ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಖ್ಯಾತ ಪ್ರಧಾನಿ ಜೆಸಿಂಡಾ ಆಡರ್ನ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಲೇಬರ್ ಪಕ್ಷದ ಕ್ರಿಸ್ ಹಿಪ್‌ಕಿನ್ಸ್ (Chris Hipkins) ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ನೂತನ ಪ್ರಧಾನಿಯನ್ನಾಗಿ 41 ವರ್ಷದ ಹಿಪ್‌ಕಿನ್ಸ್ ಅವರನ್ನು ಪಕ್ಷದ ನಾಯಕರು ಅವಿರೋಧವಾಗಿ ಆಯ್ಕೆ ಮಾಡಿದ್ದು, ಜನವರಿ 25ರಂದು 41ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ನ್ಯೂಜಿಲ್ಯಾಂಡ್ ಪ್ರಧಾನಿಯಾಗಿ ಜಾಗತಿಕ ಮನ್ನಣೆ ಗಳಿಸಿದ್ದ ಜೆಸಿಂಡಾ ಆಡರ್ನ್ ಅವರು ಏಕಾಏಕಿ ರಾಜೀನಾಮೆ ಘೋಷಿಸಿದ್ದಾರೆ. ಯಾವುದೇ ವಿವಾದ, ಭ್ರಷ್ಟಾಚಾರ, ವೈಫಲ್ಯವಿಲ್ಲದಿದ್ದರೂ ಅವರು ಅಧಿಕಾರ ಸಾಕು ಎಂಬ ಮನಸ್ಥಿತಿಯಿಂದಾಗಿ ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಲೇಬರ್ ಪಕ್ಷವು ನೂತನ ಪ್ರಧಾನಿಯನ್ನು ಆಯ್ಕೆ ಮಾಡಿದೆ.
ಯಾರಿವರು ಹಿಪ್‌ಕಿನ್ಸ್?
ವಿದ್ಯಾರ್ಥಿ ಜೀವನದಿಂದಲೇ ಹೋರಾಟ, ಪ್ರತಿಭಟನೆ ಮೂಲಕ ಹೆಸರಾಗಿದ್ದ ಇವರು 2008ರಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ. ಶಿಕ್ಷಣ, ಪೊಲೀಸ್, ಸಾರ್ವಜನಿಕ ಸೇವೆಗಳು ಹಾಗೂ ಕೊರೊನಾ ನಿರ್ವಹಣೆ ಖಾತೆ ನಿಭಾಯಿಸುತ್ತಿದ್ದಾರೆ. ಸರಳ ಜೀವನ, ಸಭ್ಯ ವ್ಯಕ್ತಿತ್ವ ಹೊಂದಿರುವ ಇವರು ಅಷ್ಟೇನೂ ಖ್ಯಾತರಲ್ಲದಿದ್ದರೂ ಲೇಬರ್ ಪಕ್ಷದ ಸದಸ್ಯರ ನೆಚ್ಚಿನ ವ್ಯಕ್ತಿಯಾಗಿದ್ದಾರೆ. ಹಾಗಾಗಿ, ಇವರಿಗೆ ನ್ಯೂಜಿಲ್ಯಾಂಡ್ ಪ್ರಧಾನಿ ಹುದ್ದೆ ಒಲಿದುಬಂದಿದೆ.
ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | ಅಧಿಕಾರ ಸಾಕೆಂದ ಜೆಸಿಂಡಾ ಆಡರ್ನ್, ಮಾಡರ್ನ್ ಜಗತ್ತಿನ ಅಪರೂಪದ ಲೀಡರ್!