Site icon Vistara News

ದುಬೈನಲ್ಲಿ ಶೀಘ್ರ ಜಗತ್ತಿನ ಅತಿದೊಡ್ಡ, ಜನನಿಬಿಡ ವಿಮಾನ ನಿಲ್ದಾಣ!

Dubai will have busiest and largest airport

ದುಬೈ: ದುಬೈ (Dubai Airport) ಜಗತ್ತಿನ ಅತಿದೊಡ್ಡ ಮತ್ತು ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಕ್ಕೆ (World’s Busiest Airport) ಯೋಜನೆಯನ್ನು ರೂಪಿಸಿದೆ. ಕೊರೊನಾ ಸಾಂಕ್ರಾಮಿಕ (coronavirus pandemic) ಪೂರ್ವದಂತೆ ಈಗ ಮತ್ತೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವನ್ನು ಇನ್ನೂ ದೊಡ್ಡದಾದ ವಿಮಾನ ನಿಲ್ದಾಣದೊಂದಿಗೆ (World’s Largest Airport) ಬದಲಾಯಿಸುವ ಯೋಜನೆಗಳೊಂದಿಗೆ ದುಬೈ ಮುಂದಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುಬೈ ಏರ್‌ಪೋರ್ಟ್‌ಗಳ ಸಿಇಒ ಪಾಲ್ ಗ್ರಿಫಿತ್ಸ್ ಅವರು ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ವಿನ್ಯಾಸಗಳನ್ನು ರಚಿಸಲಾಗುತ್ತಿದ್ದು, ಇದನ್ನು ನಗರದ ಹೊರವಲಯದಲ್ಲಿ ನಿರ್ಮಿಸಲಾಗುವುದು ಮತ್ತು 2030ರ ದಶಕದಲ್ಲಿ ದುಬೈ ಇಂಟರ್‌ನ್ಯಾಶನಲ್ ಅನ್ನು ಮೀರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಒಮ್ಮೆ ನಾವು ಸುಮಾರು 120 ಮಿಲಿಯನ್ (ವರ್ಷಕ್ಕೆ ಪ್ರಯಾಣಿಕರು) ತಲುಪಿದ ನಂತರ, ಡಿಎಕ್ಸ್‌ಬಿ (ದುಬೈ ಇಂಟರ್ನ್ಯಾಷನಲ್) ನಲ್ಲಿ ನಮ್ಮ ಒಟ್ಟು ಸಾಮರ್ಥ್ಯವು ಎಲ್ಲವನ್ನೂ ಹೊಂದುವಂತೆ ಸಂಪೂರ್ಣ ಗರಿಷ್ಠವಾಗಿದೆ ಎಂದು ನಾವು ಭಾವಿಸುತ್ತೇವೆ. ಜತಗೆ ನಮಗೆ ಹೊಸ ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಗ್ರಿಫಿತ್ಸ್ ಹೇಳಿದ್ದಾರೆ. ಈ ಹೊಸ ದೊಡ್ಡದಾದ ವಿಮಾನ ನಿಲ್ದಾಣದಲ್ಲಿ 2030ರ ದಶಕದಲ್ಲಿ ಕಾರ್ಯಾರಂಭ ಮಾಡಲಿದೆ. ಮುಂದಿನ ಕೆಲವು ತಿಂಗಳಲ್ಲಿ ಈ ಕುರಿತಾದ ವಿನ್ಯಾಸವನ್ನು ಸಿದ್ದಪಡಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷ ದುಬೈ ಇಂಟರ್‌ನ್ಯಾಶನಲ್‌ ವಿಮಾನ ನಿಲ್ದಾಣವು 86.9 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡಲಿದೆ ಎಂಬ ಅಂಕಿಅಂಶಗಳ ಮುನ್ಸೂಚನೆ ಕುರಿತು ಮಾತನಾಡಿದ ಗ್ರಿಫಿತ್ಸ್, ಇದು 2019ರ ದಟ್ಟಣೆಯನ್ನು ಮೀರಿಸಲಿದೆ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯು ಕೊರೊನಾ ಬಳಿಕ ಉದ್ಯಮ ಚೇತರಿಸಿಕೊಳ್ಳುತ್ತಿರುವುದನ್ನು ಇದು ಸಾಂಕೇತಿಸುತ್ತಿದೆ ಎಂದು ಹೇಳಿದರು.

ಮೂರನೇ ತ್ರೈಮಾಸಿಕದಲ್ಲಿ 22.9 ಮಿಲಿಯನ್ ಟ್ರಾಫಿಕ್ ಇತ್ತು. ಇದು 2019ರ ಬಳಿಕ ಅತಿ ಹೆಚ್ಚಿನ ಟ್ರಾಫಿಕ್ ಆಗಿದೆ. 2023ರಲ್ಲಿ ಇಲ್ಲಿಯವರೆಗೆ 64.5 ದಶಲಕ್ಷ ಟ್ರಾಫಿಕ್ ಇದ್ದು, 2029ಕ್ಕೆ ಹೋಲಿಸಿದರೆ ಇದು ಶೇ.40ರಷ್ಟು ಹೆಚ್ಚು ಎಂದು ಹೇಳಬಹುದು.

ಇಸ್ರೇಲ್-ಹಮಾಸ್ ನಡುವಿನ ಸಂಘರ್ಷವು ವಿಮಾನ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಯುದ್ಧದಿಂದ ಪ್ರಾದೇಶಿಕ ಪ್ರವಾಸೋದ್ಯಮ ಮೇಲೆ ಹೊಡೆತ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ರೀತಿಯ ಯಾವುದೇ ಪರಿಣಾಮವಾಗಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರದತ್ತ ಸಂಚಾರದ ಪರಿಣಾಮ ಬಹಳ ಕಡಿಮೆ ಎಂದು ಗ್ರಿಫಿತ್ಸ್ ಹೇಳಿದ್ದು, ವಾಸ್ತವವಾಗಿ, ಕೆಲವು ಪ್ರದೇಶಗಳಲ್ಲಿ ಇದು ಮೊದಲಿಗಿಂತ ಹೆಚ್ಚು ಪ್ರಬಲವಾಗಿದೆ. ಯುದ್ಧದ ಪರಿಸ್ಥಿತಿಯವು ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಬಹುದು ಎಂದು ಅವರು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕವು ವ್ಯಾಪಿಸಿದಾಗ ಸಮಾನ ಮತ್ತು ಬಲವಾದ ಚೇತರಿಕೆ ಇರುತ್ತದೆ ಎಂದು ನಮಗೆ ಯಾವಾಗಲೂ ತಿಳಿದಿತ್ತು. ಏಕೆಂದರೆ ಎರಡು ವರ್ಷಗಳ ಕಾಲ ಲಾಕ್‌ಡೌನ್‌ನಲ್ಲಿರುವ ಜನರಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ನಿರಾಕರಿಸಲಾಯಿತು. ಹಾಗೆಯೇ, ಸಾಂಕ್ರಾಮಿಕ ಪರಿಸ್ಥಿತಿಯು ಮುಗಿಯುತ್ತಿದ್ದಂತೆ ನಾವು ಬೇಗನೆ ಮೊದಲಿನ ಸ್ಥಿತಿಗೆ ಹಿಂದಿರುಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆಯೂ ದುಬೈ ವಿಮಾನ ನಿಲ್ದಾಣವು ಮಾರ್ಚ್‌ನಿಂದ 2020ರ ಜುಲೈವರೆಗೆ ವಾಣಿಜ್ಯ ವಿಮಾನಗಳಿಗೆ ಕೆಲವು ಕಾಲ ಮುಚ್ಚಿತ್ತು. ಆದರೆ ಮತ್ತೆ ತೆರೆಯಲಾದ ಮೊದಲ ಪ್ರಯಾಣ ಕೇಂದ್ರಗಳಲ್ಲಿ ದುಬೈ ವಿಮಾ ನಿಲ್ದಾಣ ಕೂಡ ಒಂದಾಗಿದೆ. 2020ರಲ್ಲಿ ಇದು ಕೇವಲ 25.9 ಮಿಲಿಯನ್ ಪ್ರಯಾಣಿಕರನ್ನು ಪಡೆಯಿತು. 2019ರಲ್ಲಿ 86 ಮಿಲಿಯನ್‌ಗಿಂತಲೂ ಕಡಿಮೆಯಾಗಿದೆ.

ಈ ಸುದ್ದಿಯನ್ನೂ ಓದಿ: JOB NEWS : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸದ್ಯವೇ 12 ಸಾವಿರ ಹೊಸ ಜಾಬ್‌ ಸೃಷ್ಟಿ

Exit mobile version