Site icon Vistara News

ಹಮಾಸ್‌ ಉಗ್ರರಿಂದ ಹತ್ಯೆಗೀಡಾದ, ಸುಟ್ಟ ಹಸುಳೆಗಳ ಫೋಟೋ ಷೇರ್ ಮಾಡಿದ ಇಸ್ರೇಲ್ ಪಿಎಂ

Israel PM and US Foreign Minister

ಟೆಲ್ ಅವಿವ್: ಹಸುಳೆಗಳು ಮತ್ತು ಮಕ್ಕಳನ್ನು ಹಮಾಸ್ ಬಂಡುಕೋರರು (Hamas Terrorists) ಹತ್ಯೆ (Babies Killed) ಮಾಡಿದ, ಜೀವಂತವಾಗಿ ಸುಟ್ಟು ಹಾಕಿದ ಫೋಟೋಗಳನ್ನು ಇಸ್ರೇಲ್‌ಗೆ ಭೇಟಿ ನೀಡಿದ ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ (US Secretary of State Antony Blinken) ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel PM Benjamin Netanyahu) ಕಾರ್ಯಾಲವು ತೋರಿಸಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಯುದ್ಧದ ವೇಳೆ, ಹಮಾಸ್ ಬಂಡುಕೋರರು ಮಕ್ಕಳನ್ನೂ ಹತ್ಯೆ ಮಾಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯವು ಹೇಳಿದೆ(Israel Palestine War).

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರಿಗೆ ತೋರಿಸಿದ ಕೆಲವು ಫೋಟೋಗಳು ಇಲ್ಲಿವೆ. ಇವು ಹಮಾಸ್ ರಾಕ್ಷಸರಿಂದ ಹತ್ಯೆಗೀಡಾದ ಮತ್ತು ಸುಟ್ಟುಹೋದ ಶಿಶುಗಳ ಭಯಾನಕ ಫೋಟೋಗಳಾಗಿವೆ. ಹಮಾಸ್ ಅಮಾನವೀಯವಾಗಿದೆ. ಹಮಾಸ್ ಐಸಿಸ್ ಆಗಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿಯು ಎಕ್ಸ್ ವೇದಿಕೆಯಲ್ಲಿ ಫೋಟೋಗಳನ್ನು ಹಂಚಿಕೊಂಡು ಬರೆದಿದೆ.

ನೆತನ್ಯಾಹು ಅವರು ಹಮಾಸ್ ಬಂಡುಕೋರರ ಗುಂಪನ್ನು ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಹೋಲಿಸಿದ್ದಾರೆ. ಹಾಗೆಯೇ ಈ ಭಯೋತ್ಪಾದಕ ಗುಂಪನ್ನು ಇಸ್ಲಾಮಿಕ್ ಸ್ಟೇಟ್‌ನಂತೆ ಹತ್ತಿಕ್ಕಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಮಾಸ್ ಐಸಿಸ್ ರೀತಿಯಲ್ಲೇ ಇದೆ ಮತ್ತು ಐಸಿಸ್ ಅನ್ನು ಪುಡಿಮಾಡಿದಂತೆಯೇ, ಹಮಾಸ್ ಅನ್ನು ಕೂಡ ಪುಡಿಮಾಡಲಾಗುತ್ತದೆ. ಹಮಾಸ್ ಅನ್ನು ಐಸಿಸ್ ನಡೆಸಿಕೊಂಡ ರೀತಿಯಲ್ಲಿಯೇ ನಡೆಸಿಕೊಳ್ಳಬೇಕು. ಅವರೊಂದಿಗೆ ಯಾವುದೇ ನಾಯಕರು ಭೇಟಿ ನೀಡಬಾರದು, ಯಾವುದೇ ದೇಶವು ಆಶ್ರಯ ನೀಡಬಾರದು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Israel Palestine War: ಸಿರಿಯಾದ ಎರಡು ಏರ್‌ಪೋರ್ಟ್‌ಗಳನ್ನು ಧ್ವಂಸ ಮಾಡಿದ ಇಸ್ರೇಲ್

ಏತನ್ಮಧ್ಯೆ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಗಾಜಾ ಪಟ್ಟಿಯಲ್ಲಿ ಕನಿಷ್ಠ 6,000 ಸುತ್ತು ಮದ್ದುಗುಂಡುಗಳನ್ನು ಬಳಸಿ 3,600 ಕ್ಕೂ ಹೆಚ್ಚು ಟಾರ್ಗೆಟ್‌ಗಳನ್ನು ಉಡಾಯಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಐಡಿಎಫ್ ಪ್ರಕಾರ, ಹಿರಿಯ ಹಮಾಸ್ ಕಾರ್ಯಕರ್ತ ಮತ್ತು ಭಯೋತ್ಪಾದಕ ಸಂಘಟನೆಯ ಹಲವಾರು ಇತರ ಸದಸ್ಯರು ಇತ್ತೀಚಿನ ದಾಳಿಗಳಲ್ಲಿ ಮೃತಪಟ್ಟಿದ್ದಾರೆ.

ವಾರ್ ರೂಮ್‌ಗಳು, ಮಿಲಿಟರಿ ನೆಲೆಗಳು, ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಟ್ಟಡಗಳು ಮತ್ತು ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳು ಸೇರಿದಂತೆ ಗಾಜಾ ಪಟ್ಟಿಯಾದ್ಯಂತ ಹಮಾಸ್‌ನ ಎಲ್ಲಾ ಸಂಪನ್ಮೂಲಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಮಿಲಿಟರಿ ಹೇಳಿಕೊಂಡಿದೆ. ಹಮಾಸ್ ದಾಳಿಯ ನಂತರ ಇಸ್ರೇಲ್‌ನಲ್ಲಿ ಸಾವಿನ ಸಂಖ್ಯೆ 1,200 ಕ್ಕೆ ಏರಿದೆ ಮತ್ತು ಸುಮಾರು 3,300 ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಇಸ್ರೇಲ್ ದಾಳಿಗೆ ಗಾಜಾ ಪಟ್ಟಿಯಲ್ಲಿ 1,350 ಕ್ಕೂ ಹೆಚ್ಚು ಪ್ಯಾಲೆಸ್ಟೀನಿರು ಮೃತಪಟ್ಟಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version