Site icon Vistara News

Nato Alliance : ನ್ಯಾಟೊ ಸದಸ್ಯತ್ವ ಪಡೆದ ಫಿನ್ಲೆಂಡ್​, ರಷ್ಯಾ ಅಧ್ಯಕ್ಷ ಪುಟಿನ್​ಗೆ ಹಿನ್ನಡೆ

Finland, which has become a member of NATO, is a setback for Russian President Putin

#image_title

ವಾಷಿಂಗ್ಟನ್​ : ವಿಶ್ವದ ಅತ್ಯಂತ ಬಲಿಷ್ಠ ಸೇನಾ ಒಕ್ಕೂಟವಾಗಿರುವ ನ್ಯಾಟೊ ಸದಸ್ಯತ್ವ ಪಡೆಯಲು ರಷ್ಯಾದೊಂದಿಗೆ ಗಡಿ ಹಂಚಿಕೊಂಡಿರುವ ಫಿನ್ಲೆಂಡ್​ ಯಶಸ್ವಿಯಾಗಿದೆ. ಫಿನ್ಲೆಂಡ್ ನ್ಯಾಟೊ ಸದಸ್ಯತ್ವ ಪಡೆದ 31ನೇ ರಾಷ್ಟ್ರವಾಗಿದೆ. ಈ ಮೂಲಕ ಹಲವು ವರ್ಷಗಳ ಕಾಲ ಕಾಪಾಡಿಕೊಂಡಿದ್ದ ಅಲಿಪ್ತ ನೀತಿಗೆ ಅಂತ್ಯ ಹಾಡಿದ್ದು, ಇನ್ನು ಮುಂದೆ ಅಮೆರಿಕ ನೇತೃತ್ವದ ಮೈತ್ರಿ ಕೂಟದಲ್ಲಿ ಭಾಗಿಯಾಗಲಿದೆ. ಏತನ್ಮಧ್ಯೆ, ನ್ಯಾಟೊ ವಿಚಾರವಾಗಿ ಉಕ್ರೇನ್​ ಮೇಲೆ ಯುದ್ಧ ಸಾರುತ್ತಿರುವ ನಡುವೆಯೇ ಫಿನ್​ಲ್ಯಾಂಡ್​ ನ್ಯಾಟೊ ಸೇರಿದ್ದು ರಷ್ಯಾ ಅಧ್ಯಕ್ಷ ಪುಟಿನ್​ಗೆ ಹಿನ್ನಡೆ ಎನಿಸಿದೆ.

ಉಕ್ರೇನ್​ ದೇಶ ನ್ಯಾಟೊ ಸದಸ್ಯತ್ವವನ್ನು ನಿರೀಕ್ಷಿಸಿದ ಕಾರಣಕ್ಕೆ ವ್ಲಾದಿಮಿರ್​ ಪುಟಿನ್​ ನೇತೃತ್ವದ ರಷ್ಯಾ ಉಕ್ರೇನ್​ ಮೇಲೆ ಸೇನಾ ದಾಳಿ ನಡೆಸಿದ್ದು, ಸಮರಕ್ಕೆ ಒಂದು ವರ್ಷ ದಾಟಿದೆ. ಇದರ ನಡುವೆಯೇ ಫಿನ್ಲೆಂಡ್​ ನ್ಯಾಟೊ ಸದಸ್ಯತ್ವ ಪಡೆದುಕೊಂಡಿದೆ. ಈ ಮೂಲಕ ರಷ್ಯಾ ದಾಳಿಯನ್ನು ಮೆಟ್ಟಿ ನಿಲ್ಲಲು ನ್ಯಾಟೊದ ಬೆಂಬಲ ಕೋರಿದೆ.

ಫಿನ್​ಲ್ಯಾಂಡ್​ ರಷ್ಯಾದ ಜತೆ 1340 ಕಿಲೋ ಮೀಟರ್​ ಗಡಿಯನ್ನು ಹಂಚಿಕೊಂಡಿದೆ. ಅಲ್ಲದೆ, ನ್ಯಾಟೊ ಸದಸ್ಯತ್ವ ಕೋರಿದರೆ ಫಿನ್​ಲ್ಯಾಂಡ್​ ಮೇಲೆಯೂ ಉಕ್ರೇನ್​ ಮಾದರಿ ದಾಳಿ ಮಾಡುತ್ತೇವೆ ಎಂದು ರಷ್ಯಾ ಹೇಳಿತ್ತು. ಈ ಭಯಕ್ಕೆ ಫಿನ್​ಲ್ಯಾಂಡ್​ ನ್ಯಾಟೊದ ನೆರವು ಕೋರಿತ್ತು. ನ್ಯಾಟೊ ನಿಯಮದ ಪ್ರಕಾರ ಸದಸ್ಯರಲ್ಲಿ ಒಬ್ಬರ ಮೇಲೆ ದಾಳಿಯಾದರೆ ಎಲ್ಲರ ಮೇಲೆ ದಾಳಿಯೆಂದು ಪರಿಗಣಿಸಿ ಪ್ರತಿ ದಾಳಿ ನಡೆಸುವುದು. ಹೀಗಾಗಿ ರಷ್ಯ ಏನಾದರೂ ಫಿನ್​ಲ್ಯಾಂಡ್​ ಮೇಲೆ ದಾಳಿ ಮಾಡಿದರೆ 31 ರಾಷ್ಟ್ರಗಳು ಪ್ರತಿದಾಳಿ ಮಾಡುವುದು ಖಾತರಿ.

ನ್ಯಾಟೊ ಒಕ್ಕೂಟದ ಬಲವೇನು?

ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್​ 1949ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಎರಡನೇ ಮಹಾಯುದ್ಧ ಮುಗಿದ ಬಳಿಕವೂ ಸೋವಿಯತ್‌ ಒಕ್ಕೂಟ ಪೂರ್ವ ಯುರೋಪ್‌ನಿಂದ ತನ್ನ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿತು. ಅಲ್ಲದೆ, 1948ರಲ್ಲಿ ಬರ್ಲಿನ್‌ ನಗರವನ್ನು ಸುತ್ತುವರಿದಿತ್ತು ಈ ವೇಳೆ ನ್ಯಾಟೋ ಮೂಲಕ ಸೋವಿಯತನ್‌ ಆಕ್ರಮಣ ಎದುರಿಸಲು ಅಮೆರಿಕ ಸಜ್ಜಾಯಿತು. ಆರಂಭದಲ್ಲಿ ಈ ಒಕ್ಕೂಟಕ್ಕೆ 12 ದೇಶಗಳು ಸೇರಿಕೊಂಡವು. ಬ್ರಿಟನ್‌, ಫ್ರಾನ್ಸ್‌, ಕೆನಡಾ, ಇಟಲಿ, ನೆದರ್ಲೆಂಡ್‌, ಐಸ್ಲೆಂಡ್‌, ಬೆಲ್ಜಿಯಂ, ಲಕ್ಸಂಬರ್ಗ್‌, ನಾರ್ವೆ, ಪೋರ್ಚುಗಲ್‌ ಮತ್ತು ಡೆನ್ಮಾರ್ಕ್‌ ಸದಸ್ಯತ್ವ ಪಡೆದುಕೊಂಡಿತು.

ಯುರೋಪ್‌ ರಾಷ್ಟ್ರಗಳಿಗೆ ರಷ್ಯಾದಿಂದ ಪದೇಪದೆ ಆತಂಕ ಎದುರಾಗುತ್ತದೆ. ನ್ಯಾಟೊ ಬಲ ಹೆಚ್ಚುತ್ತಿರುವಂತೆ ರಷ್ಯಾ ಕೂಡ ಆ ದೇಶಗಳನ್ನು ಎದುರು ಹಾಕಿಕೊಳ್ಳುವುದಿಲ್ಲ. ನ್ಯಾಟೊದ ಸೇನಾ ಹೆಚ್ಚಿರುವ ಕಾರಣ ರಷ್ಯಾ ದೊಡ್ಡ ಮಟ್ಟದ ಹಾನಿ ಎದುರಿಸಬೇಕಾಗುತ್ತದೆ.

Exit mobile version