Site icon Vistara News

Abaya Ban: ಫ್ರಾನ್ಸ್‌ ಶಾಲೆಗಳಲ್ಲಿ ಇನ್ನು ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸುವಂತಿಲ್ಲ; ಸರ್ಕಾರ ಕಠಿಣ ಕ್ರಮ

Abaya To Ban In France

France to ban female students from wearing abayas in state schools

ಪ್ಯಾರಿಸ್: ಇಸ್ಲಾಮಿಕ್‌ ರಾಷ್ಟ್ರವಾದ ಸೌದಿ ಅರೇಬಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳು ಅಬಯ (ಬುರ್ಖಾ ಮಾದರಿಯ ಉಡುಪು) ಧರಿಸಬಾರದು ಎಂದು ಆದೇಶ ಹೊರಡಿಸಿದ ಬೆನ್ನಲ್ಲೇ ಫ್ರಾನ್ಸ್‌ (France Government) ಕೂಡ ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಅಬಯ (Abaya Ban) ಧರಿಸಿ ಬರಬಾರದು ಎಂದು ಆದೇಶ ಹೊರಡಿಸಲು ಚಿಂತನೆ ನಡೆಸಿದೆ.

“ಫ್ರಾನ್ಸ್‌ ಶಾಲೆಗಳಲ್ಲಿ ಧರ್ಮವನ್ನು ಸಾರುವ ಯಾವುದೇ ಉಡುಪುಗಳನ್ನು ಧರಿಸಬಾರದು ಎಂಬ ನಿಯಮವಿದೆ. ಹಾಗಾಗಿ, ಶೀಘ್ರದಲ್ಲೇ ಫ್ರಾನ್ಸ್‌ ಸರ್ಕಾರಿ ಶಾಲೆಗಳಲ್ಲಿ ಅಬಯವನ್ನು ನಿಷೇಧಿಸಲಾಗುತ್ತದೆ. ಯಾರಾದರೂ ತರಗತಿಯ ಕೋಣೆಗೆ ಹೋದರೆ ವಿದ್ಯಾರ್ಥಿಗಳ ಧರ್ಮದ ಗುರುತು ಬೇರೊಬ್ಬರಿಗೆ ಕಾಣಬಾರದು. ಹಾಗಾಗಿ, ಸರ್ಕಾರವು ಅಬಯ ನಿಷೇಧಿಸಲು ತೀರ್ಮಾನಿಸಿದೆ” ಎಂದು ಶಿಕ್ಷಣ ಸಚಿವ ಗ್ಯಾಬ್ರಿಯೆಲ್‌ ಅಟಾಲ್‌ ತಿಳಿಸಿದ್ದಾರೆ.

ಫ್ರಾನ್ಸ್‌ನಲ್ಲಿ 2004ರಲ್ಲಿಯೇ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌ ಧರಿಸಿ ಶಾಲೆಗಳಿಗೆ ಆಗಮಿಸುವುದನ್ನು ನಿಷೇಧಿಸಿದೆ. ಇನ್ನು 2010ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಮುಖಕ್ಕೆ ಬಟ್ಟೆ ಕಟ್ಟಬಾರದು (ಹಿಜಾಬ್‌ ಮಾದರಿಯ ವಸ್ತ್ರ) ಎಂಬ ಆದೇಶವನ್ನೂ ಹೊರಡಿಸಿದೆ. ಇದಕ್ಕೆ ಫ್ರಾನ್ಸ್‌ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದರು. ಫ್ರಾನ್ಸ್‌ನಲ್ಲಿ 50 ಲಕ್ಷ ಮುಸ್ಲಿಮರಿದ್ದಾರೆ.

ಇದನ್ನೂ ಓದಿ: Tripura Hijab Row: ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು ಶಾಲೆ ಪ್ರವೇಶಿಸಲು ನಕಾರ; ಭುಗಿಲೆದ್ದ ವಿವಾದ

ಸೌದಿ ಅರೇಬಿಯಾದಲ್ಲೂ ನಿಷೇಧ

ಸೌದಿ ಶಿಕ್ಷಣ ಹಾಗೂ ತರಬೇತಿ ಮೌಲ್ಯಮಾಪನ ಆಯೋಗವು (ETEC) ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಹಿಜಾಬ್‌ ಧರಿಸಿ ಬರುವಂತಿಲ್ಲ ಎಂದು ಕೆಲ ತಿಂಗಳ ಹಿಂದಷ್ಟೇ ಆದೇಶ ಹೊರಡಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್‌ ಧರಿಸುವ ಬದಲು ಇನ್ನುಮುಂದೆ ಸಮವಸ್ತ್ರ ಧರಿಸಿ ಆಗಮಿಸಬೇಕು ಎಂದು ಆದೇಶಿಸಿದೆ. ನಾಲ್ಕು ವರ್ಷದ ಹಿಂದೆಯೇ ಅಂದರೆ, 2018ರಲ್ಲಿಯೇ ಸೌದಿ ಅರೇಬಿಯಾ ಬುರ್ಖಾವನ್ನು ಕಾನೂನುಬದ್ಧ ಅಲ್ಲ ಎಂದು ಘೋಷಿಸಿತ್ತು.

ಸೌದಿ ಅರೇಬಿಯಾದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಬರುವಾಗ ಕೂದಲು, ತೋಲು ಹಾಗೂ ಕುತ್ತಿಗೆ ಸೇರಿ ಇಡೀ ದೇಹವನ್ನು ಮುಚ್ಚುವ ಹಾಗಿರುವ ವಸ್ತ್ರವನ್ನು ಧರಿಸುತ್ತಾರೆ. ಇದಕ್ಕೆ ‘ಅಬಯ’ ಎಂದು ಕರೆಯುತ್ತಾರೆ. ಇದನ್ನೇ ಸೌದಿ ನಿಷೇಧಿಸಿದೆ. ಹಿಜಾಬ್‌ ವಿರುದ್ಧ ಇರಾನ್‌ನಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು. ಆದರೆ, ಕರ್ನಾಟಕದಲ್ಲಿ ಮಾತ್ರ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿದೆ.

Exit mobile version