Site icon Vistara News

India Canada Row: ಕೆನಡಾ ಮಿಲಿಟರಿ ವೆಬ್‌ಸೈಟ್‌ಗೇ ಗುನ್ನಾ ಇಟ್ಟ ಭಾರತೀಯ ಹ್ಯಾಕರ್ಸ್ ಗ್ರೂಪ್!

Mumbai youtuber nude video goes viral and Case registered

ನವದೆಹಲಿ: ಖಲಿಸ್ತಾನ ಉಗ್ರರಿಗೆ (Khalistan Terrorists) ಆಶ್ರಯ ಕಲ್ಪಿಸುತ್ತಿರುವ ಹಿನ್ನೆಲೆಯಲ್ಲಿ ಕೆನಡಾ (Canada) ಮತ್ತು ಭಾರತದ (India) ನಡುವ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ(diplomatic tensions). ಈ ಮಧ್ಯೆ ಭಾರತೀಯ ಹ್ಯಾಕರ್‌ಗಳ (Indian Hackers Group) ಗುಂಪು ಕೆನಡಾದ ಕೆನಡಾದ ಸಶಸ್ತ್ರ ಪಡೆಗಳ ಅಧಿಕೃತ ವೆಬ್‌ಸೈಟ್ (Canada Army Website) ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ ನಂತರ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆಯು ಹೊಸ ತಿರುವು ಪಡೆದುಕೊಂಡಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ವೆಬ್‌ಸೈಟ್ ಅನ್ನು ‘ಇಂಡಿಯನ್ ಸೈಬರ್ ಫೋರ್ಸ್’ ಹ್ಯಾಕ್ ಮಾಡಿದೆ ಎಂದು ವರದಿಯಾಗಿದೆ. ಈ ಗುಂಪು, ವೆಬ್‌ಸೈಟ್ ನಿಷ್ಕ್ರಿಯವಾಗಿರವ ಸ್ಕ್ರೀನ್ ಶಾಟ್ ಅನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದೆ.

ನಮ್ಮ ಶಕ್ತಿಯನ್ನು ಎದುರಿಸಲು ಸಿದ್ಧವಾಗಿರಿ ಎಂದು ಸೆಪ್ಟೆಂಬರ್ 21ರಂದು ಹ್ಯಾಕರ್‌ಗಳ ಗುಂಪು ಹೇಳುವ ಮೂಲಕ, ಕೆನಡಿಯನ್ ಸೈಬರ್‌ ವ್ಯವಸ್ಥೆಯ ಮೇಲೆ ದಾಳಿ ನಡೆಸುವ ಮುನ್ಸೂಚನೆ ನೀಡಿತ್ತು. ಖಲಿಸ್ತಾನ ಉಗ್ರನ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಭಾರತ ವಿರೋಧಿ ನೀತಿ ಪ್ರದರ್ಶಿಸಿದ ಮಾರನೇ ದಿನವೇ ಹ್ಯಾಕರ್ ಗುಂಪು ಈ ಧಮ್ಕಿಯನ್ನು ಹಾಕಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: India Canada Row: ಕೆನಡಾದಲ್ಲಿ ನಡೆದ ಖಲಿಸ್ತಾನ್‌ ಪರ ರ‍್ಯಾಲಿಗೆ ಜನರೇ ಇಲ್ಲ!

ರಾಷ್ಟ್ರೀಯ ರಕ್ಷಣಾ ವಿಭಾಗದ ಮಾಧ್ಯಮ ಸಂಬಂಧಗಳ ಮುಖ್ಯಸ್ಥ ಡೇನಿಯಲ್ ಲೆ ಬೌಥಿಲಿಯರ್ ಅವರು ದಿ ಗ್ಲೋಬ್ ಮತ್ತು ಮೇಲ್‌ನೊಂದಿಗೆ ಮಾತನಾಡುತ್ತಾ, ”ಅಡಚಣೆಯು ಮಧ್ಯಾಹ್ನದ ಸುಮಾರಿಗೆ ಪ್ರಾರಂಭವಾಯಿತು. ಆದರೆ, ನಾವು ಅದನ್ನು ಸರಿಪಡಿಸಿದೆವು. ಕೆಲವು ಡೆಸ್ಕ್‌ಟಾಪ್ ಬಳಕೆದಾರರನ್ನು ಹೊರತುಪಡಿಸಿ, ಹೆಚ್ಚಿನ ಮೊಬೈಲ್ ಸಾಧನಗಳಲ್ಲಿ ಜಾಲತಾಣ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಸಿಸ್ಟಂಗಳಲ್ಲಿ ಸಂಕ್ಷಿಪ್ತ ಹ್ಯಾಕಿಂಗ್‌ನ ಯಾವುದೇ ಹೆಚ್ಚು ಪರಿಣಾಮ ಬೀರಿಲ್ಲ ಎಂದು ಅವರು ತಿಳಿಸಿದ್ದಾರೆ.

ಹ್ಯಾಕ್ ಮಾಡಲಾದ ವೆಬ್‌ಸೈಟ್ ಕೆನಡಾದ ಸರ್ಕಾರ ಮತ್ತು ಅದರ ರಾಷ್ಟ್ರೀಯ ರಕ್ಷಣಾ ಇಲಾಖೆಯ ಸಾರ್ವಜನಿಕ ಸೈಟ್‌ಗಳು ಮತ್ತು ಆಂತರಿಕ ನೆಟ್‌ವರ್ಕ್‌ಗಳಿಂದ ಪ್ರತ್ಯೇಕ ಘಟಕವಾಗಿದೆ. ಕೆನಡಾದ ನೌಕಾಪಡೆ, ವಿಶೇಷ ಕಮಾಂಡ್ ಗ್ರೂಪ್‌ಗಳು, ವಾಯು ಮತ್ತು ಬಾಹ್ಯಾಕಾಶ ಕಾರ್ಯಾಚರಣೆಗಳು, ಕೆನಡಿಯನ್ ಪಡೆಗಳನ್ನು ಒಳಗೊಂಡ ಸಮಿತಿಯು ಈ ಕುರಿತು ತನಿಖೆ ನಡೆಸುತ್ತಿವೆ ಎಂಬ ಮಾಹಿತಿಯನ್ನು ಮಾಧ್ಯಮಗಳ ವರದಿಯು ಹೊರ ಹಾಕಿವೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version