ಲಂಡನ್: ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿಯಾಗಿ ನೇಮಕಗೊಂಡಿದ್ದ ಲಿಜ್ ಟ್ರಸ್ (Liz Truss Resign) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. 44 ದಿನಗಳ ಹಿಂದೆಯಷ್ಟೇ ಪಿಎಂ ಆಗಿದ್ದರು. ಲಿಜ್ ಅವರು ನೀತಿಗಳನ್ನು ವಿರೋಧಿಸಿ ಗೃಹ ಸಚಿವೆಯಾಗಿದ್ದ ಭಾರತೀಯ ಸುವೆಲ್ಲಾ ಬ್ರವೇರ್ಮನ್ ಅವರು ರಾಜೀನಾಮೆ ನೀಡಿದ್ದರು. ತಮ್ಮ ನಾಯಕತ್ವದ ಮೇಲೆ ಯಾರೂ ವಿಶ್ವಾಸ ತೋರುತ್ತಿಲ್ಲ. ಅಂದುಕೊಂಡ ಹಾಗೆ ಸರ್ಕಾರವನ್ನು ಮುನ್ನಡೆಸಲು ಆಗುತ್ತಿಲ್ಲ. ಆ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಟ್ರಸ್ ಅವರು ಹೇಳಿಕೊಂಡಿದ್ದಾರೆ.
ತೆರಿಗೆ ಕಡಿತ ಸಂಬಂಧ ಲಿಜ್ ಕೈಗೊಳ್ಳಲು ಹೊರಟಿದ್ದ ನೀತಿಗಳ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗುವ ಮುನ್ನ ತೆರಿಗೆ ಕಡಿತವನ್ನು ಬೆಂಬಲಿಸಿದ್ದ ಅವರು, ಪ್ರಧಾನಿಯಾಗುತ್ತಿದ್ದಂತೆ ತೆರಿಗೆ ಕಡಿತ ಸಾಧ್ಯವಿಲ್ಲ ಎಂದಿದ್ದರು. ಮತ್ತೊಂದೆಡೆ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರು ಕೂಡ ಲಿಜ್ ಟ್ರಸ್ ಅವರನ್ನು ಆಯ್ಕೆ ಮಾಡಿರುವುದು ತಪ್ಪು ನಿರ್ಧಾರ ಎಂದು ಹೇಳಿದ್ದರು. ಈ ಎಲ್ಲ ಕಾರಣದಿಂದ ಅವರು ಪಕ್ಷದೊಳಗಿನಿಂದಲೇ ಬಂಡಾಯ ಎದುರಿಸುತ್ತಿದ್ದರು. ಇದೀಗ ಭಾರತೀಯ ಮೂಲದ ಹಾಗೂ ಇನ್ಫಿ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರಿಗೆ ಮತ್ತೆ ಪ್ರಧಾನಿ ಪಟ್ಟ ಒಲಿಯುವ ಸಾಧ್ಯತೆ ಇದೆ. ವಿಶೇಷ ಎಂದರೆ, ಇತ್ತೀಚೆಗೆ ನಡೆದ ಪ್ರಧಾನಿ ಹುದ್ದೆಗೆ ಆಯ್ಕೆ ಚುನಾವಣೆಯಲ್ಲಿ ರಿಷಿ ಅವರನ್ನು ಲಿಜ್ ಸೋಲಿಸಿದ್ದರು.
ಇದನ್ನೂ ಓದಿ | Britain PM | ಬ್ರಿಟನ್ ಪಿಎಂ ಲಿಜ್ ಟ್ರುಸ್ ವಿರುದ್ಧ ಬಂಡಾಯ! ರಿಷಿ ಸುನಕ್‌ಗೆ ಒಲಿಯುತ್ತಾ ಹುದ್ದೆ?