ಟೆಲ್ ಅವಿವ್: ಹಮಾಸ್ ಬಂಡುಕೋರರ (Hamas Attack) ವಿರುದ್ಧ ಇಸ್ರೇಲ್ ಯುದ್ಧ (Israel Palestine War)ನಡೆಸುತ್ತಿರುವ ಸಂದರ್ಭದಲ್ಲಿ ಇಸ್ರೇಲ್ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್(US President Joe Biden), ಇಸ್ರೇಲಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಕಿವಿ ಮಾತು ಕೂಡ ಹೇಳಿದ್ದಾರೆ. 9/11ರ ಉಗ್ರ ಕೃತ್ಯ ಬಳಿಕ ಅಮೆರಿಕ ಮಾಡಿದ ತಪ್ಪುಗಳನ್ನೇ ನೀವು ಮಾಡಬೇಡಿ. ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ. ಅತ್ಯಂತ ಮಾರಣಾಂತಿಕ ದಾಳಿಯ ಬಳಿಕ, ನೀವು ಕ್ರೋಧದಿಂದ ಕುರುಡರಾಗಬೇಡಿ ಎಂದು ಅವರು ಹೇಳಿದ್ದಾರೆ. ಸಪ್ಟೆಂಬರ್ 11ರ ಬಳಿಕ ಅಮೆರಿಕ ಕೂಡ ಇಂಥದ್ದೇ ತಪ್ಪು ಮಾಡಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.
ನೀವು ಸಿಟ್ಟಿನಿಂದ ಕುದಿಯುತ್ತಿರುವಾಗ ನಾನು ನಿಮಗೆ ಎಚ್ಚರಿಸುತ್ತಿದ್ದೇನೆ. ಕ್ರೋಧವನ್ನೇ ಸೇವಿಸಬೇಡಿ. 9/11ರ ನಂತರ ಅಮೆರಿಕ ಕೂಡ ಕ್ರೋಧದಲ್ಲಿ ಮುಳುಗಿತ್ತು. ಉಗ್ರ ದಾಳಿಗೆ ಪ್ರತಿಯಾಗಿ ನಾವು ನ್ಯಾಯಕ್ಕೆ ಹೋರಾಡಿದೆವು ಮತ್ತು ನ್ಯಾಯ ಕೂಡ ಸಿಕ್ಕಿತು. ಆದರೂ ನಾವು ಕೆಲವು ತಪ್ಪುಗಳನ್ನು ಮಾಡಿದೆವು ಎಂದು ಟೆಲ್ ಅವಿವ್ನಲ್ಲಿ ಇಸ್ರೇಲ್ ಆಡಳಿತಕ್ಕೆ ಎಚ್ಚಸಿದ್ದಾರೆ.
ಗಾಜಾ ಪಟ್ಟಿ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ ನಡೆಸಿಲ್ಲ
500 ಪ್ಯಾಲೆಸ್ತೀನಿಗಳ (Palestine people Killed) ಹತ್ಯೆಗೆ ಕಾರಣವಾದ ಆಸ್ಪತ್ರೆ ಮೇಲಿನ ಬಾಂಬ್ ದಾಳಿ (Bomb on Hospital) ಕುರಿತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬೆಂಬಲಿಸಿದ್ದಾರೆ. ಹಮಾಸ್ ಮತ್ತು ಇಸ್ರೇಲ್ ನಡುವಿನ ಭೀಕರ ಕಾಳಗದ ಮಧ್ಯೆಯೇ ಇಸ್ರೇಲ್ಗೆ ಬೈಡೆನ್ ಅವರು ಈ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು ಜೋ ಬೈಡೆನ್ ಅವರು, ಪ್ಯಾಲೆಸ್ತೀನ್ ನಾಗರಿಕರ ಮೇಲೆ ದಾಳಿ ಸಲ್ಲದು ಎಂದು ಹೇಳಿದ್ದರು. ಗಾಜಾ ಹಾಸ್ಪಿಟಲ್ ಮೇಲೆ ದಾಳಿ ನಡೆಸಿದ್ದು ಇಸ್ರೇಲ್ ಸೇನೆ ಅಲ್ಲ, ಬದಲಿಗೆ ಬಂಡುಕೋರರ ಗುಂಪು ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು (Israel PM benjamin netanyahu) ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ತಿಳಿಸಿದ್ದಾರೆ. ಇಸ್ರೇಲ್ ಪ್ರಧಾನಿಯ ಈ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷರು ಬೆಂಬಲಿಸಿದ್ದಾರೆ(Israel Palestine War).
ನಿನ್ನೆ ಗಾಜಾ ಪಟ್ಟಿಯ ಆಸ್ಪತ್ರೆಯ ಮೇಲಿನ ಬಾಂಬ್ ದಾಳಿಯಿಂದಾಗಿ ನನಗೆ ಬಹಳ ದುಃಖವಾಗಿತ್ತು. ನಾನು ನೋಡಿದ ಆಧಾರದ ಮೇಲೆ ಈ ಕೃತ್ಯವನ್ನು ಬೇರೆಯದ್ದೇ ತಂಡವೊಂದು ಮಾಡಿರುವ ಹಾಗಿದೆ ಎಂದು ಜೋ ಬೈಡೆನ್ ಕೂಡ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಗೆ ಟೆಲ್ ಅವಿವದಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Israel Palestine War: ನಮ್ಮ ಕೈ ಟ್ರಿಗರ್ ಮೇಲಿದೆ! ಇಸ್ರೇಲ್ಗೆ ನೇರ ಎಚ್ಚರಿಕೆ ನೀಡಿದ ಇರಾನ್
ಬುಧವಾರ ಇಸ್ರೇಲ್ಗೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಗಾಜಾ ಯುದ್ಧದ ವೇಳೆ ಇಸ್ರೇಲ್ಗೆ ಬೆಂಬಲ ಘೋಷಿಸಿದ್ದಾರೆ. ಭಾರೀ ಭದ್ರತೆ ಮಧ್ಯೆ, ಟೆಲ್ ಅವಿವ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಜೋ ಬೈಡೆನ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಬರಮಾಡಿಕೊಂಡರು.
ಇದಾದ ಬಳಿಕ ನೆತನ್ಯಾಹು ಜತೆಗೂಡಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಮಾಸ್ ವಿರುದ್ಧ ಯುದ್ಧದಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಅಕ್ಟೋಬರ್ 7ರಂದು 1700 ಇಸ್ರೇಲಿಗಳ ಮಾರಣಹೋಮ ನಡೆಸಿದ ಹಮಾಸ್ ವಿರುದ್ದ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ನಿರ್ಧಾರವನ್ನು ಸಮರ್ಥಿಸಿಕೊಂಡರು.