Site icon Vistara News

Elon Musk: ಟೆಸ್ಲಾದಲ್ಲಿ ಎಲಾನ್ ಮಸ್ಕ್ ಒಬ್ಬರ ಸಂಬಳ ಟಾಟಾ ಮೋಟಾರ್ಸ್‌ ಒಟ್ಟು ಆದಾಯಕ್ಕಿಂತ ಹೆಚ್ಚು!

Elon Musk

ಎಲಾನ್ ಮಸ್ಕ್ (Elon Musk) ಅವರ ಸಂಭಾವನೆ ಪ್ಯಾಕೇಜ್ (pay package) ಅನ್ನು ಪರಿಷ್ಕರಿಸಲಾಗಿದ್ದು, ಇದು 2023- 24ರಲ್ಲಿ ಟಾಟಾ ಮೋಟಾರ್ಸ್‌ನ (Tata Motors) ಒಟ್ಟು ಆದಾಯಕ್ಕಿಂತ ಹೆಚ್ಚಾಗಿದೆ. ಟೆಸ್ಲಾದ (Tesla) ವಿಶ್ಲೇಷಕರು ಮತ್ತು ಹೂಡಿಕೆದಾರರು ಮಸ್ಕ್ ಅವರ ಹೊಸ ಸಂಭಾವನೆ ಪ್ಯಾಕೇಜ್ ಅನ್ನು ಅನುಮೋದಿಸಿದ್ದಾರೆ. ಇದರಿಂದ ಮಸ್ಕ್ ಟೆಸ್ಲಾವನ್ನು ತೊರೆಯುವ ಅಪಾಯವನ್ನು ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.

ಟೆಸ್ಲಾ ಷೇರುದಾರರು ಇತ್ತೀಚೆಗೆ ಸಿಇಒ ಎಲಾನ್ ಮಸ್ಕ್‌ ಅವರಿಗೆ 56 ಶತಕೋಟಿ ಡಾಲರ್ ವೇತನ ಪ್ಯಾಕೇಜ್ ಅನ್ನು ಅನುಮೋದಿಸಿದ್ದಾರೆ. ಈ ಸಂಬಳವು ಟಾಟಾ ಮೋಟಾರ್ಸ್‌ನ ಆರ್ಥಿಕ ವರ್ಷ 2024ರ ಒಟ್ಟು ಆದಾಯಕ್ಕಿಂತ ಹೆಚ್ಚಾಗಿದೆ. 52.44 ಶತಕೋಟಿ ಡಾಲರ್ ಸುಮಾರು ಭಾರತದ ಕರೆನ್ಸಿಯಲ್ಲಿ 4.38 ಲಕ್ಷ ಕೋಟಿ ರೂ. ಆಗಿದೆ.

ಮಸ್ಕ್‌ ಅವರ ವೇತನ ಪ್ಯಾಕೇಜ್ ಎಚ್‌ಪಿಸಿಎಲ್ 52.09 ಶತಕೋಟಿ ಡಾಲರ್, ಎಸ್‌ಬಿಐ 40.35 ಶತಕೋಟಿ ಡಾಲರ್ ಮತ್ತು ಟಿಸಿಎಸ್ 29.04 ಶತಕೋಟಿ ಡಾಲರ್ ಸೇರಿದಂತೆ ಇತರ ಪ್ರಮುಖ ಭಾರತೀಯ ಘಟಕಗಳ ಒಟ್ಟು ಆದಾಯವನ್ನು ಮೀರಿಸಿದೆ.

ಎಲಾನ್ ಮಸ್ಕ್ ಅವರ 56 ಶತಕೋಟಿ ಡಾಲರ್ ಸಂಭಾವನೆ ಪ್ಯಾಕೇಜ್ 2023-24ರಲ್ಲಿ ಟಾಟಾ ಮೋಟಾರ್ಸ್‌ನ ಒಟ್ಟು ಆದಾಯಕ್ಕಿಂತ ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಟಾಟಾ ಮೋಟಾರ್ಸ್‌ನ ಆದಾಯ 52.44 ಬಿಲಿಯನ್ ಡಾಲರ್ ಅಂದರೆ ಸರಿಸುಮಾರು 4.38 ಲಕ್ಷ ಕೋಟಿ ರೂ. ಆಗಿದೆ.

ಟೆಸ್ಲಾ ಷೇರುದಾರರು ಇತ್ತೀಚೆಗೆ ಪ್ರಮುಖ ವಾರ್ಷಿಕ ಷೇರುದಾರರ ಸಭೆಯಲ್ಲಿ ಸಿಇಒ ಎಲೋನ್ ಮಸ್ಕ್ ಅವರ 56 ಶತಕೋಟಿ ಡಾಲರ್ ಸಂಭಾವನೆ ಪ್ಯಾಕೇಜ್ ಅನ್ನು ಎರಡನೇ ಬಾರಿಗೆ ಅನುಮೋದಿಸಿದ್ದಾರೆ.

ವಿಶ್ಲೇಷಕರು ಮತ್ತು ಹೂಡಿಕೆದಾರರು ಮಸ್ಕ್ ಅವರ ಸಂಭಾವನೆ ಪ್ಯಾಕೇಜ್ ಅನ್ನು ಅನುಮೋದಿಸುವುದರಿಂದ ಅವರು ಟೆಸ್ಲಾವನ್ನು ತೊರೆಯುವ ಅಪಾಯವನ್ನು ತಗ್ಗಿಸಿದ್ದಾರೆ ಎನ್ನಲಾಗಿದೆ.

ಟೆಸ್ಲಾ ಮಂಡಳಿಯಿಂದ ವಿಶ್ವಾಸ ಮತದ ಹೊರತಾಗಿಯೂ, ಕಂಪೆನಿಯ 2024ರ ತ್ರೈಮಾಸಿಕ ಆದಾಯವು ಕಳೆದ ಸಾಲಿನ 23,329 ಮಿಲಿಯನ್‌ ಡಾಲರ್ ಗೆ ಹೋಲಿಸಿದರೆ ಶೇ. 8.7ರಷ್ಟು ಕುಸಿದು 21,301 ಮಿಲಿಯನ್‌ ಡಾಲರ್ ಗೆ ಕುಸಿದಿದೆ.

ಇದನ್ನೂ ಓದಿ: Sensex Jump: ಷೇರುಪೇಟೆಯಲ್ಲಿ ದಾಖಲೆ ಬರೆದ ಸೆನ್ಸೆಕ್ಸ್, 23,500 ಮೀರಿದ ನಿಫ್ಟಿ

ಟೆಸ್ಲಾ ಷೇರುಗಳು ಕಳೆದ ವರ್ಷ ಶೇ. 32ರಷ್ಟು ನಷ್ಟವನ್ನು ಅನುಭವಿಸಿತ್ತು. 2023-24ರಲ್ಲಿ ಟಾಟಾ ಮೋಟಾರ್ಸ್‌ನ ನಾಲ್ಕನೇ ತ್ರೈಮಾಸಿಕ ಆದಾಯವು 1.20 ಲಕ್ಷ ಕೋಟಿ ರೂ. ಗಳಷ್ಟಿದ್ದು, ವರ್ಷದಿಂದ ವರ್ಷಕ್ಕೆ ಶೇ. 13.3 ಹೆಚ್ಚಳವಾಗಿದೆ. ವಾಹನ ತಯಾರಕರ ಷೇರುಗಳು ವರ್ಷದಿಂದ ದಿನಾಂಕದ ಆಧಾರದ ಮೇಲೆ ಶೇ. 25ರಷ್ಟು ಏರಿಕೆ ಕಂಡಿವೆ.

Exit mobile version