ನವದೆಹಲಿ: ಪ್ಯಾಲೆಸ್ತೀನ್ (Palestine) ಮೇಲೆ ಅಧಿಕೃತವಾಗಿ ಯುದ್ಧ ಸಾರಿರುವ ಇಸ್ರೇಲ್(Israel), ಗಾಜಾ ಪಟ್ಟಿಯಲ್ಲಿ (Gaza Strip) ವೈಮಾನಿಕ ದಾಳಿಯನ್ನು (Air Strike) ನಡೆಸುತ್ತಿದೆ. ಈ ಮಧ್ಯೆ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ (Former PM Naftali Bennett) ಅವರು ಇಸ್ರೇಲ್ ಯೋಧರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಸೇನೆಯನ್ನು ಸೇರ್ಪಡೆಯಾಗಿದ್ದಾರೆ(Israel Army). ಬೆನೆಟ್ ಅವರು ತಮ್ಮ ಮೀಸಲು ಕರ್ತವ್ಯಕ್ಕಾಗಿ ಆಗಮಿಸಿದರು. ಮಾಜಿ ಪ್ರಧಾನಿಗೆ ಮುಂಚೂನಿ ಪಡೆಗಳು ಹೃತ್ಪೂರ್ವಕವಾಗಿ ಸ್ವಾಗತಿಸದವು. ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ಏಕಕಾಲಕ್ಕೆ 5000 ಕ್ಷಿಪಣಿ ದಾಳಿ ನಡೆಸುವ ಮೂಲಕ ಇಸ್ರೇಲ್‌ನಲ್ಲಿ ಭಾರೀ ರಕ್ತಪಾತಕ್ಕೆ ಕಾರಣವಾಗಿದ್ದಾರೆ. ಈವರೆಗೆ ಸುಮಾರು 300 ಜನರು ಮೃತಪಟ್ಟಿದ್ದು, 1800ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ(Israel Palestine War).
2021 ಜೂನ್‌ನಿಂದ 2022 ಜೂನ್‌ವರೆಗೆ ನಫ್ತಾಲಿ ಬೆನೆಟ್ ಅವರು ಇಸ್ರೇಲ್ ಪ್ರಧಾನಿಯಾಗಿದ್ದರು. ಬೆನೆಟ್ ಅವರು ಇಸ್ರೇಲಿ ಡೆಫೆನ್ಸ್ ಫೋರ್ಸಸ್(IDF) ಸಮವಸ್ತ್ರದಲ್ಲಿ ಕಾಣಿಸಿಕೊಂಡರು. ಶನಿವಾರ ಬೆಳಿಗ್ಗೆ ಪ್ರಾರಂಭವಾದ ಹಮಾಸ್ ಉಗ್ರರ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ತನ್ನ ಮೀಸಲು ಪಡೆಯನ್ನು ಕ್ರೋಡೀಕರಿಸಿತು. ಬೆನೆಟ್ ಕೂಡ ಮೀಸಲು ಪಡೆಯ ಭಾಗವಾದ್ದರಿಂದ ಅವರು ಸೇನಾ ಸಮವಸ್ತ್ರದೊಂದಿಗೆ ಮುಂಚೂಣಿ ಪ್ರದೇಶಕ್ಕೆ ತೆರಳಿಸಿದರು. ಅವರು ಸೈನಿಕರೊಂದಿಗೆ ಹಸ್ತಲಾಘವ ಮಾಡುವ ವಿಡಿಯೋ ಕೂಡ ವೈರಲ್ ಆಗಿದೆ.
Former prime minister Naftali Bennett has shown up for reserve duty. That’s leadership by example. pic.twitter.com/vpFcfPgKLF
— Eylon Levy (@EylonALevy) October 7, 2023
ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್, ಇಸ್ರೇಲ್‌ನ ಇತಿಹಾಸದಲ್ಲಿ ಇದು ಅತ್ಯಂತ ಕಠಿಣ ದಿನಗಳಲ್ಲಿ ಒಂದಾಗಿದೆ. ಯುದ್ಧ ಸೈರನ್ ಮೊಳಗಿದ ಬೆನ್ನಲ್ಲೇ ತಮ್ಮ ಕುಟುಂಬ ಕೂಡ ರಕ್ಷಣಾ ಆಶ್ರಯತಾಣದಲ್ಲಿದೆ ಎಂದು ಹೇಳಿದ್ದಾರೆ. “ಇದು ಇಸ್ರೇಲ್‌ನ ಇತಿಹಾಸದಲ್ಲಿ ಅತ್ಯಂತ ಕಷ್ಟಕರವಾದ ದಿನಗಳಲ್ಲಿ ಒಂದಾಗಿದೆ ಮತ್ತು ಹಮಾಸ್ ಭಯೋತ್ಪಾದಕರು ದಕ್ಷಿಣ ಇಸ್ರೇಲ್‌ನ ಮೇಲೆ ದಾಳಿ ನಡೆಸುತ್ತಿರುವುದನ್ನು ನೋಡಲು ಇಸ್ರೇಲಿಗಳಿಗೆ ಕಠಿಣವಾಗುತ್ತಿದೆ. ಈ ಭಯೋತ್ಪಾದಕರು ಮಹಿಳೆಯರು, ಮಕ್ಕಳು ಮತ್ತು ಹುಡುಗಿಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಈ ಹಮಾಸ್ ಉಗ್ರರನ್ನು ಸ್ಪಷ್ಟವಾಗಿ ನಿರ್ಮೂಲನೆ ಮಾಡುವ ಸಮಯ ಈಗ ಎದುರಾಗಿದೆ ಎಂದು ಮಾಜಿ ಪ್ರಧಾನಿ ಬೆನೆಟ್ ಅವರು ಹೇಳಿದ್ದಾರೆ.
ನೇತನ್ಯಾಹು ಸರ್ಕಾರ ಪೂರ್ಣ ಬಹುಮತದ ಸರ್ಕಾರವಲ್ಲ. ಹಾಗಾಗಿ, ಇಸ್ರೇಲ್ ಪ್ರತಿಪಕ್ಷದ ನಾಯಕರು ಏಕತೆಯ ಸರ್ಕಾರ ರಚನೆಯ ಸಲಹೆಯನ್ನು ಮುಂದಿಟ್ಟಿದ್ದಾರೆ. ಇಂಥ ಕಠಿಣ ಪ್ರದೇಶದಲ್ಲಿ ನಾವೆಲ್ಲ ಒಂದಾಗಿರುವುದು ಅತ್ಯಗತ್ಯವಾಗಿದೆ. ಹಾಗಾಗಿ ನಾನು, ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಭೇಟಿ ಮಾಡಿದ್ದೇನೆ. ಈ ಕಷ್ಟದ ಸಮಯದಲಲಿ ರಾಷ್ಟ್ರೀಯ ಏಕಾತ ಸರ್ಕಾರ ರಚನೆಯ ಸಲಹೆಯನ್ನು ಮುಂದಿಟ್ಟಿದ್ದೇನೆ ಎಂದು ಪ್ರತಿಪಕ್ಷಧ ನಾಯಕ ಯಾಯಿರ್ ಲ್ಯಾಪಿಡ್ ಅವರು ಹೇಳಿದ್ದಾರೆ. ಅಂದರೆ, ಸದ್ಯ ಆಡಳಿತದಲ್ಲಿರುವ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳೆರಡೂ ಒಟ್ಟಿಗೆ ಸೇರಿ ಸರ್ಕಾರ ರಚಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Israel Palestine War: ಏನಿದು ಐರನ್ ಡೋಮ್? ಇಸ್ರೇಲ್‌ನ ಈ ವ್ಯವಸ್ಥೆ ಕ್ಷಿಪಣಿ ದಾಳಿಯನ್ನು ಹೇಗೆ ತಡೆಯುತ್ತದೆ?