Site icon Vistara News

Durga Bhawan | ಅಲ್ಲಾ ಹು ಅಕ್ಬರ್‌ ಎನ್ನುತ್ತ ಬ್ರಿಟನ್‌ನಲ್ಲಿ ಹಿಂದೂ ದೇಗುಲದ ಮೇಲೆ 3 ಸಾವಿರ ಜನರಿಂದ ದಾಳಿ!

Temple

ಲಂಡನ್‌: ಇತ್ತೀಚೆಗೆ ದುಬೈನಲ್ಲಿ ನಡೆದ ಪಾಕಿಸ್ತಾನ-ಶ್ರೀಲಂಕಾ ಫೈನಲ್‌ ಪಂದ್ಯದ ವೀಕ್ಷಣೆಗೆ ಭಾರತೀಯರಿಗೆ ಅವಕಾಶ ನೀಡದ ಪ್ರಕರಣ ಸುದ್ದಿಯಾದ ಬೆನ್ನಲ್ಲೇ, ಬ್ರಿಟನ್‌ನಲ್ಲಿ ಹಿಂದೂ ದೇವಾಲಯವೊಂದರ (Durga Bhawan) ಮೇಲೆ “ಅಲ್ಲಾ ಹು ಅಕ್ಬರ್”‌ ಎಂದು ಘೋಷಿಸುತ್ತ ಮೂರು ಸಾವಿರ ಮುಸ್ಲಿಮರು ದಾಳಿ ನಡೆಸಿದ್ದಾರೆ. ಆ ಮೂಲಕ ವಿದೇಶದಲ್ಲಿ ಭಾರತೀಯರನ್ನು, ಅದರಲ್ಲೂ ಹಿಂದೂಗಳನ್ನು ಗುರಿಯಾಗಿಸಿ ಹಲ್ಲೆ, ಪ್ರತಿಭಟನೆ, ದಾಳಿ ಮುಂದುವರಿದಂತಾಗಿದೆ. ಅದರಲ್ಲೂ, ಮುಸ್ಲಿಮರ ದಾಳಿ ಹಿಂದೆ ಪಾಕಿಸ್ತಾನದ ಕುತಂತ್ರ ಇದೆ ಎಂದು ತಿಳಿದುಬಂದಿದೆ.

ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ ಪ್ರದೇಶದ ಸ್ಮೆತ್‌ವಿಕ್‌ನಲ್ಲಿರುವ ದುರ್ಗಾ ಭವನ (Durga Bhawan) ದೇವಾಲಯದ ಮೇಲೆ ಸಾವಿರಾರು ಮುಸ್ಲಿಮರು ದಾಳಿ ನಡೆಸಿದ್ದಾರೆ. ಲಂಡನ್‌ನಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿ ಹಾಗೂ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ದಾಳಿ ಹಿಂದಿವೆ ಎನ್ನಲಾಗಿದೆ. ಮುಸುಕುಧಾರಿ ಮೂಲಭೂತವಾದಿಗಳು ದೇವಾಲಯದ ಅಧಿಕಾರಿಗಳಿಗೆ ಬೈಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ದೇವಾಲಯದ ಆವರಣದಲ್ಲಿ ಬಾಟಲಿ, ಕಲ್ಲುಗಳನ್ನು ಎಸೆಯುವುದು, ಪಟಾಕಿ ಸಿಡಿಸುವುದು ಸೇರಿ ಹಲವು ಕೃತ್ಯ ನಡೆಸಿದ್ದಾರೆ. ಗುಂಪು ಗುಂಪಾಗಿ ಬಂದು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದಾಳಿಗೆ ಏನು ಕಾರಣ?

ಪರಮ ಶಕ್ತಿ ಪೀಠ ಹಾಗೂ ವಾತ್ಸಲ್ಯಗ್ರಾಮದ ಸಂಸ್ಥಾಪಕಿ, ಹಿಂದೂ ಕಾರ್ಯಕರ್ತೆ ಸಾಧ್ವಿ ರಿತಾಂಭರ ಅವರು ಲಂಡನ್‌ಗೆ ಭೇಟಿ ನೀಡುವುದೇ ದೇವಾಲಯದ ಮೇಲೆ ದಾಳಿ ನಡೆಸಲು ಕಾರಣ ಎಂದು ತಿಳಿದುಬಂದಿದೆ. ಸಾಧ್ವಿ ರಿತಾಂಭರ ಅವರು ಮುಸ್ಲಿಂ ವಿರೋಧಿಯಾಗುವ ಜತೆಗೆ ಬಾಬ್ರಿ ಮಸೀದಿ ಧ್ವಂಸದ ಹಿಂದೆ ಅವರ ಪಾತ್ರವಿದೆ ಎಂಬ ಕಾರಣಕ್ಕಾಗಿ ಸಾಧ್ವಿ ಅವರು ಬ್ರಿಟನ್‌ನ ಯಾವುದೇ ಪ್ರದೇಶಕ್ಕೆ ಭೇಟಿ ನೀಡಲು ಬಿಡುವುದಿಲ್ಲ ಎಂದು ಮುಸ್ಲಿಮರು ಹೇಳಿದ್ದಾರೆ.

ಆದಾಗ್ಯೂ, ಸಾಧ್ವಿ ರಿತಾಂಭರ ಅವರು ಹಲವು ಬಾರಿ ಲಂಡನ್‌ಗೆ ಭೇಟಿ ನೀಡಿದ್ದಾರೆ. ಆದರೆ, ಈ ಬಾರಿ ಮಾತ್ರ ಮುಸ್ಲಿಮರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದ್ದರೂ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ | ಕೆನಡಾದಲ್ಲಿರುವ ಹಿಂದು ದೇಗುಲ ಸ್ವಾಮಿನಾರಾಯಣ ಮಂದಿರವನ್ನು ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು

Exit mobile version