ವಾಷಿಂಗ್ಟನ್: ಕಾರಿನಲ್ಲಿ ಲಾಂಗ್ ಡ್ರೈವ್ ಹೋಗೋದು ಬಹುತೇಕ ಎಲ್ಲರೂ ಇಷ್ಟ ಪಡುತ್ತಾರೆ. ತಣ್ಣನೇ ಎ ಸಿ ಹಾಕೊಂಡು ಕಿಲೋಮೀಟರ್‌ಗಟ್ಟಲೇ ಕಾರು ಚಲಾಯಿಸೋದೇ ಒಂದು ಕ್ರೇಜ್. ಕಾರು(Car) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಕಾರು ಪ್ರಿಯರಿಗೊಂದು ಶಾಕಿಂಗ್ ವಿಚಾರವೊಂದು ಪತ್ತೆಯಾಗಿದೆ. ಕಾರಿನಲ್ಲಿ ಉತ್ಪತ್ತಿಯಾಗಿರುವ ರಾಸಾಯನಿಕವೊಂದನ್ನು ಶ್ವಾಸಿಸುವುದರಿಂದ ಜನ ಕ್ಯಾನ್ಸರ್‌ಗೆ(Cancer) ತುತ್ತಾಗುತ್ತಾರೆ ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಅಮೆರಿಕಾದ ಪರಿಸರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧಕರು(Environmental Science & Technology) ಈ ಅಧ್ಯಯನ ನಡೆಸಿ ವರದಿ, ನೀಡಿದ್ದು, ಕಾರಿನೊಳಗೆ ಹೊರಬರುವ ಅಪಾಯಕಾರಿ ರಾಸಾಯನಿಕವನ್ನು(Cancer-Causing Chemicals) ಉಸಿರಾಡುವುದರಿಂದ ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಮೆರಿಕ ರಾಷ್ಟ್ರೀಯ ಟಾಕ್ಸೋಲಾಜಿ ಕಾರ್ಯಕ್ರಮದಡಿಯಲ್ಲಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಅದಕ್ಕಾಗಿ ಅವರು 2015 ಮತ್ತು 2019ರನಡುವೆ ತಯಾರಾಗಿರುವ 101 ಎಲ್ಲಾ ರೀತಿಯ ಅಂದರೆ ಎಲೆಕ್ಟ್ರಿಕ್, ಗ್ಯಾಸ್ ಮತ್ತು ಹೈಬ್ರಿಡ್ ಕಾರಗಳನ್ನು ಮಾದರಿಗಳನ್ನಾಗಿ ತೆಗೆದುಕೊಂಡಿದ್ದಾರೆ. ಈ ಕಾರುಗಳು ಶೇ.99ರಷ್ಟು ಕಾರುಗಳು TCIPP ಎಂಬ ಜ್ವಾಲೆ ನಿವಾರಕ ಸಾಧನವನ್ನು ಹೊಂದಿದೆ. ಇವುಗಳು ನೇರವಾಗಿ ಮನುಷ್ಯನ ನರಗಳು, ಸಂತಾನೋತ್ಪತ್ತಿ ಶಕ್ತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕಾರುಗಳಲ್ಲಿ ಪ್ರತಿನಿತ್ಯ ಒಂದು ಗಂಟೆಗಳ ಕಾಲ ಕಳೆದರೆ ಜನ ನಿಧಾನವಾಗಿ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಡ್ಯೂಕ್ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕರಾದ ರೆಬೆಕ್ಕಾ ಹೋಹೆನ್ ಮಾತನಾಡಿದ್ದು, ಪ್ರತಿನಿತ್ಯ ಕಾರಿನಲ್ಲೇ ಬಹುದೂರ ಪ್ರಯಾಣಿಸುವವರು ಮತ್ತು ಮಕ್ಕಳಲ್ಲಿ ಈ ಸಮಸ್ಯೆ ಅತಿ ಹೆಚ್ಚಾಗಿ ಕಂಡುಬರುತ್ತಿದೆ. ಬೇಸಿಗೆ ಕಾಲದಲ್ಲಿ ಕಾರಿನ ಸೀಟುಗಳಿಂದ ಈ ರಾಸಾಯನಿಕಗಳು ಅತಿ ಹೆಚ್ಚಾಗಿ ಹೊರಬರುತ್ತವೆ. ಇದು ಕ್ಯಾನ್ಸರ್‌ಗೆ ತುತ್ತು ಮಾಡುವಂತೆ ಅಪಾಯಕಾರಿ ರಾಸಾಯನಿಕಗಳಾಗಿವೆ. ಕಾರು ತಯಾರಕರು ಸೀಟಿನ ಒಳಗೆ ತುಂಬಿಸುವ ವಸ್ತುಗಳಿಗೆ(seat foam) ಮತ್ತು ಕಾರಿನ ಒಳಗಿರುವ ಇತರೇ ವಸ್ತುಗಳಿಗೆ ಬಹುಕಾಲ ಬಾಳಿಕೆ ಬರುವಂತೆ ಮಾಡುವ ಉದ್ದೇಶದಿಂದ ರಾಸಾಯನಿಕಗಳನ್ನು ಸೇರಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:Gurpatwant Singh Pannun: ಪನ್ನುನ್ ಹತ್ಯೆ ಸಂಚಿನಲ್ಲಿ ಭಾರತದ ಕೈವಾಡ; ಅಮೆರಿಕ ಆರೋಪಕ್ಕೆ ರಷ್ಯಾ ಟಾಂಗ್
ಇನ್ನು ಈ ಬಗ್ಗೆ ಆರೋಗ್ಯ ಸುರಕ್ಷತೆ ಮತ್ತು ಔಷಧಿ ವಿಭಾಗದ ನಿರ್ದೇಶಕ ಪ್ಯಾಟ್ರಿಕ್ ಮಾರಿಸನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾರಿನಲ್ಲಿ ಬಳಸುವ ಫಯರ್ ಫ್ಲೇಮ್ ನಿಯಂತ್ರಕ ರಾಸಾಯನಿಕಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಮುನುಷ್ಯನನ್ನು ಕ್ಯಾನ್ಸರ್‌ಗೆ ದೂಡುತ್ತಿವೆ. ಈ ರಾಸಾಯನಿಕಗಳು ಬೆಂಕಿಯನ್ನು ಜ್ವಾಲೆಯನ್ನು ನಂದಿಸುವ ಬದಲು ಒಳಗಿದ್ದ ವ್ಯಕ್ತಿಗೆ ಉಸಿರು ಕಟ್ಟುವಂತೆ ಮಾಡುತ್ತದೆ. ಹೀಗಾಗಿ ಅಮೆರಿಕ ರಸ್ತೆ ಸುರಕ್ಷತಾ ಪ್ರಾಧಿಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.