ರೆಸ್ಟೋರೆಂಟ್‌ವೊಂದರಲ್ಲಿ (Viral News) ಗ್ರಾಹಕನೊಬ್ಬ (FIR Against Customer) 1 ಸಾವಿರ ರೂಪಾಯಿಯ ಊಟ ಮಾಡಿ 2.5 ಲಕ್ಷ ರೂ.ಯ ಟಿಪ್ಸ್ (Tips) ಕೊಟ್ಟು ಹೋದ ಘಟನೆ ಪೆನ್ಸಿಲ್ವೇನಿಯಾದಲ್ಲಿ ( Pennsylvania) ನಡೆದಿದೆ. ಭಾರಿ ಮೊತ್ತದ ಟಿಪ್ಸ್ ಕೊಟ್ಟ ಗ್ರಾಹಕನ ವಿರುದ್ಧ ಇದೀಗ ಉಪಾಹಾರ ಗೃಹವೇ (restaurant) ಮೊಕದ್ದಮೆ ದಾಖಲಿಸಿದೆ!
ಪೆನ್ಸಿಲ್ವೇನಿಯಾದ ರೆಸ್ಟೊರೆಂಟ್‌ವೊಂದರಲ್ಲಿ 13 ಡಾಲರ್ ಕೊಟ್ಟು ಊಟ ಮಾಡಿದ ಗ್ರಾಹಕ ಬಳಿಕ ಸರ್ವೇಯರ್ ಗೆ 3,000 ಡಾಲರ್ ಟಿಪ್ಸ್ ಬಿಟ್ಟು ಹೋಗಿದ್ದಾನೆ. ಇದರಿಂದ ಅನುಮಾನಗೊಂಡ ಸರ್ವೇಯರ್ ಆತನ ಬಗ್ಗೆ ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ಆತನೇನು ಕರುಣಾಮಯಿ ಆಗಿರಲಿಲ್ಲ ಎಂದು ಅರಿತ ಉಪಾಹಾರ ಗೃಹ ಆತನ ವಿರುದ್ಧ ಕೇಸು ದಾಖಲಿಸಿದೆ.
2022ರ ಜೂನ್‌ನಲ್ಲಿ ಸ್ಕ್ರ್ಯಾಂಟನ್‌ನಲ್ಲಿರುವ ಆಲ್ಫ್ರೆಡೋಸ್ ಕೆಫೆಗೆ ಬಂದಿದ್ದ ಗ್ರಾಹಕ ಎರಿಕ್ ಸ್ಮಿತ್ ಎಂಬಾತ ಸ್ಟ್ರಾಂಬೋಲಿಯನ್ನು ಆರ್ಡರ್ ಮಾಡಿದ್ದ. ಬಳಿಕ ಅಲ್ಲಿ ದೊಡ್ಡ ಮೊತ್ತದ ಟಿಪ್ಸ್ ಅನ್ನು ಬಿಟ್ಟು ಹೋಗಿದ್ದ. ಇದರಿಂದ ಹೊಟೇಲ್ ಸಿಬ್ಬಂದಿ ದಿಗ್ಬ್ರಮೆಗೊಂಡಿದ್ದರು. ಊಟಕ್ಕೆ ಕೇವಲ 13.25 ಡಾಲರ್ ವೆಚ್ಚವಾಗಿದೆ. ಆದರೆ ಅವನು ಸರ್ವೇಯರ್ ಮರಿಯಾನಾ ಲ್ಯಾಂಬರ್ಟ್ ಅವರಿಗೆ ದೊಡ್ಡ ಮೊತ್ತದ ಟಿಪ್ಸ್ ನೀಡಿರುವುದು ಆಕೆ ಭಾವೋದ್ರಿಕ್ತಳಾಗುವಂತೆ ಮಾಡಿತ್ತು.
ಲ್ಯಾಂಬರ್ಟ್ ಅವರಿಗೆ ಇದು ನಂಬಲು ಅಸಾಧ್ಯವಾಗಿತ್ತು. ಗ್ರಾಹಕ ಹಣವನ್ನು ಆಕಸ್ಮಿಕವಾಗಿ ಬಿಟ್ಟು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆ ನಿರ್ಧರಿಸಿದಳು. ಆಲ್ಫ್ರೆಡೋಸ್ ಕೆಫೆಯ ಮ್ಯಾಟ್ ಮಾರ್ಟಿನಿ ಅಂಕಿಅಂಶವನ್ನು ಪರಿಶೀಲಿಸಿದಾಗ ಚೆಕ್‌ನಲ್ಲಿ ‘ಟಿಪ್ಸ್ ಫಾರ್ ಜೀಸಸ್’ ಎಂದು ಬರೆದ ಸ್ಮಿತ್ ನ ಕುರಿತಾಗಿ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲು ಹೊರಟಳು.
ಕೊನೆಗೆ ಸ್ಮಿತ್ ನನ್ನು ಸಂಪರ್ಕಿಸಿ ಕಾರಣ ಕೇಳಿದಾಗ ಆತ ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಸ್ ಫಾರ್ ಜೀಸಸ್ ಟ್ರೆಂಡ್ ನಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿದ. ಲ್ಯಾಂಬರ್ಟ್ ಅವರ ಆತಿಥ್ಯವನ್ನು ಸ್ವೀಕರಿಸಿದ ಬಳಿಕ ಇದನ್ನು ಮಾಡಲು ನಿರ್ಧರಿಸಿರುವುದಾಗಿ ಹೇಳಿದ. ಇದಾದ ಕೆಲವು ವಾರಗಳ ಬಳಿಕ ಸ್ಮಿತ್ ಕೆಫೆಗೆ ನೀಡಿದ ಟಿಪ್ಸ್ ಕುರಿತು ತಕರಾರು ನೊಟೀಸ್ ಕಳುಹಿಸಿದ! ಇದರಿಂದ ಕೆಫೆ ಆತನ ವಿರುದ್ಧವೇ ಈಗ ಮೊಕದ್ದಮೆ ದಾಖಲಿಸಿದೆ.
ಇದನ್ನೂ ಓದಿ: Costliest City: ಮುಂಬಯಿ ಈಗ ಭಾರತದ ಅತ್ಯಂತ ದುಬಾರಿ ನಗರ; ಬೆಂಗಳೂರಿಗೆ ಎಷ್ಟನೇ ಸ್ಥಾನ?
ಈ ಕುರಿತು ಕೆಫೆಯಲ್ಲಿ ಕೆಲಸ ಮಾಡುವ ಜಕಾರಿ ಜಾಕೋಬ್ಸನ್ ಮಾತನಾಡಿ, ಯಾರೋ ನಿಜವಾಗಿಯೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನಾವು ಭಾವಿಸಿದ್ದೇವು. ಆದರೆ ಅದು ಹುಸಿಯಾಗಿದೆ ಎಂದು ಹೇಳಿದರು.
ಆಲ್ಫ್ರೆಡೋಸ್ ಕೆಫೆಯು ಈಗಾಗಲೇ ಲ್ಯಾಂಬರ್ಟ್‌ಗೆ 3,000 ಡಾಲರ್ ಅನ್ನು ತಮ್ಮ ಜೇಬಿನಿಂದ ಸ್ಮಿತ್‌ಗೆ ಮರುಪಾವತಿ ಮಾಡುವಂತೆ ಸೂಚಿಸಿದೆ. ಲ್ಯಾಂಬರ್ಟ್ ಅವರು ಫೇಸ್‌ಬುಕ್‌ನಲ್ಲಿ ಸ್ಮಿತ್‌ನೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಗ್ರಾಹಕನ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಲು ನಿರ್ಧರಿಸಿದರು.