Site icon Vistara News

Canada Housing Crunch | ಕೆನಡಾದಲ್ಲಿ ಇನ್ನು ವಿದೇಶಿಗರು ಮನೆ ಖರೀದಿಸುವಂತಿಲ್ಲ! ಕಾರಣ ಏನು?

Justin Trudeau @ Canada Housing Cruch

ಒಟ್ಟಾವಾ: ಮನೆಗಳ ಲಭ್ಯತೆಯ ಬಿಕ್ಕಟ್ಟು ಎದುರಿಸುತ್ತಿರುವ ಕೆನಡಾದಲ್ಲಿ ಇನ್ನು ಮುಂದೆ ವಿದೇಶಿಗರು ಮನೆಯನ್ನು ಖರೀದಿಸುವಂತಿಲ್ಲ. ವಿದೇಶಿಗರು ಮನೆ ಖರೀದಿಯನ್ನು ನಿಷೇಧಿಸಿರುವ ಕೆನಡಾ, ಈ ನಿಯಮವನ್ನು ಭಾನುವಾರದಿಂದಲೇ ಜಾರಿಗೆ ತಂದಿದೆ. ವಿದೇಶಿಗರು ಹೆಚ್ಚಿನ ಸಂಖ್ಯೆಯನ್ನು ಮನೆಗಳನ್ನು ಖರೀದಿಸುತ್ತಿರುವುದರಿಂದ ಸ್ಥಳೀಯರಿಗೆ ಮನೆಗಳು ದೊರೆಯುತ್ತಿಲ್ಲ. ಈ ಕಾರಣಕ್ಕಾಗಿ ಕೆನಡಾದಲ್ಲಿ ವಿದೇಶಿಗರು ಮನೆ ಖರೀದಿಸುವುದರ ಮೇಲೆ ನಿಷೇಧ ಹೇರಲಾಗಿದೆ(Canada Housing Crunch).

ಡಿಸೆಂಬರ್ ಅಂತ್ಯದಲ್ಲಿ ಕೆನಡಾ ಈ ನಿಷೇಧವು ನಗರದ ವಾಸಸ್ಥಳಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಬೇಸಿಗೆ ಕಾಟೇಜ್‌ಗಳಂತಹ ಮನರಂಜನಾ ಆಸ್ತಿಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಅದೇ ರೀತಿ, ಕೆನಡಾ ಸರ್ಕಾರವು ಮುಂದಿನ ಎರಡು ವರ್ಷಗಳ ಕಾಲ ವಿದೇಶಿಗರು ಕೆನಡಾದಲ್ಲಿ ಮನೆ ಖರೀದಿಯನ್ನು ಬ್ಯಾನ್ ಮಾಡಿದೆ. ಇದರಿಂದ ಸ್ಥಳೀಯರಿಗೆ ಉಂಟಾಗಿರುವ ಕೊರತೆಯನ್ನು ನೀಗಿಸುವ ಪ್ರಯತ್ನವನ್ನು ಮಾಡಲಿದೆ.

2021ರ ಚುನಾವಣಾ ಪ್ರಚಾರದ ವೇಳೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಾತ್ಕಾಲಿಕವಾಗಿ ಈ ಸಂಬಂಧ ಎರಡು ವರ್ಷಗಳ ಕ್ರಮಗಳ ಬಗ್ಗೆ ಮಾತನಾಡಿದ್ದರು. ಇದರ ಪರಿಣಾಮ ಮನೆಗಳ ಬೆಲೆ ಏರಿಕೆಗೆ ತಕ್ಕಮಟ್ಟಿಗೆ ಕಡಿವಾಣ ಹಾಕಲು ಸಾಧ್ಯವಾಗಿತ್ತು. ಇದೀಗ ಕೆನಡಾ ಸರ್ಕಾರವು ಎರಡು ವರ್ಷಗಳ ಕಾಲ ವಿದೇಶಿಗರ ಮನೆ ಖರೀದಿ ಮೇಲೆ ನಿಷೇಧ ಹೇರಿದೆ.

ಇದನ್ನೂ ಓದಿ | ಪ್ರೀತಿಗೆ ಎಲ್ಲಿಯ ಗಡಿ? ಕೆನಡಾ ಯುವತಿ ಈಗ ವಿಜಯಪುರದ ಸೊಸೆ

Exit mobile version