ವಾಷಿಂಗ್ಟನ್: ತೆರಿಗೆ ವಂಚನೆ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗವಾಗಿದೆ. ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಒಡೆತನದ ಕಂಪನಿಗೆ (Donald Trump Company) ಅಮೆರಿಕ ನ್ಯಾಯಾಲಯವು ಸುಮಾರು 131 ಕೋಟಿ ರೂ. (1.61 ದಶಲಕ್ಷ ಡಾಲರ್) ದಂಡ ವಿಧಿಸಿದೆ.
ಡೊನಾಲ್ಡ್ ಟ್ರಂಪ್ ಅವರ ಟ್ರಂಪ್ ಆರ್ಗನೈಸೇಷನ್‌ನ ಎರಡು ಅಂಗ ಸಂಸ್ಥೆಗಳಿಂದ 15 ವರ್ಷಗಳವರೆಗೆ ತೆರಿಗೆ ವಂಚಿಸಿದ ಹಿನ್ನೆಲೆಯಲ್ಲಿ ಮ್ಯಾನ್ಹಟನ್ ನ್ಯಾಯಾಲಯವು ದಂಡ ವಿಧಿಸಿದೆ. ಅಂಗ ಸಂಸ್ಥೆಗಳ ವಿರುದ್ಧ ಕಳೆದ ತಿಂಗಳು 17 ಕ್ರಿಮಿನಲ್ ಪ್ರಕರಣಗಳ ಆರೋಪ ಸಾಬೀತಾಗಿತ್ತು. ಈಗ ನ್ಯಾಯಾಲಯವು ಭಾರಿ ಪ್ರಮಾಣದ ದಂಡ ವಿಧಿಸಿದೆ.
ಇದನ್ನೂ ಓದಿ | Twitter | ಟ್ವಿಟರ್‌ಗೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೀಘ್ರದಲ್ಲೇ ಕಮ್‌ಬ್ಯಾಕ್?