ಲಂಡನ್: ಚಲಿಸುವ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೇ ಇದ್ದುದಕ್ಕಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ದಂಡ ವಿಧಿಸಲಾಗಿದೆ. ಸೋಶಿಯಲ್ ಮೀಡಿಯಾ ವಿಡಿಯೋ ಒಂದರ ಚಿತ್ರೀಕರಣ ಸಂದರ್ಭದಲ್ಲಿ ಅವರು ಹೀಗೆ ಕಂಡುಬಂದಿದ್ದರು.
ರಿಷಿ ಸುನಕ್ (42) ಎಂಬ ವ್ಯಕ್ತಿಗೆ ಸೀಟ್‌ಬೆಲ್ಟ್ ಹಾಕದ ಅಪರಾಧಕ್ಕಾಗಿ ಷರತ್ತುಬದ್ಧವಾದ 100 ಪೌಂಡ್‌ಗಳ ದಂಡ ವಿಧಿಸಲಾಗಿದೆ ಎಂದು ಲಂಕಾಶೈರ್ ಪೊಲೀಸರು ಹೇಳಿದ್ದಾರೆ. ಸರ್ಕಾರದ ನೂತನ ಯೋಜನೆಗಳಿಗೆ ನಿಧಿಸಂಗ್ರಹ ಮಾಡುವ ಉದ್ದೇಶದ ವಿಡಿಯೋ ಒಂದರ ಚಿತ್ರೀಕರಣದಲ್ಲಿ ರಿಷಿ ಸುನಕ್ ಪಾಲ್ಗೊಂಡಿದ್ದರು. ಅವರು ಹಿಂದಿನ ಸೀಟ್‌ನಲ್ಲಿ ಕುಳಿತಿದ್ದರು.
ಇದನ್ನೂ ಓದಿ | Rishi Sunak | ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ವಿಷಯದಲ್ಲಿ ಭಾರತ ಪ್ರಧಾನಿ ಪರ ನಿಂತ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಇದಾದ ಬಳಿಕ ರಿಷಿ ಸುನಕ್ ಅವರ ಒಂದು ಕ್ಷಮಾಯಾಚನೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಾಯುವ್ಯ ಇಂಗ್ಲೆಂಡ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು. ಈ ಸಂದರ್ಭದಲ್ಲಿ ʼಸಾಂದರ್ಭಿಕ ನಿರ್ಣಯದ ಪ್ರಮಾದʼ ಉಂಟಾದುದಕ್ಕಾಗಿ ರಿಷಿ ಸುನಕ್ ಕ್ಷಮೆ ಯಾಚಿಸಿದ್ದಾರೆ. ʼʼಎಲ್ಲರೂ ಸೀಟ್‌ಬೆಲ್ಟ್ ಧರಿಸಲೇಬೇಕೆಂದು ಪಿಎಂ ನಂಬುತ್ತಾರೆʼʼ ಎಂದು ಅವರ ವಕ್ತಾರರು ಹೇಳಿದ್ದಾರೆ.
ಇಂಗ್ಲೆಂಡ್‌ನಲ್ಲಿ ಸೀಟ್‌ಬೆಲ್ಟ್ ಧರಿಸಿದ ವ್ಯಕ್ತಿಗೆ 100ರಿಂದ 500 ಪೌಂಡ್ ವರೆಗೆ ದಂಡ ವಿಧಿಸಬಹುದಾಗಿದೆ. ವೈದ್ಯಕೀಯ ಪ್ರಮಾಣಪತ್ರ ಪಡೆದವರಿಗೆ ಮಾತ್ರ ಸೀಟ್‌ಬೆಲ್ಟ್ ಧರಿಸುವಲ್ಲಿ ವಿನಾಯಿತಿ ಇದೆ. ಪೊಲೀಸ್, ಫೈರ್, ಆಂಬ್ಯುಲೆನ್ಸ್‌ಗಳಲ್ಲಿರುವವರಿಗೂ ವಿನಾಯಿತಿಯಿದೆ. ಇತ್ತೀಚೆಗೆ ಅಲ್ಲಿನ ಸರ್ಕಾರ ನಿಯಮಾವಳಿಗಳನ್ನು ಇನ್ನಷ್ಟು ಬಿಗಿ ಮಾಡಿದೆ. ಪ್ರತಿವರ್ಷ ಇಲ್ಲಿ ಸೀಟ್‌ಬೆಲ್ಟ್ ಧರಿಸದ ಕಾರಣ ಅಪಘಾತಗಳಲ್ಲಿ ಶೇ.30 ಮಂದಿ ಸಾಯುತ್ತಾರೆ ಎಂದು ಅಂಕಿಅಂಶಗಳು ತಿಳಿಸಿವೆ.
ಇದನ್ನೂ ಓದಿ | Britain PM Rishi Sunak | 2024ರ ಚುನಾವಣೆಯಲ್ಲಿ ಬ್ರಿಟನ್ ಪಿಎಂ ರಿಷಿ ಸುನಕ್ ಸೇರಿ 15 ಸಚಿವರ ಸೋಲು ಖಚಿತ!