Site icon Vistara News

Elon Musk Poll | ಎಲಾನ್‌ ಮಸ್ಕ್‌ ಹುದ್ದೆ ತೊರೆಯಬೇಕು ಎಂದ 57% ಜನ, ರಾಜೀನಾಮೆ ನೀಡುವರೇ ಟ್ವಿಟರ್‌ ಚೀಫ್?

Twitter ceo Elon musk

ವಾಷಿಂಗ್ಟನ್‌: ಜಾಗತಿಕ ಉದ್ಯಮಿ ಎಲಾನ್‌ ಮಸ್ಕ್‌ ಟ್ವಿಟರ್‌ಅನ್ನು ಖರೀದಿಸಿದ ಬಳಿಕ ಅವರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉದ್ಯೋಗಿಗಳ ವಜಾ, ಕ್ಷಣಕ್ಷಣಕ್ಕೂ ಟ್ವಿಟರ್‌ ನಿಯಮಗಳ ಬದಲು ಸೇರಿ ಹಲವು ಮಸ್ಕ್‌ ತೆಗೆದುಕೊಂಡ ಹಲವು ಕ್ರಮಗಳು ಟೀಕೆಗೀಡಾಗಿವೆ. ಇದರ ಬೆನ್ನಲ್ಲೇ, “ನಾನು ಟ್ವಿಟರ್‌ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯಬೇಕೇ” ಎಂದು ಟ್ವಿಟರ್‌ನಲ್ಲಿ ಸಮೀಕ್ಷೆ (Elon Musk Poll) ನಡೆಸಿದ ಮಸ್ಕ್‌ಗೆ ಆಘಾತ ಎದುರಾಗಿದೆ.

ಎಲಾನ್‌ ಮಸ್ಕ್‌ ಆರಂಭಿಸಿದ ಪೋಲ್‌ಗೆ ಇದುವರೆಗೆ 1.75 ಕೋಟಿ ಜನ ಪ್ರತಿಕ್ರಿಯಿಸಿದ್ದು, ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಅಂದರೆ, ಶೇ.57.5ರಷ್ಟು ಮಂದಿ ಮಸ್ಕ್‌ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಹೇಳಿದ್ದಾರೆ. ಹಾಗಾಗಿ, ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯುವರೇ ಎಂಬ ಪ್ರಶ್ನೆ ಮೂಡಿದೆ.

ಟ್ವಟರ್‌ನಲ್ಲಿ ಪೋಲ್‌ ಆರಂಭಿಸುವಾಗ, “ಸಮೀಕ್ಷೆಯ ಫಲಿತಾಂಶಕ್ಕೆ ನಾನು ಬದ್ಧನಾಗಿರುತ್ತೇನೆ” ಎಂದು ಮಸ್ಕ್‌ ಹೇಳಿದ್ದು, ಈಗ ಅರ್ಧಕ್ಕಿಂತ ಹೆಚ್ಚಿನ ಜನ ಮಸ್ಕ್‌ ಹುದ್ದೆ ತೊರೆಯಬೇಕು ಎಂದು ಹೇಳಿದ್ದಾರೆ. ಹಾಗಾಗಿ, ಅವರು ರಾಜೀನಾಮೆ ನೀಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತಾಗಿದೆ.

ಇದನ್ನೂ ಓದಿ | Twitter Accounts Delete | 150 ಕೋಟಿ ಟ್ವಿಟರ್‌ ಖಾತೆ ರದ್ದುಗೊಳಿಸಲು ಮಸ್ಕ್‌ ತೀರ್ಮಾನ, ಏನಿದಕ್ಕೆ ಕಾರಣ?

Exit mobile version