ವ್ಯಾಟಿಕನ್ ಸಿಟಿ: ಅಮೆರಿಕದ ವ್ಯಾಟಿಕನ್ ಸಿಟಿಯ ಕ್ಯಾಥೊಲಿಕ್ ಚರ್ಚ್‌ನ ಮಾಜಿ ಪೋಪ್ ಬೆನೆಡಿಕ್ಟ್ XVI (95) ಅವರು (Pope Benedict) ಶನಿವಾರ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸಿಟಿ ತಿಳಿಸಿದೆ. “ಶನಿವಾರ ಬೆಳಗ್ಗೆ 9.34ರ ಸುಮಾರಿಗೆ ಪೋಪ್ ಎಮೆರಿಟಸ್ ಬೆನೆಡಿಕ್ಟ್ (XVI) ಅವರು ನಿಧನ ಹೊಂದಿದರು ಎಂಬುದನ್ನು ತಿಳಿಸಲು ದುಃಖವಾಗುತ್ತಿದೆ” ಎಂದು ವ್ಯಾಟಿಕಲ್ ಸಿಟಿ ವಕ್ತಾರ ಮಟ್ಟೇವೋ ಬ್ರೂನಿ ಮಾಹಿತಿ ನೀಡಿದ್ದಾರೆ.
ಬೆನೆಡಿಕ್ಟ್ ಅವರು ಕ್ಯಾಥೊಲಿಕ್ ಚರ್ಚ್‌ನ ಪೋಪ್ ಆಗಿ 2005ರಿಂದ 2013ರವರೆಗೆ ಕಾರ್ಯನಿರ್ವಹಿಸಿದ್ದರು. ಇವರು ಕಳೆದ ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಬೆನೆಡಿಕ್ಟ್ ಅವರ ಅನಾರೋಗ್ಯದ ಕುರಿತು ಪೋಪ್ ಫ್ರಾನ್ಸಿಸ್ ಅವರು ಡಿಸೆಂಬರ್ 28ರಂದು ಸಾರ್ವಜನಿಕಾಗಿ ಹೇಳಿದ್ದರು. ಹಾಗೆಯೇ, ಅವರ ಪರವಾಗಿ ಜಗತ್ತಿನಾದ್ಯಂತ ಇರುವ ಕ್ಯಾಥೊಲಿಕ್ ಚರ್ಚ್‌ಗಳಲ್ಲಿ ಎಲ್ಲರೂ ಪ್ರಾರ್ಥಿಸುವಂತೆ ಕರೆ ನೀಡಿದ್ದರು.
ಇದನ್ನೂ ಓದಿ | Forced Conversion | ರೋಗ ಗುಣಪಡಿಸುವ ನೆಪದಲ್ಲಿ ಮುಗ್ಧ ಜನರ ಮತಾಂತರ ಯತ್ನ; ಪಾದ್ರಿ ವಿರುದ್ಧ ದೂರು