Site icon Vistara News

Alaska Flight: ಟೇಕಾಫ್‌ ಆಗುತ್ತಲೇ ಕಳಚಿ ಬಿದ್ದ ವಿಮಾನದ ಬಾಗಿಲು; ಭೀಕರ ವಿಡಿಯೊ ನೋಡಿ

Alaska Airlines Flight

Door Blows Out Of Boeing Plane Just After Takeoff, Makes Emergency Landing

ಪೋರ್ಟ್‌ಲ್ಯಾಂಡ್:‌ ಒರೆಗಾನ್ (Oregon) ದೇಶದಿಂದ ಅಲಾಸ್ಕ ವಿಮಾನಯಾನ ಸಂಸ್ಥೆಯ ವಿಮಾನವು (Alaska Flight) ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದರ ಬಾಗಿಲು ಕಳಚಿಬಿದ್ದಿದ್ದು, ಪ್ರಯಾಣಿಕರು ವಿಮಾನದಲ್ಲಿಯೇ ಬೆಚ್ಚಿಬಿದ್ದಿದ್ದಾರೆ. ವಿಮಾನದ ಕಿಟಕಿ ಕಳಚಿ ಬೀಳುತ್ತಲೇ ಎಚ್ಚೆತ್ತ ಪೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ಇದರಿಂದಾಗಿ ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ. ವಿಮಾನದ ಕಿಟಕಿ ಕಳಚಿ ಬಿದ್ದ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಒರೆಗಾನ್‌ ದೇಶದ ಪೋರ್ಟ್‌ಲ್ಯಾಂಡ್‌ನಿಂದ ಒಂಟಾರಿಯೋಗೆ ಅಲಾಸ್ಕ ವಿಮಾನಯಾನ ಸಂಸ್ಥೆಯ ಎಎಸ್ 1282 ಬೋಯಿಂಗ್‌ ವಿಮಾನವು ಹಾರಾಟ ಆರಂಭಿಸಿತ್ತು. ಸುಮಾರು 16 ಸಾವಿರ ಅಡಿ ಎತ್ತರಕ್ಕೆ ಹಾರುತ್ತಲೇ ವಿಮಾನದ ಕಿಟಕಿಯು ಕಳಚಿ ಬಿದ್ದಿದೆ. ವಿಮಾನದ ಕಿಟಕಿ ಬೀಳುತ್ತಲೇ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಅದರಲ್ಲೂ, ವಿಮಾನದೊಳಗೆ ಜೋರು ಗಾಳಿ ಬೀಸಿಬಂದ ಕಾರಣ ಪ್ರಯಾಣಿಕರು ಇನ್ನಷ್ಟು ಭಯಭೀತರಾದರು. ಕೆಲವೊಬ್ಬರ ಮೊಬೈಲ್‌ಗಳು ಕೂಡ ಕೆಳಗೆ ಬಿದ್ದಿವೆ ಎಂದು ತಿಳಿದುಬಂದಿದೆ. ಅಪಾಯದ ಮುನ್ಸೂಚನೆ ಅರಿತ ಪೈಲಟ್‌, ಕೂಡಲೇ ಪೋರ್ಟ್‌ಲ್ಯಾಂಡ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಿದ ಕಾರಣ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ.


ತನಿಖೆಗೆ ಆದೇಶಿಸಿದ ಏರ್‌ಲೈನ್ಸ್‌


“ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಆಕಸ್ಮಿಕವಾಗಿ ಕಿಟಕಿಯು ಕಳಚಿ ಬಿದ್ದಿದೆ. ಪೋರ್ಟ್‌ಲ್ಯಾಂಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವು ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ” ಎಂದು ಅಲಾಸ್ಕ ಏರ್‌ಲೈನ್ಸ್‌ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. ಕಿಟಕಿ ಕುಸಿಯುತ್ತಲೇ ಪ್ರಯಾಣಿಕರು ಆತಂಕಕ್ಕೀಡಾದ ದೃಶ್ಯವು ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: IndiGo: ಇಂಡಿಗೋ ವಿಮಾನ ಪ್ರಯಾಣಿಕರಿಗೆ ಗುಡ್‌ ನ್ಯೂಸ್;‌ ಟಿಕೆಟ್‌ ದರ ಕಡಿತ

ಅಲಾಸ್ಕ ವಿಮಾನಯಾನ ಸಂಸ್ಥೆಯ ಫ್ಲೈಟ್‌ನಲ್ಲಿ 171 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು. ಸುರಕ್ಷಿತವಾಗಿ ವಿಮಾನ ಲ್ಯಾಂಡ್‌ ಆಗುತ್ತಲೇ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೋಯಿಂಗ್‌ ವಿಮಾನವು ಎರಡು ತಿಂಗಳ ಹಿಂದಷ್ಟೇ ಹಾರಾಟ ಆರಂಭಿಸಿತ್ತು ಎಂದು ಮೂಲಗಳು ತಿಳಿಸಿವೆ. ಕೆಲ ತಿಂಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾದಲ್ಲಿ ಹಾರುತ್ತಿದ್ದ ವಿಮಾನದ ಕಾಕ್‌ಪಿಟ್‌ನಲ್ಲಿ ಹಾವು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಪೈಲಟ್‌ ಗಾಬರಿಗೊಂಡು ಕೂಡಲೇ ವಿಮಾನವನ್ನು ಲ್ಯಾಂಡ್‌ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version