ಲಂಡನ್: ಬ್ರಿಟನ್ ಪ್ರಧಾನಿ, ಭಾರತ ಮೂಲದ ರಿಷಿ ಸುನಕ್ (Rishi Sunak) ಅವರ ನಿವಾಸ ಹಾಗೂ ಕಚೇರಿಯಾದ ಡೌನಿಂಗ್ ಸ್ಟ್ರೀಟ್ ಕಟ್ಟಡದ ಗೇಟ್‌ಗೆ ವ್ಯಕ್ತಿಯೊಬ್ಬ ಕಾರು ನುಗ್ಗಿಸಿದ್ದಾನೆ. ಡೌನಿಂಗ್ ಸ್ಟ್ರೀಟ್ ಕಟ್ಟಡದ ಗೇಟ್‌ಗಳಿಗೆ ಡಿಕ್ಕಿಯಾಗುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರಿನ ಚಾಲಕನನ್ನು ಬಂಧಿಸಿದ್ದಾರೆ. ಇದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಶಂಕಾಸ್ಪದವಾಗಿ ಕಾರು ಡಿಕ್ಕಿ ಹೊಡೆಸಿದ ಕಾರಣ ಸಂಚು ರೂಪಿಸಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮದ್ಯಪಾನ ಮಾಡಿದ ಕಾರಿನ ಚಾಲಕನು ಕುಡಿದ ಮತ್ತಿನಲ್ಲಿ ಕಟ್ಟಡದ ಗೇಟ್‌ಗಳಿಗೆ ಕಾರು ನುಗ್ಗಿಸಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ ಕೂಡಲೇ, “ನಾನು ಪ್ರಧಾನಮಂತ್ರಿ, ಒಳಗೆ ಹೋಗಲು ಬಿಡಿ” ಎಂಬುದಾಗಿ ಜೋರಾಗಿ ಕೂಗಿದ್ದಾನೆ ಎಂಬುದಾಗಿ ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ. ರಿಷಿ ಸುನಕ್ ನಿವಾಸದ ಗೇಟ್‌ಗೆ ಕಾರು ನುಗ್ಗಿಸಿದ ಕಾರಣ ಭದ್ರತೆ ಹೆಚ್ಚಿಸಲಾಗಿದೆ. ಆದಾಗ್ಯೂ, ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಿಷಿ ಸುನಕ್ ರಾಯರ ಭಕ್ತ
ರಿಷಿ ಸುನಕ್ ಅವರು ಬ್ರಿಟನ್‌ನಲ್ಲಿ ನೆಲೆಸಿದರೂ, ಮಹೋನ್ನತ ಹುದ್ದೆ ಹೊಂದಿದ್ದರೂ ಭಾರತೀಯತೆಯನ್ನು ಮರೆತಿಲ್ಲ. ಅವರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಭಕ್ತರು. ಪ್ರತಿ ಗುರುವಾರ ಅವರು ಉಪವಾಸ ಮಾಡಿ ರಾಯರ ಪೂಜೆ ಮಾಡುತ್ತಾರೆ. ಹೀಗೆಂದು ಸ್ವತಃ ಸುಧಾ ಮೂರ್ತಿ ಅವರೇ ಹೇಳಿದ್ದಾರೆ. ತಮ್ಮ ಅಳಿಯ ರಾಯರ ಪೂಜೆ ಮಾಡುವ ವಿಚಾರವನ್ನು ವಿವರಿಸುವ ವಿಡಿಯೊವೊಂದು ಫೇಸ್ಬುಕ್ನಲ್ಲಿ ಹರಿದಾಡಿದೆ. ಅದರಲ್ಲಿ ಅವರು ಸುನಕ್ ಅವರ ಧಾರ್ಮಿಕ ಪ್ರಜ್ಞೆಯನ್ನು ಕೊಂಡಾಡಿದ್ದಾರೆ.
ಕಾರು ಡಿಕ್ಕಿಯಾದ ವಿಡಿಯೊ
So a few days ago, a Uhaul try’s to breach the White House, and today a car crashes into Downing Street Gates. London s’s Whitehall is closed. pic.twitter.com/mmeSvmAcoa
— Lord Of The Pepe (@LordOfThePepes) May 25, 2023
ರಿಷಿ ಸುನಕ್ ಅವರು ಪಂಜಾಬ್ ಮೂಲದವರು. ಅಲ್ಲದೆ ಶತಮಾನಗಳ ಹಿಂದೆಯೇ ಅವರ ಪೂರ್ವಿಕರು ಬ್ರಿಟನ್ ಸೇರಿಕೊಂಡಿದ್ದರು. ಆದರೆ, ರಿಷಿ ಸುನಕ್ ನಮ್ಮ ದೇಶದ ಧಾರ್ಮಿಕ ಸಂಪರ್ಕವನ್ನು ಕಳೆದುಕೊಂಡಿಲ್ಲ. ಪ್ರತಿ ಗುರುವಾರ ಉಪವಾಸ ಮಾಡಿ ರಾತ್ರಿ ಮಾತ್ರ ಊಟ ಮಾಡುತ್ತಾರೆ ಎಂದು ಸುಧಾ ಮೂರ್ತಿ ಅವರು ತಮ್ಮ ಸುತ್ತ ನೆರೆದಿದ್ದವರಿಗೆ ವಿವರಿಸುವ ವಿಡಿಯೊ ಓಂ ಶ್ರೀ ರಾಘವೇಂದ್ರಾಯ ನಮಃ ಎಂಬ ಫೇಸ್ಬುಕ್ ಪೇಜ್ನಲ್ಲಿದೆ.
ಇದನ್ನೂ ಓದಿ: Rishi Sunak : ಬ್ರಿಟನ್ ಪ್ರಧಾನಿ ರಿಷಿ ಸುನಕ್ ರಾಯರ ಭಕ್ತ, ಪ್ರತಿ ಗುರುವಾರ ಉಪವಾಸ ಮಾಡ್ತಾರೆ