Site icon Vistara News

ಯುಎಸ್​​ನ ಹಲವೆಡೆ ಸುಂಟರಗಾಳಿ ಅಬ್ಬರ; 24ಮಂದಿ ಸಾವು, ಕುಸಿದು ಬೀಳುತ್ತಿರುವ ಮನೆ, ಮರಗಳು

Devastating Tornadoes In US 24 Died

#image_title

ಯುನೈಟೆಡ್​ ಸ್ಟೇಟ್ಸ್​ನ ದಕ್ಷಿಣ ಮಧ್ಯಭಾಗ ಮತ್ತು ಪೂರ್ವಭಾಗದಲ್ಲಿ ಎದ್ದಿರುವ ಡೆಡ್ಲಿ ಸುಂಟರಗಾಳಿ, ಬಿರುಗಾಳಿಯಿಂದ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಯುಎಸ್​ನ ಟೆನ್ನೆಸ್ಸೀ ರಾಜ್ಯದಲ್ಲಿ ಮೊದಲು ಶುಕ್ರವಾರ ಭೀಕರ ಗಾಳಿ ಶುರುವಾಯಿತು. ಇದರಿಂದ ವಾತಾವರಣದಲ್ಲಿ ಏರುಪೇರಾಯಿತು. ಹೀಗೆ ಹವಾಮಾನದಿಂದ ಉಂಟಾದ ಅವಘಡಗಳ ಕಾರಣದಿಂದ ಮೊದಲು ಏಳು ಮಂದಿ ಮೃತಪಟ್ಟರು. ಅದು ಒಂಭತ್ತಕ್ಕೆ ಏರಿ, ಎರಡು ದಿನಗಳಲ್ಲಿ 24ಮಂದಿ ಸಾವನ್ನಪ್ಪಿದ್ದಾರೆ.

ನಂತರ ಸುಂಟರಗಾಳಿ ಅಬ್ಬರ ಹೆಚ್ಚಿದೆ. ಯುಎಸ್​ನ ದಕ್ಷಿಣ ಮಧ್ಯ ಮತ್ತು ಪೂರ್ವ ಭಾಗವನ್ನೆಲ್ಲ ಆವರಿಸಿತು. ಅನೇಕ ಮರಗಳು ಧರೆಗೆ ಉರುಳಿವೆ. ಮನೆಗಳೂ ಕುಸಿದಿವೆ. ಅನೇಕಾನೇಕ ಕಾಂಪೌಂಡ್​ಗಳು, ಗೋಡೆಗಳೆಲ್ಲ ಉದುರಿಬಿದ್ದಿವೆ. ಈ ಬಗ್ಗೆ ಸುಂಟರಗಾಳಿ ಹೊಡೆತಕ್ಕೆ ಒಳಗಾದ ಲೆವಿಸ್ ಕೌಂಟಿ ನಿವಾಸಿ ಜಾನಿಸ್ ಪೀಟರಿಕ್ ಎಂಬುವರು ಹೇಳಿಕೆ ನೀಡಿ ‘ನಮ್ಮ ಇಡೀ ಮನೆ ಒಂದು ಸಲ ಅಲುಗಾಡಿದಂತೆ ಭಾಸವಾಯಿತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Donald Trump: ನೀಲಿ ಚಿತ್ರತಾರೆಗೆ ಹಣ ಪಾವತಿ; ಯುಎಸ್​ ಮಾಜಿ ಅಧ್ಯಕ್ಷ ಡೊ​ನಾಲ್ಡ್​ ಟ್ರಂಪ್​ ವಿರುದ್ಧ ಕ್ರಿಮಿನಲ್​ ಆರೋಪ​

ಟೆನ್ನೆಸ್ಸೀ, ಅರ್ಕಾನ್ಸಾಸ್​, ಮಿಸ್ಸಿಸ್ಸಿಪ್ಪಿ, ಅಲಬಾಮಾ, ಮಧ್ಯಪಶ್ಚಿಮದಲ್ಲಿರುವ ಇಂಡಿಯಾನಾ, ಇಲ್ಲಿನೊಯಿಸ್, ಮಧ್ಯ ಅಟ್ಲಾಂಟಿಕಾದ ಡೆಲವೇರ್‌ಗಳಿಂದ ಸಾವಿನ ಪ್ರಕರಣ ವರದಿಯಾಗಿದ್ದು, ಅದರಲ್ಲಿ ಅತಿಹೆಚ್ಚು ಅಂದರೆ 15ಮಂದಿ ಟೆನ್ನೆಸ್ಸೀಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರೂ ಅನೇಕರು ಇದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುಎಸ್​ನ ಪೂರ್ವ ಕರಾವಳಿಯಲ್ಲಂತೂ ಚಂಡಮಾರುತ ಸ್ವರೂಪಿ ಗಾಳಿಯೊಂದಿಗೆ ಬಲವಾದ ಗುಡುಗು-ಆಲಿಕಲ್ಲು ಸಹಿತ ಮಳೆಯಾಗಿದೆ. ವಾಹನಗಳೆಲ್ಲ ನಿಂತಲ್ಲೇ ಮಗುಚಿಬಿದ್ದಿವೆ. ವಿದ್ಯುತ್ ಕಂಬಗಳು ದರೆಗೆ ಬಿದ್ದಿವೆ. ಸುಂಟರಗಾಳಿಯ ಅಬ್ಬರ ಹೆಚ್ಚಿದ್ದಲ್ಲೆಲ್ಲ ತುರ್ತು ಪರಿಸ್ಥಿತಿ ಎದುರಾಗಿದೆ. ಯುಎಸ್​ ಅಧ್ಯಕ್ಷ ಜೋ ಬೈಡೆನ್​ ಕೂಡ ವರದಿ ಪಡೆದಿದ್ದಾರೆ.

Exit mobile version