ಕ್ಯಾಲಿಫೋರ್ನಿಯಾ: ಮನುಷ್ಯನ ಹಸಿವಿಗೆ ನಾನಾ ಮುಖಗಳು ಇರುತ್ತವೆ. ಸಸ್ಯಾಹಾರದಲ್ಲೇ ಜೀವನ ಕಳೆಯುವವರು ಇದ್ದಾರೆ. ಇನ್ನು, ಮಾಂಸಾಹಾರಿಗಳು ಕುರಿ, ಕೋಳಿ ತಿಂದು ಹಸಿವು ನೀಗಿಸಿಕೊಳ್ಳುತ್ತಾರೆ. ಇದು ಭಾರತೀಯರ ಆಹಾರ ಪದ್ಧತಿಯಾದರೆ, ಬೇರೆ ದೇಶಗಳಲ್ಲಿ ಹುಳಗಳನ್ನೂ ತಿನ್ನುವವರು ಇದ್ದಾರೆ. ಮನುಷ್ಯನ ಹಸಿವಿಗೆ ಇಷ್ಟೆಲ್ಲ ಮುಖಗಳಿದ್ದರೂ ಮನುಷ್ಯನನ್ನೇ ತಿಂದು ಬದುಕುವ ವಿಲಕ್ಷಣ ಮನಸ್ಥಿತಿ ಇನ್ನೂ ಬಂದಿಲ್ಲ. ಆದರೆ, ಅಮೆರಿಕದ (America) ಕ್ಯಾಲಿಫೋರ್ನಿಯಾದಲ್ಲಿ (California) ವ್ಯಕ್ತಿಯೊಬ್ಬ ಶವದ ಕಾಲು ತಿನ್ನುವ ಮೂಲಕ ವಿಕೃತಿ ಮೆರೆದಿದ್ದಾನೆ.
ಹೌದು, ಸತ್ತ ಮನುಷ್ಯನ ಕಾಲು ತಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ರೆಸೆಂಡೋ ಟೆಲ್ಲೆಜ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತನು ರಸ್ತೆಗಳಲ್ಲಿ ಮನುಷ್ಯನ ಕಾಲು ತಿನ್ನುತ್ತ ತಿರುಗಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶುಕ್ರವಾರ (ಮಾರ್ಚ್ 22) ಇಂತಹ ವಿಲಕ್ಷಣ ಘಟನೆ ನಡೆದಿದ್ದು, ಜಾಲತಾಣಗಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
JUST IN: California man arrested for allegedly eating a severed leg that he took from a pedestrian who was struck by a train.
— Collin Rugg (@CollinRugg) March 23, 2024
The incident happened in Wasco, California.
According to police, 27-year-old Resendo Tellez removed a leg from an Amtrak Station.
Tellez was seen… pic.twitter.com/Wv0npYZUmP
ಕ್ಯಾಲಿಫೋರ್ನಿಯಾದ ವಾಸ್ಕೋ ಆಮ್‌ಟ್ರ್ಯಾಕ್ ರೈಲು ನಿಲ್ದಾಣದ ಬಳಿ ರೈಲು ಹರಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಆತನ ಶವವು ರೈಲು ಹಳಿಯ ಮೇಲೆ ಬಿದ್ದಿದ್ದನ್ನು ನೋಡಿದ ಯುವಕನು ಕೂಡಲೇ ಶವದ ಬಳಿ ಹೋಗಿದ್ದಾನೆ. ಶವದ ಕಾಲು ತುಂಡಾಗಿದ್ದು, ಅದನ್ನು ಕೈಯಲ್ಲಿ ಹಿಡಿದುಕೊಂಡ ಯುವಕನು ತಿನ್ನುತ್ತ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿದ್ದಾನೆ. ಮನುಷ್ಯನ ಕಾಲು ಎಂಬ ಸಣ್ಣ ಮುಜುಗರ, ಬೇಸರವಿಲ್ಲದೆ ಆತನು ಚಿಕನ್ ಪೀಸ್ ತಿಂದಂತೆ ಕಾಲನ್ನು ತಿಂದಿದ್ದಾನೆ.
ಇದನ್ನೂ ಓದಿ: Rishabh Pant: ಗೋಲಿ ಆಡಿ, ಒಂದೇ ಕೈಯಿಂದ ಸಿಕ್ಸರ್ ಬಾರಿಸಿದ ರಿಷಭ್ ಪಂತ್; ವಿಡಿಯೊ ವೈರಲ್
ವಿಡಿಯೊ ಮಾಡುತ್ತಿದ್ದನ್ನು ನೋಡಿ ನಕ್ಕ ದುಷ್ಟ
ಬೆಳಗ್ಗೆ ಬೆಳಗ್ಗೆಯೇ ಮನುಷ್ಯನ ಕಾಲು ತಿನ್ನುತ್ತ ರಸ್ತೆ ಮೇಲೆ ತಿರುಗಾಡುತ್ತಿದ್ದವನನ್ನು ಕಂಡ ಸಾರ್ವಜನಿಕರು ವಿಡಿಯೊ ಮಾಡಿದ್ದಾರೆ. “ಹೇ, ಈತ ನೋಡಿ ಮನುಷ್ಯನ ಕಾಲು ತಿನ್ನುತ್ತಿದ್ದಾನೆ” ಎಂದು ಜನ ಹೇಳಿದರೆ, ವಿಡಿಯೊ ಮಾಡುತ್ತಿದ್ದರೆ, ಯುವಕನು ಅವರನ್ನು ನೋಡಿ ನಕ್ಕಿದ್ದಾನೆ ಎಂದು ತಿಳಿದುಬಂದಿದೆ. ಈತನು ಮಾನಸಿಕ ಅಸ್ವಸ್ಥನೋ, ಹಸಿವು ತಾಳದೆ ಮನುಷ್ಯನ ಕಾಲು ತಿಂದಿದ್ದಾನೋ, ಯಾವ ಕಾರಣಕ್ಕಾಗಿ ಹೀಗೆ ಮಾಡಿದ್ದಾನೋ ಎಂಬುದು ನಿಖರವಾಗಿಲ್ಲ. ಪೊಲೀಸರು ಈತನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ