Site icon Vistara News

ಕೊರೊನಾ ಟೈಮಿನಲ್ಲಿ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಜಾನ್ಸನ್‌‌ನ ಸಂಸತ್ ಮೆಂಬರ್‌ಶಿಪ್ಪೂ ಹೋಯ್ತು!

Former PM Boris johnson

ಲಂಡನ್: ಕೊರೊನಾ ಸಮಯದಲ್ಲಿ ಪಾರ್ಟಿ ಮಾಡಿ(Partygate), ಪ್ರಧಾನಿ ಹುದ್ದೆಯನ್ನು ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ (Former PM Boris Johnson) ಈಗ ಅದೇ ಕಾರಣಕ್ಕಾಗಿ ತಮ್ಮ ಸಂಸತ್ ಸದಸ್ಯತ್ವನ್ನು ಕಳೆದುಕೊಂಡಿದ್ದಾರೆ(Parliament Membership). ಇಂಗ್ಲೆಂಡ್ ಮೀಡಿಯಾಗಳಲ್ಲಿ ಪಾರ್ಟಿಗೇಟ್ ಹಗರಣ ಎಂದೇ ಖ್ಯಾತವಾಗಿದ್ದ ಈ ಘಟನೆಯ ಬೋರಿಸ್ ಜಾನ್ಸನ್ ಅವರ ಬಹುತೇಕ ರಾಜಕೀಯವ ಜೀವನಕ್ಕೆ ಇತಿಶ್ರೀ ಹಾಡಿದೆ. ಜಾನ್ಸನ್ ರಾಜೀನಾಮೆ ನೀಡಿ ತೆರವಾಗಿರುವ ಸ್ಥಾನಕ್ಕೆ ಬೈ ಎಲೆಕ್ಷನ್ ನಡೆಯುವ ಸಾಧ್ಯತೆ ಇದೆ.

ಪಾರ್ಟಿ ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ, ಇಂಗ್ಲೆಂಡ್ ಸಂಸತ್ತಿನ ಸಾಮಾನ್ಯರ ಮನೆಯ ಸಮಿತಿಯು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಪತ್ರವೊಂದನ್ನು ಬರೆದಿತ್ತು. ಪಾರ್ಟಿ ಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಹೌಸ್ ಆಫ್ ಕಾಮಾನ್ಸ್‌ ಅನ್ನು ತಪ್ಪು ದಾರಿಗೆ ಎಳೆಯಲಾಗಿತ್ತು. ಅಂದು ಪಾರ್ಟಿ ಮಾಡುವಾಗ ಕೊರೊನಾದ ಎಲ್ಲ ಮಾರ್ದದರ್ಶಿಗಳನ್ನು ಫಾಲೋ ಮಾಡಲಾಗಿತ್ತು ಎಂದು ಬೋರಿಸ್ ಜಾನ್ಸನ್ ಹೇಳಿದ್ದರು. ಈ ಕುರಿತು ಹೌಸ್ ಆಫ್ ಕಾಮನ್ಸ್ ಸಮಿತಿಯು ಪತ್ರ ಬರೆದು ಸ್ಪಷ್ಟಿಕರಣ ಕೇಳಿರುವ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಅವರು, ಸಂಸತ್ ಸದಸ್ಯತ್ವವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಹೌಸ್‌ ಆಫ್ ಕಾಮನ್ಸ್ ಸಮಿತಿಯು ಕಳಿಸಿರುವ ಪತ್ರದಿಂದ ತಮಗೆ ದಿಗ್ಭ್ರಮೆ ಮತ್ತು ಗಾಬರಿಯಾಗಿದೆ ಎಂದು ಜಾನ್ಸನ್ ಅವರು ಹೇಳಿದ್ದಾರೆ. ಈ ಮೂಲಕ ಬೋರಿಸ್ ಜಾನ್ಸನ್ ಅವರು ಹೌಸ್ ಆಫ್ ಕಾಮನ್ಸ್‌ನ ಸಮಗ್ರತೆಯನ್ನು ಪ್ರಶ್ನಿಸಿದ್ದಾರೆ ಎಂದು ಹಕ್ಕು ಬಾದ್ಯತಾ ಸಮಿತಿಯ ವರದಿಯನ್ನು ಉಲ್ಲೇಖಿಸಿ ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ.

ಬಹುಪಾಲು ಕನ್ಸರ್ವೇಟಿವ್ ಸಂಸದರನ್ನು ಹೊಂದಿರುವ ಸಂಸದ ನೇತೃತ್ವದ ಸಮಿತಿಯು ಸೋಮವಾರ ತನ್ನ ವಿಚಾರಣೆಯನ್ನು ಮುಕ್ತಾಯಗೊಳಿಸಲಿದೆ. ತನ್ನ ವರದಿಯನ್ನು ತ್ವರಿತವಾಗಿ ಪ್ರಕಟಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 8ನೇ ಮಗುವಿಗೆ ಅಪ್ಪನಾಗ್ತಿದ್ದಾರೆ ಬ್ರಿಟನ್​ ಮಾಜಿ ಪ್ರಧಾನಿ, 58ವರ್ಷದ ಬೋರಿಸ್ ಜಾನ್ಸನ್

ಸದ್ಯಕ್ಕೆ ಸಂಸತ್ತನ್ನು ತೊರೆಯುತ್ತಿರುವುದು ತುಂಬಾ ದುಃಖಕರವಾಗಿದೆ ಎಂದು ಜಾನ್ಸನ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನನ್ನನ್ನು ಬೆರಳೆಣಿಕೆಯಷ್ಟು ಜನರು ಬಲವಂತವಾಗಿ ಹೊರಹಾಕುತ್ತಿದ್ದಾರೆ, ಅವರ ಸಮರ್ಥನೆಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಮತ್ತು ಕನ್ಸರ್ವೇಟಿವ್ ಪಕ್ಷದ ಸದಸ್ಯರು, ಮತದಾರರ ಅನುಮೋದನೆಯಿಲ್ಲದೆ ಅವರು ಇಂಥ ಕೆಲಸವನ್ನು ಮಾಡುತ್ತಿದ್ದಾರೆಂದು ಆರೋಪಿರಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version