ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ (೬೭) ಅವರು ಗುಂಡಿನ ದಾಳಿಗೀಡಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ಪಶ್ಚಿಮ ಜಪಾನ್‌ನ ನರಾ ನಗರದಲ್ಲಿ ಶಿಂಜೊ ಚುನಾವಣಾ ಪ್ರಚಾರದ ಭಾಷಣ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆಯಿತು. ರಕ್ತಸ್ರಾವಗೊಂಡು ಗಂಭೀರ ಸ್ಥಿತಿಗೆ ತಲುಪಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಿಂಜೊ ಅಬೆ ಅವರ ಎದೆಗೆ ಗುಂಡೇಟು ತಗುಲಿದೆ. ಶಂಕಿತ ದಾಳಿಕೋರನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಜಪಾನ್‌ನಲ್ಲಿ ಸಂಸತ್ತಿನ ಮೇಲ್ಮನೆಯ ಚುನಾವಣೆ ಜುಲೈ ೧೦ಕ್ಕೆ ನಡೆಯಲಿದೆ. ಶಿಂಜೊ ಅಬೆ ಅವರು ೨೦೨೦ರಲ್ಲಿ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟಿದ್ದರು. ತಮ್ಮ ಅವಧಿಯನ್ನು ಪೂರ್ಣಗೊಳಿಸಲಾಗದಿರುವುದಕ್ಕೆ ಜಪಾನಿಗರ ಕ್ಷಮೆ ಕೋರಿದ್ದರು. ಜಪಾನಿನಲ್ಲಿ ಇದುವರೆಗೆ ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದ ಹೆಗ್ಗಳಿಕೆ ಶಿಂಬೊ ಅವರದ್ದಾಗಿದೆ.
2006-2007 ಮತ್ತು ೨೦೧೨-೨೦೨೦ರ ಅವಧಿಯಲ್ಲಿ ಶಿಂಬೊ ಅಬೆ ಜಪಾನಿನ ಪ್ರಧಾನಿಯಾಗಿದ್ದರು.