Site icon Vistara News

Charles Sobhraj | ಸೀರಿಯಲ್‌ ಕಿಲ್ಲರ್‌ ಶೋಭರಾಜ್‌ ಬಿಡುಗಡೆಗೆ ನೇಪಾಳ ಸುಪ್ರೀಂ ಆದೇಶ, ಭಾರತದ ಜತೆ ಈತನ ನಂಟೇನು?

French Serial Killer Charles Sobhraj

ಕಠ್ಮಂಡು: ಫ್ರಾನ್ಸ್‌ ಸೀರಿಯಲ್‌ ಕಿಲ್ಲರ್‌ ಚಾರ್ಲ್ಸ್‌ ಶೋಭರಾಜ್‌ನನ್ನು (78) (Charles Sobhraj) ಬಿಡುಗಡೆಗೊಳಿಸಬೇಕು ಎಂದು ನೇಪಾಳ ಸುಪ್ರೀಂ ಕೋರ್ಟ್‌ ಬುಧವಾರ ಆದೇಶಿಸಿದೆ. ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿ ವಿಚಾರಣೆ ನಡೆಸಿದ ಸುಪ್ರೀ ಕೋರ್ಟ್‌, ಚಾರ್ಲ್ಸ್‌ ಶೋಭರಾಜ್‌ನನ್ನು ಬಿಡುಗಡೆಗೊಳಿಸಿ, 15 ದಿನದಲ್ಲಿ ಆತನ ದೇಶಕ್ಕೆ ವಾಪಸ್‌ ಕಳುಹಿಸಬೇಕು ಎಂದು ಆದೇಶಿಸಿದೆ. ಸದ್ಯ, ಶೋಭರಾಜ್‌ ಸೆಂಟ್ರಲ್‌ ಜೈಲಿನಲ್ಲಿದ್ದಾನೆ.

20ಕ್ಕೂ ಹೆಚ್ಚು ಪ್ರವಾಸಿಗರ ಕೊಲೆ
ಫ್ರಾನ್ಸ್‌ ನಾಗರಿಕನಾಗಿರುವ ಚಾರ್ಲ್ಸ್‌ ಶೋಭರಾಜ್‌, 20ಕ್ಕೂ ಹೆಚ್ಚಿನ ವಿದೇಶಿ ಪ್ರವಾಸಿಗರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷೆ ಅನುಭವಿಸಿದ್ದಾನೆ. 1975ರಲ್ಲಿ ಅಮೆರಿಕ ಪ್ರವಾಸಿಗರೊಬ್ಬರನ್ನು ಹತ್ಯೆ ಮಾಡಿದ ಕಾರಣ ನೇಪಾಳ ಸುಪ್ರೀಂ ಕೋರ್ಟ್‌ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೀವಾವಧಿ ಶಿಕ್ಷೆ ಅನುಭವಿಸಿದ ಬಳಿಕವೂ ಸುಮ್ಮನಿರದ ಚಾರ್ಲ್ಸ್‌, ಕೆನಡಾ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದ. ಇದೇ ಕಾರಣಕ್ಕಾಗಿ ಕಠ್ಮಂಡುವಿನಲ್ಲಿ ಬಂಧಿತನಾಗಿದ್ದ. ನ್ಯಾಯಾಲಯವು ಮತ್ತೆ ಇವನಿಗೆ ಎರಡನೇ ಬಾರಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈಗ ಬಿಡುಗಡೆಗೆ ಆದೇಶಿಸಿದೆ.

ಭಾರತದ ಜತೆ ಹೊಂದಿರುವ ನಂಟೇನು?
ಶೋಭರಾಜ್‌ ತಂದೆ ಭಾರತದವರು, ಈತನ ತಾಯಿ ವಿಯೇಟ್ನಾಂನವರು. ಹಾಗಾಗಿ, ಈತನಿಗೂ ಭಾರತಕ್ಕೂ ನಂಟಿದೆ. ಅಲ್ಲದೆ, ಭಾರತದಲ್ಲಿ ಇಬ್ಬರು ಪ್ರವಾಸಿಗರನ್ನು ಕೊಂದ ಹಿನ್ನೆಲೆಯಲ್ಲಿ ಈತ ಭಾರತದ ಜೈಲಿನಲ್ಲಿ 21 ವರ್ಷ ಕಳೆದಿದ್ದಾನೆ. ಶೋಭರಾಜ್‌ ವಿರುದ್ಧ ನಕಲಿ ಪಾಸ್‌ಪೋರ್ಟ್‌ ಆರೋಪವೂ ಇದೆ. ಈತನನ್ನು ‘ದಿ ಬಿಕಿನಿ ಕಿಲ್ಲರ್‌’ ಎಂದೂ ಕರೆಯುತ್ತಾರೆ.

ಇದನ್ನೂ ಓದಿ | Umesh Reddy | ವಿಕೃತ ಕಾಮಿ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Exit mobile version