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳನ್ನು ವಿವರಿಸಿದರು.
ಬ್ರಿಕ್ಸ್ ಬಿಸಿನೆಸ್ ಫೋರಮ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Sharing my remarks at the BRICS Business Forum in Johannesburg. https://t.co/oooxofDvrv
— Narendra Modi (@narendramodi) August 22, 2023
ಭಾರತದ ಇಷ್ಟೊಂದು ತ್ವರಿತ ಬೆಳವಣಿಗೆಯು ಸಾಂಕ್ರಾಮಿಕ ರೋಗ ಪರಿಸ್ಥಿತಿಯನ್ನು ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ಅವಕಾಶವಾಗಿ ಪರಿವರ್ತಿಸಿಕೊಂಡಿತು. ಮಿಷನ್ ಮೋಡ್ನಲ್ಲಿನ ನಮ್ಮ ಸುಧಾರಣೆಗಳ ಮೂಲಕ, ಭಾರತದಲ್ಲಿ ವ್ಯವಹಾರದ ಸುಲಭತೆ ಸುಧಾರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ನಾವು ಉದ್ಯಮಿಗಳಾಗುತ್ತಿದ್ದ ಹೊರೆಯನ್ನು ಕಡಿಮೆ ಮಾಡಿದ್ದೇವೆ, ರೆಡ್ ಟೇಪ್ ಅನ್ನು ರೆಡ್ ಕಾರ್ಪೆಟ್ನೊಂದಿಗೆ ಬದಲಾಯಿಸಿದ್ದೇವೆ. ಜಿಎಸ್ಟಿಯನ್ನು ಜಾರಿಗೊಳಿಸುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದ್ದೇವೆ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಗೆ ತಿಳಿಸಿದರು.
ಈ ಸುದ್ದಿಯನ್ನೂ ಓದಿ: BRICS Summit 2023: ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಸಮುದಾಯದಿಂದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ!
ಭಾರತ ಸರ್ಕಾರವು ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ಮುಕ್ತಗೊಳಿಸಿದೆ. ಅಲ್ಲದೇ, ಸಾರ್ವಜನಿಕ ಸೇವಾ ವಿತರಣೆ ಮತ್ತು ಉತ್ತಮ ಆಡಳಿತದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಲಾಗಿದೆ. ತಂತ್ರಜ್ಞಾನದ ಸಹಾಯದಿಂದ ಭಾರತವು ಹಣಕಾಸಿನ ಸಮಗ್ರತೆಯಲ್ಲಿ ಪ್ರಗತಿಯನ್ನು ಸಾಧಿಸಿದೆ. ಗ್ರಾಮೀಣ ಮಹಿಳೆಯರು ಹೆಚ್ಚು ಲಾಭಪಡೆದುಕೊಂಡವರಾಗಿದ್ದಾರೆ. ಕೇವಲ ಒಂದೇ ಕ್ಲಿಕ್ನಲ್ಲಿ ಕೋಟ್ಯಂತರ ಫಲಾನುಭವಿ ಭಾರತೀಯರು ನೇರ ನಗದು ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಸುಮಾರು 360 ಶತಕೋಟಿ ಡಾಲರ್ ವಿತರಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.