ವಾಷಿಂಗ್ಟನ್, ಅಮೆರಿಕ: 2024ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ (Democratic Party) ಮತ್ತು ರಿಪಬ್ಲಿಕ್ (Republic Party) ಪಕ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಲು ತೀವ್ರ ಪೈಪೋಟಿ ನಡೆದಿದೆ. ಈ ಮಧ್ಯೆ, ಅಮೆರಿಕದ ಮಾಜಿ ಉಪಾಧ್ಯಕ್ಷರಾದ ಮೈಕ್ ಪೆನ್ಸ್ (Mike Pence) ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಘೋಷಣೆ ಮಾಡಿದ್ದಾರೆ. ಅಲ್ಲದೇ, ಯಾವುದೇ ಕಾರಣಕ್ಕೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮತ್ತೆ ಅಧ್ಯಕ್ಷರಾಗಬಾರದು ಎಂದು ಹೇಳಿದ್ದಾರೆ. ರಿಪಬ್ಲಿಕ್ ಪಕ್ಷದ ನಾಯಕ ಮೈಕ್ ಪೆನ್ಸ್, ಟ್ರಂಪ್ ಆಡಳಿತದಲ್ಲೇ ಉಪಾಧ್ಯಕ್ಷರಾಗಿದ್ದರು. ಹಾಗಾಗಿ, ಈಗ ಟ್ರಂಪ್ ವಿರುದ್ಧ ತಿರುಗಿ ಬಿದ್ದಿರುವುದು ಅಮೆರಿಕದ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ(US Presidential Election 2024).
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಲು, ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ಮುಂದಾಗಿದ್ದಾರೆ. ಅಲ್ಲದೇ, 2020ರ ಎಲೆಕ್ಷನ್ ಬಳಿಕ ಡೊನಾಲ್ಡ್ ಟ್ರಂಪ್ ನಡೆದುಕೊಂಡ ರೀತಿಗಾಗಿ ಅವರು ಮತ್ತೆಂದೂ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಬಾರದು ಎಂದು ಹೇಳುವು ಮೂಲಕ ತಮ್ಮ ಮಾಜಿ ಬಾಸ್ ವಿರುದ್ಧವೇ ಕಣಕ್ಕಿಳಿದಿದ್ದಾರೆ. ಡೊನಾಲ್ಡ್ ಟ್ರಂಪ್ ಕೂಡ ಅಮೆರಿಕ ಅಧ್ಯಕ್ಷರ ರೇಸಿನಲ್ಲಿದ್ದಾರೆ.
ಅಯೋವಾದ ಆಂಕೆನಿಯಲ್ಲಿ ತನ್ನ ಔಪಚಾರಿಕ ಪ್ರಚಾರವನ್ನು ಆರಂಭಿಸಿದ ಮೈಕ್ ಪೆನ್ಸ್ ಅವರು, 2020ರ ಅಧ್ಯಕ್ಷತೆಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬೈಡೆನ್ ಗೆದ್ದಿದ್ದರು. ಆದರೆ, ಅವರ ಈ ಗೆಲುವನ್ನು ಕಾಂಗ್ರೆಸ್‌ನಲ್ಲಿ ತಡೆ ಹಿಡಿಯಲು 2021 ಜನವರಿ 6ರಂದು ತನಗೆ ಟ್ರಂಪ್ ಕೇಳಿಕೊಂಡಿದ್ದರು ಎಂಬ ಮಾಹಿತಿಯನ್ನು ಪೆನ್ಸ್ ಹೊರ ಹಾಕಿದ್ದಾರೆ.
ಅಂದು ಏನಾಯ್ತು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಅಮೆರಿಕದ ಜನರಿಗಿದೆ. ಅಂದಿನ ಅಧ್ಯಕ್ಷರಾಗದ್ದ ಟ್ರಂಪ್ ಅವರು ಸಂವಿಧಾನ ಬೇಕೋ ಅಥವಾ ತಾವು(ಟ್ರಂಪ್) ಬೇಕೋ ಎಂದು ಆಯ್ಕೆ ಮಾಡಿಕೊಳ್ಳುವಂತೆ ನನಗೆ ಕೇಳಿದ್ದರು. ಈಗ ಮತದಾರರು ಅದೇ ಆಯ್ಕೆಯನ್ನು ಎದುರಿಸಲಿದ್ದಾರೆ. ನಾನು ಸಂವಿಧಾನವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಮತ್ತು ಯಾವಾಗಲೂ ಸಂವಿಧಾನ ಪರವೇ ಇರುತ್ತೇನೆ ಎಂದು ಮೈಕ್ ಪೆನ್ಸ್ ಹೇಳುತ್ತಿದ್ದಂತೆ ಸಮಾರಂಭ ನಡೆಯುತ್ತಿದ್ದ ಡೆಸ್ ಮೊಯಿನ್ಸ್ ಏರಿಯಾ ಸಮುದಾಯ ಕಾಲೇಜಿನಲ್ಲಿ ಜೋರಾಗಿ ಚಪ್ಪಾಳಿ ಕೇಳಿ ಬಂತು.
ಈ ಸುದ್ದಿಯನ್ನೂ ಓದಿ: Donald Trump: ನೀಲಿ ಚಿತ್ರ ತಾರೆಗೆ ಹಣ ನೀಡಿದ ಕೇಸ್; ಬಂಧನವಾಗಿ ಕೆಲವೇ ಕ್ಷಣದಲ್ಲಿ ಬಿಡುಗಡೆಯಾದ ಡೊನಾಲ್ಡ್ ಟ್ರಂಪ್
ಯಾರು ಸಂವಿಧಾನಕ್ಕಿಂತ ತಾವೇ ಶ್ರೇಷ್ಠರು ಎಂದು ಭಾವಿಸುತ್ತಾರೋ ಅವರು ಅಮೆರಿಕದ ಅಧ್ಯಕ್ಷರಾಗಬಾರದು ಎಂದು ನಾನು ನಂಬುತ್ತೇನೆ. ಬೇರೆಯವರನ್ನು ಸಂವಿಧಾನದ ಮೇಲೆ ಇರಿಸಲು ಕೇಳುವ ಯಾರಾದರೂ ಮತ್ತೆ ಅಮೆರಿಕದ ಅಧ್ಯಕ್ಷರಾಗಬಾರದು ಎಂದು ಮಾಜಿ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಹೇಳಿದರು.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.