Site icon Vistara News

Cryptocurrency scam: ಬಹುಕೋಟಿ ಕ್ರಿಪ್ಟೋ‌ಕರೆನ್ಸಿ ಹಗರಣ, 6 ಮಂದಿ ಭಾರತೀಯರ ವಿರುದ್ಧ ಎಫ್‌ಬಿಐ ಆರೋಪ

Cryptocurrency scam FBI accused 6 indian people

ನವದೆಹಲಿ: ಮಿಲಿಯನ್ ಡಾಲರ್ ಕ್ರಿಪ್ಟೋ ಕರೆನ್ಸಿ ಹಗರಣ (Cryptocurrency scam) ಸಂಬಂಧ ಆರು ಭಾರತೀಯ (6 Indians) ವಿರುದ್ಧ ಅಮೆರಿಕ ತನಿಖಾ ಸಂಸ್ಥೆ ಎಫ್‌ಬಿಐ (FBI) ಆರೋಪ ಹೊರಿಸಿದೆ. ಶೈಲೇಶ್‌ಕುಮಾರ್ ಗೊಯಾನಿ, ಬ್ರಿಜೇಶ್‌ಕುಮಾರ್ ಪಟೇಲ್, ಹಿರೇನ್‌ಕುಮಾರ್ ಪಟೇಲ್, ನೈನೇಶ್‌ಕುಮಾರ್ ಪಟೇಲ್, ನೀಲೇಶ್‌ಕುಮಾರ್ ಪಟೇಲ್ ಮತ್ತು ರಾಜು ಪಟೇಲ್ ಕ್ರಿಪ್ಟೋಕರೆನ್ಸಿಗಳನ್ನು ಬಳಸಿಕೊಂಡು ಅಕ್ರಮವಾಗಿ 30 ಮಿಲಿಯನ್ ಡಾಲರ್ ಹಣವನ್ನು ರವಾನಿಸುವ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಫ್‌ಬಿಐ ತನ್ನ ಆರೋಪದಲ್ಲಿ ತಿಳಿಸಿದೆ.

2021 ಜುಲೈರಿಂದ 2023ರ ಸೆಪ್ಟೆಂಬರ್ ಅವಧಿಯಲ್ಲಿ ಈ ಆರು ಭಾರತೀಯರು ಬಿಟ್‌ ಕಾಯಿನ್ ಸೇರಿದಂತೆ ಇತರ ಕ್ರಿಪ್ಟೋ ಕರೆನ್ಸಿಗಳನ್ನು ನಗದಾಗಿ ಪರಿವರ್ತಿಸುವ ಅಕ್ರಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಎಫ್‌ಬಿಐ ಹೇಳಿದೆ.

ಬಿಟ್‌ಕಾಯಿನ್ ಅಥವಾ ಇತರ ಕ್ರಿಪ್ಟೋಕರೆನ್ಸಿಗೆ ಬದಲಾಗಿ ಅಮೆರಿಕ ಪೋಸ್ಟಲ್ ಸೇವೆಯ ಮೂಲಕ ಹಣವನ್ನು ರವಾನಿಸಲು ಸೇವೆಯನ್ನು ಒದಗಿಸಿದ ಅನೇಕ ಡಾರ್ಕ್ ವೆಬ್ ಮಾರುಕಟ್ಟೆಗಳಲ್ಲಿ ಮಾರಾಟಗಾರರನ್ನು ಅಧಿಕಾರಿಯೊಬ್ಬರು ಪತ್ತೆ ಹಚ್ಚಿದ್ದರು. ಆ ಬಳಿಕ ಎಫ್‌ಬಿಐ ಈ ಕುರಿತು ಆಳವಾದ ತನಿಖೆಯನ್ನು ಆರಂಭಿಸಿತು. ನ್ಯಾಯಾಲಯದ ದಾಖಲೆಯನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ, ನ್ಯೂಯಾರ್ಕ್‌ನ ವೆಸ್ಟ್‌ಚೆಸ್ಟರ್ ಕೌಂಟಿಯ ಅಂಚೆ ಕಚೇರಿಯಿಂದ ನಗದು ಪ್ಯಾಕೇಜ್‌ಗಳನ್ನು ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Shivamogga Islamic State ಪ್ರಕರಣದಲ್ಲಿ ಇಬ್ಬರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್, ಕ್ರಿಪ್ಟೋ ಕರೆನ್ಸಿಯಲ್ಲಿ ಪಾವತಿ

ವಾರದಲ್ಲಿ ಸುಮಾರು ಮೂರು ಬಾರಿ ಜನರನ್ನು ಭೇಟಿ ಮಾಡುವ ಮೂಲಕ ಮತ್ತು ಪ್ರತಿ ಬಾರಿ 100,000 ಮತ್ತು 300,000 ಡಾಲರ್‌ವರೆಗಿನ ಮೊತ್ತವನ್ನು ಮಾಹಿತಿದಾರರು ಪಡೆದುಕೊಂಡಿದ್ದಾರೆ. ಈ ಕುರಿುತ ಟೆಲಿಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಸ್ಥಳಗಳನ್ನು ಚರ್ಚಿಸಲಾಗಿದೆ.

ಆರೋಪಿಗಳ ಪೈಕಿ ಒಬ್ಬರು ನ್ಯೂಜೆರ್ಸಿ, ಮ್ಯಾಸಚೂಸೆಟ್ಸ್, ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾ ಸೇರಿದಂತೆ ನ್ಯೂಯಾರ್ಕ್‌ನಿಂದ ಆಗಾಗ ಪ್ರವಾಸಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತಿಬ್ಬರು ಜನರು ದಕ್ಷಿಣ ಕೆರೊಲಿನಾಕ್ಕೆ ಮತ್ತು ಅಲ್ಲಿಂದ ಪ್ರವಾಸಗಳನ್ನು ಮಾಡಿದರು ಎಂಬ ಸಂಗತಿಯು ಎಫ್‌ಬಿಐ ತನಿಖೆಯಲ್ಲಿ ತಿಳಿದು ಬಂದಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version