ನವದೆಹಲಿ: ಭಾರತದ(India) ವಿರುದ್ಧ ರಾಜತಾಂತ್ರಿಕ ಸಂಘರ್ಷಕ್ಕೆ (Diplomatic conflict) ಇಳಿದಿರುವ ಕೆನಡಾ ಪ್ರಧಾನಿ ಟ್ರುಡೋ (Canada PM Justin Trudeau) ಅವರ ಜನಪ್ರಿಯತೆಯ ಕುಸಿದಿದೆ. ಅವರ ಪ್ರತಿ ಸ್ಪರ್ಧಿ, ಕರ್ನರ್ವೇಟಿವ್ ನಾಯಕ ಪಿಯರೆ ಪೊಲಿಯೆವ್ರೆ (Conservative leader Pierre Poilievre) ಅವರನ್ನು ಕೆನಡಾ ಪ್ರಧಾನಿಯಾಗಿ ಹೆಚ್ಚು ಜನರು ಇಷ್ಟಪಡುತ್ತಿದ್ದಾರೆಂಬ ಮಾಹಿತಿ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಗ್ಲೋಬಲ್ ನ್ಯೂಸ್‌ಗಾಗಿ (Global News) ಇಸ್ಪೋಸ್ ಪೋಲ್ ನಡೆಸಿದ ಸಮೀಕ್ಷೆಯಲ್ಲಿ (Ipsos poll Survey) ಹೆಚ್ಚಿನ ಜನರು ಪಿಯರೆ ಅವರ ಪರವಾಗಿ ಮತ ಚಲಾಯಿಸಿದ್ದಾರೆ. ಅಧಿಕಾರದಲ್ಲಿರುವ ಹಾಲಿ ಪಿಎಂ ಟ್ರುಡೋ ಅವರು ಜನಪ್ರಿಯತೆಯು ಸಾಕಷ್ಟು ಕುಸಿದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರು ಪೈಕಿ ಶೇ. 41ರಷ್ಟು ಜನರು ದೇಶವನ್ನು ಮುನ್ನಡೆಸಲು ಪೊಲಿಯೆವ್ರೆ ಸೂಕ್ತ ಎಂದು ಅಭಿಪ್ರಾಯಪಟ್ಟರೆ, ಶೇ.31 ಜನರು ಟ್ರುಡೋ ಬೆಸ್ಟ್ ಎಂದು ಹೇಳಿದ್ದಾರೆ.
ಈ ಮಧ್ಯೆ, ಟ್ರುಡೋ ಸರ್ಕಾರದ ಪಾಲುದಾರ ಪಕ್ಷವಾಗಿರುವ ಡೆಮಾಕ್ರಟಿಕ್ ಪಾರ್ಟಿಯ ನಾಯಕ, ಖಲಿಸ್ತಾನ ಬೆಂಬಲಿಗ ಜಗಮೀತ್ ಸಿಂಗ್ ಅವರ ಜನಪ್ರಿಯತೆಯೂ ಕುಸಿದಿದೆ. 2022ರ ಸೆಪ್ಟೆಂಬರ್‌ದಿಂದ ಸತತವಾಗಿ ಅವರ ಶ್ರೇಯಾಂಕ ಕುಸಿತ ಕಾಣುತ್ತಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಬಗ್ಗೆ ಭಾರತ ಸರ್ಕಾರದ ವಿರುದ್ಧ ಟ್ರೂಡೋ ಅವರು ಆಧಾರರಹಿತ ಆರೋಪಗಳನ್ನು ಮಾಡಿದ ನಂತರ ಒಟ್ಟಾವಾ ಮತ್ತು ನವದೆಹಲಿ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಗುರುವಾರ ಗ್ಲೋಬಲ್ ನ್ಯೂಸ್ ಈ ಸಮೀಕ್ಷೆಯ ಡೇಟಾವನ್ನು ಪ್ರಕಟಿಸಿದೆ.
ಉಗ್ರರ ಸುರಕ್ಷಿತ ತಾಣವಾಗುತ್ತಿರುವ ಕೆನಡಾ!
ಕೆನಡಾ ರಾಷ್ಟ್ರವು ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿ ಬೆಳೆಯುತ್ತಿರುವುದಕ್ಕೆ ಖ್ಯಾತಿಯಾಗುತ್ತಿದೆ (Canada Safe haven for terrorist) ಎಂದು ನಾನು ಭಾವಿಸುತ್ತೇನೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (MEA spokesperson Arindam Bagchi) ಅವರು ಹೇಳಿದ್ದಾರೆ. ಈ ಮೂಲಕ, ಕೆನಡಾ ಉಗ್ರರ ತಾಣವಾಗಿ ಬದಲಾಗುತ್ತಿದೆ ಎಂದು ಭಾರತವು ಲೆಬಲ್ ಮಾಡಿದೆ. ಜೂನ್‌ನಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಅವರ ಸಾವಿಗೆ ಭಾರತೀಯ ಸರ್ಕಾರಿ ಏಜೆಂಟರು ಕಾರಣ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ “ಆರೋಪಗಳ” ತನಿಖೆಯ ಹೇಳಿಕೆಯ ಕುರಿತು ಭಾರತದ ವಿದೇಶಾಂಗವು (Ministry of External Affairs) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ(India Canada Row).
ಈ ವಿಷಯವನ್ನು ನಿರ್ವಹಣೆ ಮಾಡುವುದರಲ್ಲಿ ಕೆನಡಾ ಸರ್ಕಾರವು ಪೂರ್ವಗ್ರಹಪೀಡಿತವಾಗಿದೆ. ಹರ್ದೀಪ್ ಸಿಂಗ್ ನಿಜ್ಜರ್ ಪ್ರಕರಣದ ಕುರಿತು ಕೆನಡಾ ಸರ್ಕಾರವು, ಭಾರತದೊಂದಿಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: India Canada Row: ಉಗ್ರರ ಸುರಕ್ಷಿತ ತಾಣವಾಗುತ್ತಿರುವ ಕೆನಡಾ! ಭಾರತದ ತೀಕ್ಷ್ಣ ಪ್ರತಿಕ್ರಿಯೆ, ಪಾಕ್‌ಗೆ ಹೋಲಿಸಿತೇ ಸರ್ಕಾರ?
ನಿಜ, ಈ ಪ್ರಕರಣದಲ್ಲಿ ಪೂರ್ವಾಗ್ರಹವೇ ಹೆಚ್ಚಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಆರೋಪಗಳನ್ನು ಮಾಡಿದ್ದಾರೆ ಮತ್ತು ರಾಜತಾಂತ್ರಿಕವಾಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ನಮಗೆ(ಭಾರತ) ಏನು ಅನ್ನಿಸುತ್ತದೆ ಎಂದರೆ ಕೆನಡಾ ಸರ್ಕಾರದ ಈ ಆರೋಪಗಳು ಮೂಲಭೂತವಾಗಿ ರಾಜಕೀಯ ಪ್ರೇರಿತ ಆರೋಪಗಳಂತೆ ತೋರುತ್ತಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ರಾಜತಾಂತ್ರಿಕ ಸಂಬಂಧಗಳು ಸಂಘರ್ಷಕ್ಕೀಡಾಗಿವೆ. ಖಲಿಸ್ತಾನಿ ಉಗ್ರ ನಾಯಕನ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿರುವ ಸಾಧ್ಯತೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೊಡೋ ಅವರು ಆರೋಪಿಸಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ನಡುವೆ ವಿವಾದ ಭುಗಿಲೆದ್ದಿತ್ತು.