Site icon Vistara News

China Covid Information | ಕೊರೊನಾ ಸೋಂಕಿತರ ಮಾಹಿತಿ ವಿಚಾರದಲ್ಲಿ ಚೀನಾ ಕಳ್ಳಾಟ, ವರದಿ ನೀಡದಿರಲು ತೀರ್ಮಾನ

Coronavirus In China

ಬೀಜಿಂಗ್‌: ಕೊರೊನಾ ಹಾವಳಿ ಶುರುವಾದಾಗಿನಿಂದಲೂ ಸೋಂಕಿತರು, ಸಾವಿನ ಕುರಿತು ಮಾಹಿತಿ ನೀಡುವಲ್ಲಿ ಚೀನಾ ಕಳ್ಳಾಟ ಆಡುತ್ತಿದೆ. ಇದುವರೆಗೆ ನಿತ್ಯ ಕನಿಷ್ಠ ಪ್ರಕರಣಗಳ ಕುರಿತಷ್ಟೇ ಚೀನಾ ಮಾಹಿತಿ (China Covid Information) ನೀಡುತ್ತಿತ್ತು. ಆದರೆ, ಕಮ್ಯುನಿಸ್ಟ್‌ ರಾಷ್ಟ್ರದಲ್ಲಿ ಡಿಸೆಂಬರ್‌ 1ರಿಂದ 20ರ ಅವಧಿಯಲ್ಲಿ 25 ಕೋಟಿ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ಸೋರಿಕೆಯಾದ ಕಾರಣ ಈಗ ನಿತ್ಯ ಕೊರೊನಾ ಸೋಂಕಿತರ ಮಾಹಿತಿ ನೀಡದಿರಲು ಚೀನಾ ತೀರ್ಮಾನಿಸಿದೆ.

ಚೀನಾದಲ್ಲಿ ಒಂದೇ ದಿನ 3.7 ಕೋಟಿ ಜನರಿಗೆ ಕೊರೊನಾ ತಗುಲಿದ್ದು ಜಾಗತಿಕ ದಾಖಲೆಯಾಗಿದೆ. ಅಲ್ಲದೆ, 20 ದಿನದಲ್ಲಿ 25 ಕೋಟಿ ಕೇಸ್‌ ದಾಖಲಾಗಿರುವುದು ಜಗತ್ತಿನ ಗಮನ ಸೆಳೆದಿದೆ. ಹಾಗಾಗಿ, ಕಳ್ಳಾಟ ಹೆಚ್ಚಿಸಿರುವ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು (NHC) ದಿನನಿತ್ಯದ ಪ್ರಕರಣಗಳ ಮಾಹಿತಿ ನೀಡುವುದಿಲ್ಲ ಎಂದು ಘೋಷಿಸಿದೆ.

ಹಾಗೆ ನೋಡಿದರೆ, ಚೀನಾದಲ್ಲಿ ನಿತ್ಯ ಕೋಟ್ಯಂತರ ಜನರಿಗೆ ಸೋಂಕು ದೃಢಪಡುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಸೋರಿಕೆಯಾದ ವರದಿಯೂ ಇದನ್ನೇ ತಿಳಿಸಿದೆ. ಆದರೆ, ಡಿಸೆಂಬರ್‌ 23ರಂದು ಚೀನಾ ನೀಡಿದ ಮಾಹಿತಿ ಪ್ರಕಾರ, ಒಂದು ದಿನದಲ್ಲಿ ಕೇವಲ 4,128 ಕೇಸ್‌ ದಾಖಲಾಗಿವೆ ಎಂದಿದೆ. ಆದರೆ, ಸುಳ್ಳು ಮಾಹಿತಿ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ | Covid Cases In China | ಚೀನಾದಲ್ಲಿ ಒಂದೇ ದಿನ 3.7 ಕೋಟಿ ಜನಕ್ಕೆ ಸೋಂಕು, ಇದು ಜಾಗತಿಕ ದಾಖಲೆ

Exit mobile version