ವಾಷಿಂಗ್ಟನ್, ಅಮೆರಿಕ: ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ (Jimmy Carter) ಅವರು ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ. 98 ವರ್ಷದ ಜಿಮ್ಮಿ ಕಾರ್ಟರ್ ಬದುಕಿರುವ ಅಮೆರಿಕ ಮಾಜಿ ಅಧ್ಯಕ್ಷರ ಪೈಕಿ ಅತ್ಯಂತ ಹಿರಿಯರಾಗಿದ್ದಾರೆ. ಅವರ ತಮ್ಮ ಉಳಿದಯ ಸಮಯವನ್ನು ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಕಳೆಯಲಿದ್ದಾರೆಂದು ಕಾರ್ಟರ್ ಸೆಂಟರ್ ತಿಳಿಸಿದೆ.
ಡೆಮಾಕ್ರಟಿಕ್ ಪಕ್ಷದ ನಾಯಕರಾಗಿದ್ದ ಜಿಮ್ಮಿ ಕಾರ್ಟರ್ ಅವರು 1977ರಿಂದ 1981ರವರೆಗೆ ಅಮೆರಿಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡನೇ ಬಾರಿಗೆ ಅವರು ಸ್ಪರ್ಧಿಸಿದ್ದರು. ಆದರೆ, ರೋನಾಲ್ಡ್ ರೆಗನ್ ವಿರುದ್ಧ ಸೋಲು ಅನುಭವಿಸಬೇಕಾಯಿುತು. ಮೆದುಳು ಮತ್ತು ಯಕೃತ್ತಿನ ಮೂಲಕ ಹರಡಿದ ಮೆಲನೋಮ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಜಿಮ್ಮಿ ಕಾರ್ಟರ್ ಅವರು ಬಳಲುತ್ತಿದ್ದಾರೆ.
ಕಾರ್ಟರ್ ಸೆಂಟರ್ ಮಾಡಿದ ಟ್ವೀಟ್ ಇಲ್ಲಿದೆ….
ಸ್ವಲ್ಪ ಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಮ್ಮಿ ಕಾರ್ಟರ್ ಅವರು ಭಾನುವಾರ ತಮ್ಮ ಕುಟುಂಬದವರೊಂದಿಗೆ ಮನೆಯಲ್ಲಿ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಹೆಚ್ಚುವರಿ ವೈದ್ಯಕೀಯ ವ್ಯವಸ್ಥೆಯ ಬೆಂಬಲದ ಬದಲಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಜಿಮ್ಮಿ ಕಾರ್ಟರ್ ಸೆಂಟರ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: China Spy Balloon: ಚೀನಾದ ಸ್ಪೈ ಬಲೂನ್‌ಅನ್ನು ಅಮೆರಿಕ ಹೊಡೆದುರುಳಿಸಿದ್ದು ಹೇಗೆ? ಇಲ್ಲಿದೆ ರೋಚಕ ವಿಡಿಯೊ
ಕಾರ್ಟರ್ ಅವರ ಮೊಮ್ಮಗ ಮತ್ತು ಮಾಜಿ ಜಾರ್ಜಿಯಾ ರಾಜ್ಯದ ಸೆನೆಟರ್, ಜೇಸನ್ ಕಾರ್ಟರ್ ಅವರು “ನಿನ್ನೆ ನನ್ನ ಅಜ್ಜಿಯರಿಬ್ಬರನ್ನು ಕಾರ್ಟರ್ ಭೇಟಿ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅವರು ಶಾಂತಿಯಿಂದ ಇದ್ದಾರೆ ಮತ್ತು – ಯಾವಾಗಲೂ – ಅವರ ಮನೆ ಪ್ರೀತಿಯಿಂದ ತುಂಬಿದೆ. ನಿಮ್ಮ ಒಳ್ಳೆಯ ಮಾತುಗಳಿಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದರು.