ಬೀಜಿಂಗ್: ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರ ಯಾವುದು ಎಂದರೆ ಚೀನಾ (China population) ಎಂದು ಹೇಳುವ ಅಭ್ಯಾಸ ನಮಗೆ ಬಾಲ್ಯದಿಂದಲೂ ಇದೆ. ಆದರೆ ಇದೀಗ ಅದರ ಬದಲಾವಣೆ ಆಗುವ ಸಾಧ್ಯತೆಗಳು ಎದ್ದು ಕಾಣಲಾರಂಭಿಸಿವೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಜನಸಂಖ್ಯೆ ಏರಿಕೆಯಾಗುತ್ತಲೇ ಸಾಗುತ್ತಿದ್ದರೆ, ಇನ್ನೊಂದು ಕಡೆ ಚೀನಾ 60 ವರ್ಷಗಳ ನಂತರ ಇದೇ ಮೊದಲನೇ ಬಾರಿಗೆ ಜನಸಂಖ್ಯೆಯಲ್ಲಿ ಇಳಿಕೆಯನ್ನು ದಾಖಲಿಸಿದೆ.
ಇದನ್ನೂ ಓದಿ: Abdul Rehman Makki | ಚೀನಾ ವಿರುದ್ಧ ಭಾರತ ಗೆಲುವು, ಪಾಕಿಸ್ತಾನದ ಅಬ್ದುಲ್ ರೆಹಮಾನ್ ಮಕ್ಕಿ ಜಾಗತಿಕ ಉಗ್ರ ಪಟ್ಟಿಗೆ ಸೇರ್ಪಡೆ
ಹೌದು. 2022ರ ಅಂತ್ಯಕ್ಕೆ ಚೀನಾದಲ್ಲಿ 141 ಕೋಟಿ ಜನರಿರುವುದಾಗಿ ವರದಿಯಿದೆ. ಅದು 2021ರ ಅಂತ್ಯಕ್ಕೆ ಹೋಲಿಸಿದರೆ 8.5 ಲಕ್ಷದಷ್ಟು ಕಡಿಮೆಯಿದೆ. ಈ ಹಿಂದೆ 1960 ರಲ್ಲಿ ಚೀನಾದ ಜನಸಂಖ್ಯೆಯಲ್ಲಿ ಇಳಿಕೆ ದಾಖಲಾಗಿತ್ತು. ಅದಾದ ನಂತರ ಏರಿಕೆಯಾಗುತ್ತಲೇ ಇದ್ದ ಜನಸಂಖ್ಯೆ ಇದೀಗ ಇಳಿಕೆ ದಾಖಲಿಸಿದೆ.
ಅಂದ ಹಾಗೆ ಚೀನಾವು ಜನಸಂಖ್ಯೆ ನಿಯಂತ್ರಣಕ್ಕೆ 1980ರಲ್ಲಿ ಹೊಸ ನಿಯಮವನ್ನು ಮಾಡಿತು. ದಂಪತಿಯು ಒಬ್ಬ ಮಗುವಿಗೆ ಮಾತ್ರ ಜನ್ಮ ನೀಡುವುದಕ್ಕೆ ಅನುಮತಿ ನೀಡಿತು. ಇದರಿಂದಾಗಿ ಇದೀಗ ಚೀನಾದಲ್ಲಿ ಯುವ ಜನರ ಸಂಖ್ಯೆ ಅತ್ಯಂತ ಕಡಿಮೆಯಿದ್ದು, ಹಿರಿಯ ನಾಗರಿಕರ ಸಂಖ್ಯೆ ಅತಿಹೆಚ್ಚಿದೆ. ಇದು ಆರ್ಥಿಕತೆಗೆ ಹೊಡೆತ ಬೀರುವ ಸಾಧ್ಯತೆಯಿದೆ. ಹಾಗಾಗಿ ಸಮತೋಲನ ತರುವ ನಿಟ್ಟಿನಲ್ಲಿ ಚೀನಾ ಈಗ ದಂಪತಿಗೆ ಮೂರು ಮಕ್ಕಳನ್ನು ಹೊಂದುವುದಕ್ಕೆ ಅನುಮತಿ ನೀಡಿದೆ. ಮೂರು ಮಕ್ಕಳನ್ನು ಮಾಡಿಕೊಳ್ಳುವವರಿಗೆ ಪ್ರೋತ್ಸಾಹವನ್ನೂ ನೀಡಲಾರಂಭಿಸಿದೆ.
ಇದನ್ನೂ ಓದಿ: NASA | ಚಂದ್ರನ ಮೇಲೂ ಹಕ್ಕು ಸಾಧಿಸಲು ಹವಣಿಸುತ್ತಿದೆ ಚೀನಾ: ನಾಸಾ ಮುಖ್ಯಸ್ಥ ಆರೋಪ
ಭಾರತದ ಜನಸಂಖ್ಯೆ ಸದ್ಯ 140 ಕೋಟಿ ಇದೆ. ಒಂದು ವೇಳೆ ಚೀನಾ ಜನಸಂಖ್ಯೆಯಲ್ಲಿ ಇಳಿಕೆ ಹಾಗೂ ಭಾರತ ಏರಿಕೆ ದಾಖಲಿಸುತ್ತ ಹೋದರೆ ಇನ್ನು ಕೆಲ ವರ್ಷಗಳಲ್ಲಿ ಭಾರತ ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಇದನ್ನೂ ಓದಿ | Pak defense Minister | ರಾತ್ರಿ 8 ಗಂಟೆಯ ಬಳಿಕ ಮಕ್ಕಳನ್ನು ಮಾಡದಿದ್ದರೆ ಜನಸಂಖ್ಯೆ ನಿಯಂತ್ರಣ: ಪಾಕ್ ರಕ್ಷಣಾ ಸಚಿವ