Site icon Vistara News

ಹಿಟ್ಲರ್ ಯಹೂದಿಗಳ ಹತ್ಯೆಗೆ ಏಕೆ ಮುಂದಾಗಿದ್ದ ಗೊತ್ತಾಯಲ್ಲ! ಪೋಸ್ಟ್ ಮಾಡಿದ ಉದ್ಯೋಗಿಯ ಜಾಬ್ ಖತಂ

Citibank woman employee loses job over anti-Jewish post

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ (Social Media) ಇಸ್ರೇಲ್‌ ವಿರೋಧಿ(Anti Israel) ಪೋಸ್ಟ್‌ ಷೇರ್ ಮಾಡಿದ ತನ್ನ ಉದ್ಯೋಗಿಯನ್ನು (Woman Employee) ಸಿಟಿ ಬ್ಯಾಂಕ್ (Citi Bank) ಸೇವೆಯಿಂದ ಕಿತ್ತು ಹಾಕಿದ ಘಟನೆ ನಡೆದಿದೆ. ಸಿಟಿ ಪರ್ಸನಲ್ ಬ್ಯಾಂಕರ್ ನೋಜಿಮಾ ಹುಸೈನೋವಾ ಅವರು, ಇಸ್ರೇಲಿ ವಿರುದ್ಧ ಹಿಟ್ಲರ್ ಕೈಗೊಂಡ ಹತ್ಯಾಕಾಂಡ ಸರಿಯಾಗಿತ್ತು ಎನ್ನುವ ಅರ್ಥದ ಪೋಸ್ಟ್ ಅನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಈ ಫೋಸ್ಟ್‌ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಅವರನ್ನು ಉದ್ಯೋಗದಿಂದ ಬ್ಯಾಂಕ್ ವಜಾ ಮಾಡಿದೆ(Israel Palestine War).

”ಹಿಟ್ಲರ್ ಅವರೆಲ್ಲರನ್ನೂ ತೊಡೆದುಹಾಕಲು ಏಕೆ ಬಯಸಿದ್ದರು ಎಂದು ಗೊತ್ತಾದ್ರೆ ಆಶ್ಚರ್ಯವಾಗುವುದಿಲ್ಲ. ಎಂದಿಗೂ ಯಹೂದಿ ವಿರೋಧಿ” ಎಂದು ಪರ್ಸನಲ್ ಬ್ಯಾಂಕರ್ ನೋಜಿಮಾ ಹುಸೈನೋವಾ ಎಕ್ಸ್‌ ವೇದಿಕೆಯಲ್ಲಿ ಫೋಸ್ಟ್ ಹಂಚಿಕೊಂಡಿದ್ದರು. ಗಾಜಾ ಪಟ್ಟಿಯ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ ಮಾಡಿದ ಬೆನ್ನಲ್ಲೇ ಅವರು ಈ ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ಆದರೆ ವ್ಯಾಪಕವಾಗಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವಳೀಗ ಕೆಲಸವನ್ನು ಕಳೆದುಕೊಂಡಿದ್ದಾಳೆ.

ಈ ಸುದ್ದಿಯನ್ನೂ ಓದಿ: ಇವರೇ ನಮ್ಮ ಆಧುನಿಕ ದುರ್ಗೆಯರು! ನವರಾತ್ರಿ, ದುರ್ಗಾಪೂಜೆ ಶುಭಾಶಯ ಕೋರಿದ ಇಸ್ರೇಲ್ ರಾಯಭಾರಿ

ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಟಿ ಗ್ರೂಪ್ ಪ್ರತಿಕ್ರಿಯಿಸಿ, ಪೋಸ್ಟ್ ಹಾಕಿದ ಉದ್ಯೋಗಿ ಕುರಿತು ವಿಚಾರಣೆ ನಡೆಸಿತ್ತಿದ್ದೇವೆ. ನಾವು ಯಾವುದೇ ರೀತಿಯ ಜನಾಂಗೀಯ ವಿರೋಧ ಮತ್ತು ದ್ವೇಷ ಭಾಷಣವನ್ನು ಬೆಂಬಲಿಸುವುದಿಲ್ಲ ಎಂದ ಸಿಟಿ ಗ್ರೂಪ್ ಪೋಸ್ಟ್ ಮಾಡಿತು.

ಕೆಲವು ಸಮಯದ ಬಳಿಕ ಮತ್ತೆ ಪೋಸ್ಟ್ ಮಾಡಿದ ಸಿಟಿ ಗ್ರೂಪ್, ಸಾಮಾಜಿಕ ಮಾಧ್ಯಮದಲ್ಲಿ ಯೆಹೂದಿ ವಿರೋಧಿ ಕಾಮೆಂಟ್ ಅನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಉದ್ಯೋಗದಿಂದ ಕಿತ್ತು ಹಾಕಿದ್ದೇವೆ. ನಾವು ಯೆಹೂದ್ಯ ವಿರೋಧಿ ಮತ್ತು ಎಲ್ಲಾ ದ್ವೇಷದ ಭಾಷಣವನ್ನು ಖಂಡಿಸುತ್ತೇವೆ ಮತ್ತು ನಮ್ಮ ಬ್ಯಾಂಕ್‌ನಲ್ಲಿ ಅದನ್ನು ಸಹಿಸುವುದಿಲ್ಲ ಎಂದು ಬರೆದಿಕೊಂಡಿತ್ತು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version