ನೆರೆಹೊರೆಯ ರಾಷ್ಟ್ರಗಳಲ್ಲಿ ಮುಖ್ಯವಾಗಿ ಭಾರತದ ಗಡಿಯನ್ನು (Indian border) ಹಂಚಿಕೊಂಡಿರುವ ಬಾಂಗ್ಲಾದಲ್ಲಿ (Bangladesh Unrest) ಸಾಮಾಜಿಕ ಅಶಾಂತಿ, ರಾಜಕೀಯ ಅಸ್ಥಿರತೆ ಉಂಟಾಗಿದ್ದರೂ ಇದು ಭಾರತದ ಮೇಲೆ ಯಾವುದೇ ಪ್ರಭಾವವನ್ನು ಬೀರಿಲ್ಲ. ರಾಷ್ಟ್ರವನ್ನು ಅಸ್ಥಿರಗೊಳಿಸುವ ಗುರಿ ಹೊಂದಿರುವ ವಿದೇಶಿ ಹಸ್ತಕ್ಷೇಪಗಳನ್ನು (Foreign Conspiracy) ತಡೆಗಟ್ಟುವ ಮೂಲಕ ಭಾರತದೊಳಗೆ ಉದ್ಭವವಾಗಬಹುದಾಗಿದ್ದ ಬಾಂಗ್ಲಾದಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ತಪ್ಪಿಸಿದೆ. ಭಾರತದೊಳಗೆ ಅಶಾಂತಿಯನ್ನು ಪ್ರಚೋದಿಸಲು ಬಾಹ್ಯ ಶಕ್ತಿಗಳ ಮೂಲಕ ಪ್ರಯತ್ನಗಳು ನಡೆದಿದ್ದರೂ ಭಾರತ ಸರ್ಕಾರದ ಪೂರ್ವಭಾವಿ ಕ್ರಮಗಳು ದೇಶವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸುರಕ್ಷಿತವಾಗಿ ಉಳಿಯುವಂತೆ ಮಾಡಿದೆ.
ಭಾರತ- ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಎಡಿಜಿ ನೇತೃತ್ವದ ಸಮಿತಿಯನ್ನು ರಚಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದರು. ಈ ಸಮಿತಿಯು ಬಾಂಗ್ಲಾದೇಶದಲ್ಲಿ ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ತೊಂದರೆಗೊಳಗಾದ ದೇಶದಲ್ಲಿ ವಾಸಿಸುವ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ನೆರೆಹೊರೆಯ ರಾಷ್ಟ್ರದಲ್ಲಿ ಉಂಟಾಗಿರುವ ಪರಿಸ್ಥಿತಿಯು ದೇಶದೊಳಗೆ ಪ್ರಭಾವ ಬೀರದಂತೆ ಯಶಸ್ವಿಯಾಗಿ ತಡೆಗಟ್ಟಿದ ಭಾರತದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಆಂಡ್ ಕಾನ್‌ಫ್ಲಿಕ್ಟ್ ಸ್ಟಡೀಸ್‌ನಲ್ಲಿ (IPCS) ಹಿರಿಯ ಫೆಲೋ ಆಗಿರುವ ಅಭಿಜಿತ್ ಅಯ್ಯರ್ ಮಿತ್ರ ಅವರು ಮಾತನಾಡಿ, ಭಾರತದ ದೃಢವಾದ ವಿದೇಶಾಂಗ ನೀತಿ ಮತ್ತು ವಿದೇಶಿ ಎನ್‌ಜಿಒ ನಿಧಿಯ ಕಟ್ಟುನಿಟ್ಟಾದ ನಿಯಂತ್ರಣ ಭಾರತವನ್ನು ಸುರಕ್ಷಿತವಾಗಿ ಇರಿಸಿದೆ. ಒಮಿಡ್ಯಾರ್ ಮತ್ತು ಹಿಂಡೆನ್‌ಬರ್ಗ್‌ನಂತಹ ಗುಂಪುಗಳು ಭಾರತವನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕವಾಗಿ ಟೀಕಿಸುತ್ತಿವೆ. ಸರ್ಕಾರದ ಬಲವಾದ ನಿಲುವು ಗಮನಾರ್ಹ ಹಾನಿಯನ್ನುಂಟು ಮಾಡುವುದನ್ನು ತಪ್ಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ವಿದೇಶಾಂಗ ನೀತಿ ಮತ್ತು ರಾಜಕೀಯ ಆರ್ಥಿಕತೆಯಲ್ಲಿ ಪರಿಣಿತರಾದ ಪ್ರಮಿತ್ ಪಾಲ್ ಚೌಧುರಿ ಈ ಕುರಿತು ಮಾತನಾಡಿ, 1971ರಿಂದ ಬಾಂಗ್ಲಾದಲ್ಲಿ ಹಿಂದೂಗಳು ರಾಜಕೀಯ ಮತ್ತು ಧಾರ್ಮಿಕ ಮೂಲಭೂತವಾದಿಗಳ ದಾಳಿಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಬಂಗಾಳಿ ಬೌದ್ಧಿಕ ವರ್ಗವನ್ನು ಉದ್ದೇಶಪೂರ್ವಕವಾಗಿ ನಿರ್ಮೂಲನೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Hindus in Bangla: ಬಾಂಗ್ಲಾದಲ್ಲಿ ಹಿಂದೂ ಆಗಿರುವುದೇ ಅಪರಾಧ; ಕರಾಳ ದಿನ ನೆನಪಿಸಿಕೊಳ್ಳುವ ವಲಸಿಗರು; ವಿಡಿಯೊಗಳಿವೆ
ಈ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಯಶಸ್ವಿಯಾಗಿದೆ. ಇತ್ತೀಚೆಗೆ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಗಳ ಮೇಲೆ ಪ್ರಭಾವ ಬೀರಲು ಅಂತಾರಾಷ್ಟ್ರೀಯ ವ್ಯಕ್ತಿಗಳು ಪ್ರಯತ್ನಿಸಿದರೂ ಭಾರತ ಸರ್ಕಾರವು ದೃಢವಾಗಿ ಇದನ್ನು ಎದುರಿಸಿತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಜಾಗತಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂಬುದನ್ನು ಹಲವಾರು ಮಂದಿ ಒಪ್ಪಿಕೊಂಡಿದ್ದಾರೆ ಎಂದು ಔಧರಿ ಹೇಳಿದ್ದಾರೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಜತೆ ಕೊಟ್ಟಿರುವ ವಿಡಿಯೊ ನೋಡಿ.