Site icon Vistara News

Turkey Earthquake: ಕಟ್ಟಡದಡಿಯಾಗಿ ಉಸಿರು ಚೆಲ್ಲಿದ ಬಾಲಕಿ; ಬಿಟ್ಟು ಹೋಗಲಾರದೆ ಅವಳ ಬೆರಳು ಹಿಡಿದು ಮುದುಡಿ ಕುಳಿತ ಅಪ್ಪ

Father Refused To Let Go Of His Dead Daughter In Turkey

#image_title

ಟರ್ಕಿ-ಸಿರಿಯಾ ಭೂಕಂಪ ಕರಾಳತೆಯನ್ನು ಸೃಷ್ಟಿಸಿದೆ. ಅವಶೇಷಗಳಡಿ ಸಿಲುಕಿಬಿದ್ದವರ ರಕ್ಷಣಾ ಕಾರ್ಯಾಚರಣೆ ಮುಗಿಯುತ್ತಲೇ ಇಲ್ಲ. ಕಳೆದ ನಾಲ್ಕು ದಿನಗಳಿಂದಲೂ ಕುಸಿದು ಬಿದ್ದ ಕಟ್ಟಡಗಳಡಿ ಮಲಗಿರುವವರು ಇದ್ದಾರೆ. ಒಂದಷ್ಟು ಜನರ ಜೀವ ಅಲ್ಲಿಯೇ ಹೋಗಿದೆ. ಈ ಮಧ್ಯೆ ಕೆಲವು ಮನಮಿಡಿಯುವ, ಭಾವನಾತ್ಮಕ ದೃಶ್ಯಗಳು ಕಂಡುಬರುತ್ತಿದೆ. ಅದರಲ್ಲೊಂದು ಈ ಅಪ್ಪ-ಮಗುವಿನ ಫೋಟೋ..

ಕಟ್ಟಡವೊಂದು ಕುಸಿದು ಬಿದ್ದಿದೆ. ಅವಶೇಷಗಳಡಿಯಲ್ಲಿ 15ವರ್ಷದ ಹುಡುಗಿಯೊಬ್ಬಳು ಸಿಲುಕಿದ್ದಾಳೆ. ಮತ್ತು ಆ ಬಾಲಕಿಯ ಜೀವ ಅಲ್ಲಿಯೇ ಹೋಗಿದೆ. ಅವಳ ದೇಹ ಕಣ್ಣಿಗೆ ಕಾಣಿಸುತ್ತಿಲ್ಲ. ಆದರೆ ಆಕೆಯ ಒಂದು ಕೈ ಹೊರಗೆ ಬಂದಿದೆ. ಅದರ ಅಪ್ಪ ಅಲ್ಲೇ ಪಕ್ಕದಲ್ಲಿ ಮುರಿದ ಇಟ್ಟಿಗೆಗಳ ಕುಳಿತಿದ್ದಾರೆ ಮತ್ತು ಸತ್ತುಹೋದ ತನ್ನ ಮಗಳ ಕೈ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಮುಖದಲ್ಲಿ ಖೇದ ಮನೆ ಮಾಡಿದೆ. ಜರ್ಕಿನ್​ ಧರಿಸುತ್ತಿದ್ದರೂ ಚಳಿಯಿಂದ ಮುದುಡಿದ್ದಾರೆ. ನನ್ನ ಮಗಳು ಇಮ್ರಾಕ್​​​ನ ಕೈ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಆ ತಂದೆ ಪಟ್ಟಾಗಿ ಕುಳಿತುಬಿಟ್ಟಿದ್ದಾರೆ. ಇದೊಂದು ದೃಶ್ಯ ಅತ್ಯಂತ ಭಾವನಾತ್ಮಕವಾಗಿ ಕಾಣುತ್ತಿದೆ.

ಇದನ್ನೂ ಓದಿ: Turkey Syria Earthquake: ಟರ್ಕಿ, ಸಿರಿಯಾದಲ್ಲಿ ಸಾವಿನ ಸಂಖ್ಯೆ 19,300ಕ್ಕೆ, ಇಂಡೋನೇಷ್ಯಾದಲ್ಲೂ ಭೂಕಂಪಕ್ಕೆ 4 ಸಾವು

ಈ ಸ್ಥಳದಲ್ಲಿ ಭೂಕಂಪವಾಗಿ ಕಟ್ಟಡಗಳೆಲ್ಲ ಕುಸಿದುಬಿದ್ದವು. ಆದರೆ ತಕ್ಷಣವೇ ಯಾವುದೇ ರಕ್ಷಣಾ ತಂಡಗಳು ಇಲ್ಲಿಗೆ ಬರಲಿಲ್ಲ. ಹುಡುಗಿ ಇಮ್ರಾಕ್​​ಳನ್ನು ಅವಶೇಷಗಳಡಿಯಿಂದ ಹೊರಗೆ ಎಳೆಯುವುದು ತಡವಾಗಿ ಹೋಯಿತು. ಆಕೆ ಅಲ್ಲೇ ಉಸಿರುಚೆಲ್ಲಿದ್ದಳು. ಅವಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗದ ಅಪ್ಪ, ಪಕ್ಕದಲ್ಲೇ ಮನಸು ಮುದುಡಿಕೊಂಡು ಕುಳಿತಿದ್ದರು. ಅಂತಾರಾಷ್ಟ್ರೀಯ ಮಾಧ್ಯಮವೊಂದರ ಪತ್ರಕರ್ತ ಈ ಫೋಟೋ ಸೆರೆಹಿಡಿದ್ದಾರೆ. ಮಾತೇ ಹೊರಡಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Exit mobile version