Site icon Vistara News

Donald trump: ಡೊನಾಲ್ಡ್‌ ಟ್ರಂಪ್‌ ಬಿಡುಗಡೆ; ಕೇವಲ 30 ನಿಮಿಷ ಜೈಲಿನಲ್ಲಿ, 2 ಲಕ್ಷ ಡಾಲರ್‌ ಬಾಂಡ್‌

Donald trump

Trump ranked as worst president in US history, Joe Biden ranks 14th

ಜಾರ್ಜಿಯಾ: 2020ರ ಚುನಾವಣಾ ಫಲಿತಾಂಶಗಳನ್ನು (American Election results) ಬುಡಮೇಲು ಮಾಡಲು ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald trump) ಅವರನ್ನು ಮಗ್‌ ಶಾಟ್‌ ಫೋಟೊ ತೆಗೆದುಕೊಂಡು ಮತ್ತು 2 ಲಕ್ಷ ಡಾಲರ್‌ (1 ಕೋಟಿ 64 ಲಕ್ಷ ರೂ.) ಬಾಂಡ್‌ನೊಂದಿಗೆ (Two Lakhs dollar bond) ಬಿಡುಗಡೆ ಮಾಡಲಾಗಿದೆ. ಅಮೆರಿಕದಲ್ಲಿ ಆರೋಪಿಗಳ ಮಗ್‌ ಶಾಟ್‌ ಫೋಟೊ ತೆಗೆದುಕೊಳ್ಳುವುದು (Mug shot Photo Taking process) ಎನ್ನುವುದು ಅತ್ಯಂತ ಅಪಮಾನಕಾರಿ ಪ್ರಕ್ರಿಯೆಯಾಗಿದ್ದು, ಡೊನಾಲ್ಡ್‌ ಟ್ರಂಪ್‌ ಪ್ರಕರಣದಲ್ಲಿ ಇದು ನಡೆದಿದೆ.

2020ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ ರಾಜ್ಯವಾದ ಜಾರ್ಜಿಯಾದಲ್ಲಿನ ಫಲಿತಾಂಶವನ್ನು ಬುಡಮೇಲು ಮಾಡಲು, ತಿರುಚಲು ಪ್ರಯತ್ನಿಸಿದ ಗಂಭೀರ ಆರೋಪದಲ್ಲಿ ಈಗಾಗಲೇ 17 ಮಂದಿ ನ್ಯಾಯಾಲಯಕ್ಕೆ ಶರಣಾಗಿದ್ದರು. ತನ್ನ ಬಂಧನ ಖಚಿತ ಎನ್ನುವುದನ್ನು ತಿಳಿದುಕೊಂಡ ಟ್ರಂಪ್‌ ಅವರು ಕೂಡಾ ಶರಣಾಗಿದ್ದಾರೆ. ಅವರನ್ನು ಸುಮಾರು 30 ನಿಮಿಷಗಳ ಕಾಲ ಅಟ್ಲಾಂಟಾದ ಫುಲ್ಟನ್‌ ಕೌಂಟಿ ಜೈಲಿನ ಒಳಗೆ ಇರಿಸಿ ಪ್ರಕ್ರಿಯೆಗಳನ್ನು ಮುಗಿಸಿ ಬಿಡುಗಡೆ ಮಾಡಲಾಗಿದೆ. ಬಳಿಕ ಅವರು ತನ್ನ ವಾಹನದಳದೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗಿ ತಿಳಿದುಬಂದಿದೆ.

ಜೈಲಿನೊಳಗೆ ಟ್ರಂಪ್‌ ಅವರ ಭಾವಚಿತ್ರವನ್ನು ತೆಗೆಯುವ ಪ್ರಕ್ರಿಯೆ ನಡೆದಿದೆ. ಅತ್ಯಂತ ಅಪಮಾನಕಾರಿ ಎಂದು ಗುರುತಿಸಲ್ಪಟ್ಟಿರುವ ಈ ಪ್ರಕ್ರಿಯೆಯನ್ನು ಎದುರಿಸಿದ ಅಮೆರಿಕದ ಮೊದಲ ಮಾಜಿ ಅಥವಾ ಹಾಲಿ ಅಧ್ಯಕ್ಷ ಎನ್ನುವ ಕುಖ್ಯಾತಿಗೆ ಈಗ ಟ್ರಂಪ್‌ ಪಾತ್ರರಾಗಿದ್ದಾರೆ.

ಗಾಢ ನೀಲಿ ಬಣ್ಣದ ಸೂಟ್‌, ಬಿಳಿ ಶರ್ಟ್‌ ಮತ್ತು ಕೆಂಪು ಶರಟು ಧರಿಸಿದ್ದ ಟ್ರಂಪ್‌ ಅವರು ಯಾವುದೇ ಗೊಂದಲವಿಲ್ಲದೆ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ. ಅದರ ನಡುವೆಯೇ ಚುನಾವಣಾ ಅಕ್ರಮದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಅಷ್ಟಾದರೂ ಅವರು ಸ್ಪರ್ಧೆ ನಡೆಸಲು ಕಾನೂನಿನ ಅಡ್ಡಿಯೇನೂ ಎದುರಾಗುವುದಿಲ್ಲ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Donald Trump Arrest : ಚುನಾವಣಾ ಅಕ್ರಮ ಆರೋಪ; ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಂಧನ

ಏನಿದು ಟ್ರಂಪ್‌ ಬಂಧನಕ್ಕೆ ಕಾರಣವಾದ ಪ್ರಕರಣ?

2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭ ಜಾರ್ಜಿಯಾ ರಾಜ್ಯದ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ. ಫಲಿತಾಂಶವನ್ನು ಉದ್ದೇಶಪೂರ್ವಕವಾಗಿ ಬದಲಿಸಲು ಪಿತೂರಿ ನಡೆಸಲಾಗಿದೆ ಎಂದು ಟ್ರಂಪ್‌ ಸೇರಿ 18 ಜನರ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್‌ನಲ್ಲಿ ಜಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು.

ಇದೀಗ ಟ್ರಂಪ್‌ ಜೈಲು ಸೇರಿರುವುದರಿಂದ ಅವರ ಚುನಾವಣೆ ಸ್ಪರ್ಧೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ. ಇದೀಗ ಅವರು ಅವರ ಪಕ್ಷದಲ್ಲಿ ಮುಂಚೂಣಿ ಅಭ್ಯರ್ಥಿಯಾಗಿದ್ದಾರೆ. ಹಾಗಂತ ಜೈಲಿಗೆ ಹೋಗಿರುವ ಕಾರಣ ಕಾನೂನಾತ್ಮಕವಾಗಿ ಸ್ಪರ್ಧೆಗೆ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಸಿಗುತ್ತದೆ. ಆದರೆ, ಅಮೆರಿಕದಲ್ಲಿ ನೈತಿಕತೆ ವಿಚಾರಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುವುದರಿಂದ ಅವರಿಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ 2024ರ ಅಧ್ಯಕ್ಷೀಯ ಚುನಾವಣೆ ವಿಚಾರದಲ್ಲಿ ಭಾರಿ ಕುತೂಹಲಗಳು ಮೂಡುವಂತಾಗಿದೆ.

Exit mobile version