ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಬಹುಸಂಖ್ಯಾತ ಮುಸ್ಲಿಮರ ದಾಳಿ ಮುಂದುವರಿದಿದೆ. ಪಾಕಿಸ್ತಾನದ ಹೈದರಾಬಾದ್‌ನಲ್ಲಿ ಹಿಂದುಗಳು ಸಂಭ್ರಮದಿಂದ ಹೋಳಿ ಆಚರಿಸುತ್ತಿರುವಾಗಲೇ ಖ್ಯಾತ ಹಿಂದು ವೈದ್ಯರೊಬ್ಬರನ್ನು ಅವರ ವಾಹನ ಚಾಲಕನೇ ಕತ್ತು ಸೀಳಿ (Hindu Doctor Killed In Pakistan) ಹತ್ಯೆ ಮಾಡಿದ್ದಾನೆ. ಇದಾದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಡಾ.ಧರಮ್ ದೇವ್ ರಾಥಿ ಅವರು ಹೈದರಾಬಾದ್‌ನ ಖ್ಯಾತ ಚರ್ಮರೋಗ ತಜ್ಞರಾಗಿದ್ದಾರೆ. ಇವರ ವಾಹನದ ಚಾಲಕನಾಗಿರುವ ಹನೀಫ್ ಲೆಘಾರಿ ಎಂಬುವವನು ಕಳೆದ ಮಂಗಳವಾರ ಚಾಕುವಿನಿಂದ ವೈದ್ಯರ ಕತ್ತು ಸೀಳಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯ ಮೃತಪಟ್ಟಿದ್ದಾರೆ ಎಂದು ವೈದ್ಯರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವ್ಯಕ್ತಿ ಮಾಹಿತಿ ನೀಡಿದ್ದಾರೆ.
ಕೃತ್ಯ ನಡೆದ 24 ಗಂಟೆಯಲ್ಲಿಯೇ ಆರೋಪಿಯನ್ನು ಬಂಧಿಸಿರುವ ಕುರಿತು ಪಾಕಿಸ್ತಾನದ ಪ್ರಾಂತೀಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಗಿಯಾನ್ ಚಾಂದ್ ಎಸ್ಸರನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ವೈದ್ಯರ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಇನ್ನು ಕೃತ್ಯವನ್ನು ಹಿಂದು ಸಂಘಟನೆಗಳು ಖಂಡಿಸಿವೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್ರೇಪ್ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು