Site icon Vistara News

Ex CIA Officer: ಪಾಕಿಸ್ತಾನದಲ್ಲಿ ಉಗ್ರರನ್ನು ತಾಲಿಬಾನ್ ಮೂಲಕ ಕೊಲ್ಲುತ್ತಿರುವ ಭಾರತ; ಅಮೆರಿಕ ಗುಪ್ತಚರ ಇಲಾಖೆ ಮಾಜಿ ಅಧಿಕಾರಿ ಹೇಳಿಕೆ

Ex CIA Officer

ಹೊಸದಿಲ್ಲಿ: ಭಾರತ ತನ್ನ ವಿರುದ್ಧ ದುಷ್ಕೃತ್ಯ ಎಸಗುವ ಪಾಕಿಸ್ತಾನ(Pakistan) ಉಗ್ರರನ್ನು ಮಟ್ಟ ಹಾಕಲು ತಾಲಿಬಾನ್‌(Taliban)ಗಳಿಗೆ ಹಣ ನೀಡುತ್ತಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ(Ex CIA Officer) ಮಾಜಿ ಅಧಿಕಾರಿ ಎಂದು ಹೇಳಿಕೆ ನೀಡುವ ಮೂಲಕ ಬಾಂಬ್‌ ಸಿಡಿಸಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಯೂರಿ ಕಾಶ್ಮೀರದಲ್ಲಿ ಜಿಹಾದ್‌ ಹೋರಾಟ ಮಾಡುತ್ತಿರುವ ಲಷ್ಕರ್‌-ಎ ತೊಯ್ಬಾ, ಜೈಷ್‌-ಎ-ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದ್ದೀನ್‌ ಮತ್ತು ಅಲ್‌ ಬದ್ರ್‌ ಮುಜಾಹಿದ್ದೀನ್‌ ಸಂಘಟನೆಗಳನ್ನು ಗುರಿಯಾಗಿ ದಾಳಿಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

CIAನ ಮಾಜಿ ಅಧಿಕಾರಿ ಸಾರಾ ಆಡಂ ಶಾನ್‌ ರ್ಯಾನ್‌ ಶೋ ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದು, ಈ ವಿಡಿಯೋವನ್ನು ಜೂ.10ರಂದು ಯೂಟ್ಯೂಬ್‌ನಲ್ಲಿ ಪ್ರಕಟಿಸಲಾಗಿತ್ತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ. ಭಾರತ ತಾಲಿಬಾನ್‌ಗಳಿಗೆ 10 ಮಿಲಿಯನ್‌ ಡಾಲರ್‌ ಹಣ ನೀಡಿದೆ ಮಾತ್ರವಲ್ಲದೇ ತಾಲಿಬಾನ್‌ಗಳ ಮುಖಂಡ ಮುಲ್ಲಾ ಹಿಬಾತುಲ್ಲಾ ಅಖುಂಡಜಾದಾಗೆ ಭದ್ರತೆ ನೀಡುತ್ತಿದೆ. ಆಮೂಲಕ ತನ್ನ ವಿರುದ್ಧ ಇರುವ ಉಗ್ರರನ್ನು ತಾಲಿಬಾನ್‌ ಮೂಲಕ ಕೊಲ್ಲುತ್ತಿದೆ. ಅದೂ ಅಲ್ಲದೇ ಖಲಿಸ್ತಾನಿ ಉಗ್ರರ ಸಾವಿನ ಹಿಂದೆಯೂ ಭಾರತದ ಕೈವಾಡವಿರುವ ಸಾದ್ಯತೆ ಇದೆ ಎಂದು ಹೇಳಿದ್ದಾರೆ.

ಭಾರತ ತಾಲಿಬಾನ್‌ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಲಾಹೋರ್‌, ಕರಾಚಿ ಮತ್ತು ಪಾಕಿಸ್ತಾನದ ಇತರೆ ಭಾಗಗಳಲ್ಲಿ ದಾಳಿಗಳನ್ನು ನಡೆಸುತ್ತಿದೆ.ಭಾರತ ಗುರಿಯಾಗಿಸಿರುವ ಉಗ್ರರಲ್ಲಿ ಹಲವರು ಕಳೆದ 30ವರ್ಷಗಳಿಂದ ಮೋಸ್ಟ್‌ ವಾಟೆಂಟ್‌ ಉಗ್ರಗಾಮಿಗಳಾಗಿದ್ದರು. 18 ಉಗ್ರರ ಪಟ್ಟಿಯನ್ನು ನಾನೂ ನೋಡಿದ್ದೇನೆ. ಸದ್ಯ ಅವರೆಲ್ಲಾ ಬದುಕಿದ್ದರೋ ಇಲ್ಲವೋ ತಿಳಿದಿಲ್ಲ. ಆ 18 ಉಗ್ರರು ಯಾರೆಂಬುದು ನನಗೆ ಗೊತ್ತಿದೆ. ಏಕೆಂದರೆ ಕೆಲವು ಕಾಲ ನಾನ್ ಕಾಶ್ಮೀರದಲ್ಲಿ ಕೆಲಸ ಮಾಡಿದ್ದೆ. ಆ ಎಲ್ಲರೂ ಲಷ್ಕರ್‌-ಎ ತೊಯ್ಬಾ, ಜೈಷ್‌-ಎ-ಮೊಹಮ್ಮದ್‌, ಹಿಜ್ಬುಲ್‌ ಮುಜಾಹಿದ್ದೀನ್‌ ಮತ್ತು ಅಲ್‌ ಬದ್ರ್‌ ಮುಜಾಹಿದ್ದೀನ್‌ ಸಂಘಟನೆಗೆ ಸೇರಿದವರಾಗಿದ್ದರು.

ತಾಲಿಬಾನ್‌ ಸಂಘಟನೆ ಮುಲ್ಲಾ ಯಾಕೂಬ್‌ಗೆ 10 ಮಿಲಿಯನ್‌ ಡಾಲರ್‌ ಭಾರತ ನೀಡಿತ್ತು. ಆ ಹಣ ನೇರವಾಗಿ ಗೆಕ್ಕೋ ನೆಲೆಗೆ ತಲುಪಿದೆ. ಈ ಸ್ಥಳದಲ್ಲೇ ತಾಲಿಬಾನ್‌ಗಳ ಮುಖಂಡ ಮುಲ್ಲಾ ಹಿಬಾತುಲ್ಲಾ ಅಖುಂಡಜಾದಾ ಭದ್ರತೆ ನೀಡಲಾಗುತ್ತಿದೆ. ಬಹುಷಃ ಆತನ ಭದ್ರತೆಗೆಂದೇ ಭಾರತ ಅಷ್ಟೋಂದು ಹಣವನನು ವ್ಯಯಿಸುತ್ತಿದೆ. ಇಷ್ಟೆಲ್ಲಾ ಖರ್ಚು ಮಾಡುತ್ತಿರುವ ಭಾರತ ಅದರ ಬದಲಿಗೆ ಏನಾದರೂ ನಿರೀಕ್ಷಿಸದೇ ಇರುತ್ತದೆಯೇ? ಪಾಕಿಸ್ತಾನದಲ್ಲಿರುವ ಕಾಶ್ಮೀರಿ ಉಗ್ರರನ್ನು ಹತ್ಯೆಗೆ ಭಾರತ ತಾಲಿಬಾನ್‌ಗಳನ್ನು ಬಳಸಿಕೊಳ್ಳುತ್ತಿರುವುದು ಖಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

Exit mobile version