Site icon Vistara News

Chinese balloon : ಚೀನಾದ ಸಂಶಯಾಸ್ಪದ ಪತ್ತೆದಾರಿ ಬಲೂನನ್ನು ನಾಶಪಡಿಸಿದ ಅಮೆರಿಕ

Chinese balloon: America destroyed China's suspicious spy balloon

ವಾಷಿಂಗ್ಟನ್: ಅಮೆರಿಕದ ಆಕಾಶದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಚೀನಾ ಮೂಲದ ಬಲೂನನ್ನು ನಾಶಪಡಿಸಲಾಗಿದೆ. ಚೀನಾ ಅಮೆರಿಕ ವಿರುದ್ಧ ಪತ್ತೆದಾರಿಕೆ ನಡೆಸಲು (Chinese balloon) ಈ ಬಲೂನನ್ನು ಬಿಟ್ಟಿತ್ತು ಎನ್ನಲಾಗಿದೆ. ಅಮೆರಿಕ ಮತ್ತು ಚೀನಾ ನಡುವಣ ಸಂಬಂಧ ದಿನೇದಿನೆ ಬಿಗಡಾಯಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಪೆಂಟಗನ್‌ ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಅಮೆರಿಕದ ಮೊಂಟಾನಾದಲ್ಲಿರುವ ಮಾಲ್ಮ್​ಸ್ಟ್ರೋಮ್​ ಏರ್​ಫೋರ್ಸ್​​​ನಲ್ಲಿರುವ ಅಣ್ವಸ್ತ್ರ ಕ್ಷಿಪಣಿ ಉಡಾವಣಾ ನೆಲೆಯ ಮೇಲ್ಭಾಗದಲ್ಲಿ ಚೀನಾದ ಪತ್ತೆದಾರಿ ಬಲೂನ್​ವೊಂದು ಹಾರಾಡುತ್ತಿರುವ ಬಗ್ಗೆ ಅಮೆರಿಕದ ರಕ್ಷಣಾ ವಿಭಾಗ ಪೆಂಟಗನ್​ ಫೆ.2ರಂದು ಹೇಳಿತ್ತು. ಅದರ ಬೆನ್ನಲ್ಲೇ ಈಗ ಲ್ಯಾಟಿನ್​ ಅಮೆರಿಕ ಪ್ರಾಂತ್ಯದ ಆಕಾಶದಲ್ಲೂ ಚೀನಾದ ಪತ್ತೇದಾರಿ ಬಲೂನ್​ ಹಾರಾಡುತ್ತಿರುವುದು ವರದಿಯಾಗಿತ್ತು.

ಅಮೆರಿಕದ ದಕ್ಷಿಣ ಕರಾವಳಿಯಲ್ಲಿ ಬಲೂನನ್ನು ಸ್ಫೋಟಿಸಲಾಗಿದೆ ಎಂದು ರಾಯ್ಟರ್ಸ್‌ ವರದಿ ಮಾಡಿದೆ. ದಕ್ಷಿಣ ಕರಾವಳಿಯಲ್ಲಿ ತಾತ್ಕಾಲಿಕವಾಗಿ ವೈಮಾನಿಕ ಹಾರಾಟವನ್ನು ನಿರ್ಬಂಧಿಸಲಾಗಿತ್ತು. ಅಮೆರಿಕ ಸೇನಾ ಪಡೆ ಜೆಟ್‌ ಮೂಲಕ ಬಲೂನನ್ನು ಹೊಡೆದುರುಳಿಸಿದೆ.

Exit mobile version