ಬೀಜಿಂಗ್: ಜಗತ್ತಿನಾದ್ಯಂತ ಕೊರೊನಾ ಹಬ್ಬಿ, ಮನುಕುಲವೇ ಸಂಕಷ್ಟಕ್ಕೆ ದೂಡಿದ ಚೀನಾದಲ್ಲಿ ಈಗಲೂ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದೆ. ಇದರಿಂದ ಜನ ಆತಂಕಕ್ಕೀಡಾಗಿದ್ದು, ಸೋಂಕು ನಿಯಂತ್ರಿಸಲು ಸರಕಾರ ಪರದಾಡುತ್ತಿದೆ. ತಪಾಸಣೆಯನ್ನೂ ಹೆಚ್ಚಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಧಿಕಾರಿಗಲೂ ಮನುಷ್ಯರಿಗೆ ಮಾತ್ರವಲ್ಲ, ಮೀನು, ಕಪ್ಪೆಗಳನ್ನೂ ಹಿಡಿದು ಕೊರೊನಾ ತಪಾಸಣೆ ಮಾಡಲಾಗುತ್ತಿದೆ. ಹೀಗೆ ತಪಾಸಣೆ ಮಾಡುತ್ತಿರುವ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿರುವ ಕಾರಣ ೫೦ ಲಕ್ಷ ಜನರ ತಪಾಸಣೆ ಮಾಡಬೇಕು ಎಂದು ಆದೇಶಿಸಲಾಗಿದೆ. ಇನ್ನು ಪ್ರಾಣಿಗಳಿಂದಲೇ ಸೋಂಕು ಹರಡುತ್ತದೆ ಎಂಬ ಗುಮಾನಿ ಇರುವುದರಿಂದ ಸೀ ಫುಡ್ (Sea Food) ಮಾರುಕಟ್ಟೆಯಲ್ಲಿ ಮೀನು ಹಾಗೂ ಏಡಿಗಳಿಗೂ ಕೊರೊನಾ ತಪಾಸಣೆ ಮಾಡಲಾಗುತ್ತಿದೆ.
ಪಿಪಿಇ ಕಿಟ್ ಧರಿಸಿದ ಆರೋಗ್ಯ ಸಿಬ್ಬಂದಿಯು ಮೀನು ಹಾಗೂ ಏಡಿಗಳ ಸ್ವ್ಯಾಬ್ ಟೆಸ್ಟ್ ನಡೆಸುತ್ತಿರುವ ವಿಡಿಯೊವನ್ನು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಎರಡು ಲಕ್ಷಕ್ಕೂ ಅಧಿಕ ಜನ ವಿಡಿಯೊವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ | ಚೀನಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ʼಸ್ಫೋಟಕʼ ಏರಿಕೆ, ಲಾಕ್‌ಡೌನ್